• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ambareesh Death Anniversary: ಅಂಬಿ ಇಲ್ಲದ ನೋವು ಹೊರಹಾಕಿದ ಸುಮಲತಾ: ಅಪ್ಪಾಜಿಯನ್ನು ಸ್ಮರಿಸಿದ ದರ್ಶನ್​..!

Ambareesh Death Anniversary: ಅಂಬಿ ಇಲ್ಲದ ನೋವು ಹೊರಹಾಕಿದ ಸುಮಲತಾ: ಅಪ್ಪಾಜಿಯನ್ನು ಸ್ಮರಿಸಿದ ದರ್ಶನ್​..!

2ನೇ ಪುಣ್ಯ ತಿಥಿಯಂದು ಅಂಬಿಯನ್ನು ಸ್ಮರಿಸಿದ ಸುಮಲತಾ ಹಾಗೂ ದರ್ಶನ್​

2ನೇ ಪುಣ್ಯ ತಿಥಿಯಂದು ಅಂಬಿಯನ್ನು ಸ್ಮರಿಸಿದ ಸುಮಲತಾ ಹಾಗೂ ದರ್ಶನ್​

ಸ್ಯಾಂಡಲ್​ವುಡ್​ ರೆಬೆಲ್​ ಸ್ಟಾರ್ ಅಂಬರೀಷ್ ಅವರು ಅಗಲಿ ಇಂದಿಗೆ ಎರಡು ವರ್ಷ. ಅಂಬರೀಷ್​ ಅವರ ಅಗಲಿಕೆ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿತ್ತು. ಇಂದು ಅವರ  2ನೇ ವರ್ಷದ ಪುಣ್ಯಸ್ಮರಣೆ. ಬೆಳಗ್ಗೆ 9 ಗಂಟೆಗೆ ಸುಮಲತಾ ತಮ್ಮ ಮಗ ಅಭಿಷೇಕ್​ ಅಂಬರೀಷ್​ ಅವರೊಂದಿಗೆ ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇವರ ಜೊತೆಗೆ ಜೈ ಜಗದೀಶ್, ವಿಜಯ ಲಕ್ಷ್ಮಿ ಸಿಂಗ್​ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪೂಜೆಯಲ್ಲಿ ಭಾಗಿಯದರು.

ಮುಂದೆ ಓದಿ ...
  • Share this:

ಸ್ಯಾಂಡಲ್​ವುಡ್​ ರೆಬೆಲ್​ ಸ್ಟಾರ್ ಅಂಬರೀಷ್ ಅವರು ಅಗಲಿ ಇಂದಿಗೆ ಎರಡು ವರ್ಷ. ಅಂಬರೀಷ್​ ಅವರ ಅಗಲಿಕೆ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿತ್ತು. ಇಂದು ಅವರ  2ನೇ ವರ್ಷದ ಪುಣ್ಯಸ್ಮರಣೆ. ಬೆಳಗ್ಗೆ 9 ಗಂಟೆಗೆ ಸುಮಲತಾ ತಮ್ಮ ಮಗ ಅಭಿಷೇಕ್​ ಅಂಬರೀಷ್​ ಅವರೊಂದಿಗೆ ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇವರ ಜೊತೆಗೆ  ದರ್ಶನ್​, ಜೈಜಗದೀಶ್, ವಿಜಯ ಲಕ್ಷ್ಮಿ ಸಿಂಗ್​ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವಾರು ಮಂದಿ ಪೂಜೆಯಲ್ಲಿ ಭಾಗಿಯದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಸುಮಲತಾ ಅವರು ಮಂಡ್ಯದ ಸಂಸದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿಸಿ ವಿವಾಹವಾಗಿದ್ದ ಬಾಳ ಸಂಗಾತಿಯನ್ನು ಕಳೆದುಕೊಂಡ ಸುಮಲತಾ ಅಂಬಿ  ಇಲ್ಲದೆ ಎರಡು ವರ್ಷಗಳನ್ನು ಕಳೆದಿದ್ದಾರೆ. ಅವರ ಪುಣ್ಯಸ್ಮರಣೆಯಂದು ಅಗಲಿದ ಗಂಡನಿಗಾಗಿ ಭಾವುಕರಾಗಿ ಒಂದು ಪತ್ರ ಬರೆದಿದ್ದಾರೆ. 


ಅಂಬರೀಷ್​ ಇಲ್ಲದ ಆ ಎರಡು ವರ್ಷಗಳನ್ನು ಕಳೆದಿರುವ ಸುಮಲತಾ ಅವರು ತಮ್ಮ ದುಖಃವನ್ನು ಪತ್ರದ ಮೂಲಕ ಹೊರ ಹಾಕಿದ್ದಾರೆ. 'ಪದೇ ಪದೇ ನಿನ್ನ ಮಾತು ಕೇಳಲೆಂದು ಕಿವಿ ಮುಚ್ಚುತ್ತೇನೆ, ನಿನ್ನ ನೋಡಲೆಂದು ಕಣ್ಣು ಮುಚ್ಚುತ್ತೇನೆ. ಆದರೆ ನನ್ನ ಹೃದಯವನ್ನು ಮುಚ್ಚಲು ಸಾಧ್ಯವಿಲ್ಲ. ಈ ಅಗಾದ ಪ್ರೀತಿಯನ್ನು ಹಾಗೂ ನಿನ್ನ ನೆನಪುಗಳನ್ನು ಹಿಡಿದಿಟ್ಟುಕೊಳ್ಳಬೇಕೆಂದಬ ಹಂಬಲ. ಆದರೆ ಈ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲು ಯಾವುದೇ ಹೃದಯಕ್ಕೆ ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ಸದಾ ಮೆಲುಕು ಹಾಕುತ್ತೇನೆ. ನಾನು ಪ್ರತಿ ಸಲ ತೆಗೆದುಕೊಳ್ಳುವ ಉಸಿರಿನಲ್ಲೂ ನೀವು ಇರುತ್ತೀರಿ. ನಿಮ್ಮ ಪ್ರೀತಿಯೇ ನನಗೆ ಶಕ್ತಿ ಹಾಗೂ ಧೈರ್ಯ. ನನ್ನ ಜೀವಿದಲ್ಲಿ ಏಳು ಬೀಳು ಕಂಡಾಗ ನನಗೆ ಧೈರ್ಯ ನೀಡುವುದೇ ನಿಮ್ಮ ಪ್ರೀತಿ' ಎಂದು ದೀರ್ಘವಾಗಿ ಮನದಾಳದ ಮಾತುಗಳನ್ನು ಹಚಿಕೊಂಡಿದ್ದಾರೆ ಸುಮಲತಾ.




ದರ್ಶನ್​ ಅವರನ್ನು ಅಂಬರೀಷ್​ ದೊಡ್ಡ ಮಗನಂತೆ ನೋಡಿಕೊಳ್ಳುತ್ತಿದ್ದರು. ದರ್ಶನ್​ ಸಹ ಅಂಬಿಯನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಕೇವಲ ಮಾತಿಗೆ ಅಪ್ಪಾಯಿ ಎಂದು ಹೇಳದೆ, ಮಾತಿನಂತೆಯೇ ಅಂಬಿಗೆ ತಂದೆಯ ಸ್ಥಾನ ಕೊಟ್ಟಿದ್ದರು ದರ್ಶನ್​. ಅಂಬಿ ಅಗಲಿದಾಗ ದರ್ಶನ್​ ವಿದೇಶದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ವಿಷಯ ತಿಳಿದ ತಕ್ಷಣ ಮರಳಿದ ದಚ್ಚು, ಮುಂದೆ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದರು.


ಇಂದು ಅಗಲಿದ ಹಿರಿಯ ಜೀವ ಅಪ್ಪಾಜಿಯನ್ನು ನೆನೆದು ಟ್ವೀಟ್​ ಮಾಡಿದ್ದಾರೆ ಡಿಬಾಸ್​.  ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಅವರ ನೇರ ನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದಿದ್ದಾರೆ.


ಇದನ್ನೂ ಓದಿ: Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!


ನಂತರ ಮಂಡ್ಯಕ್ಕೆ ಹೊರಡಲಿರುವ ಸಂಸದೆ ಸುಮಲತಾ ಅಂಬರೀಶ್, ಮದ್ದೂರಿನ ಹೊಟ್ಟೇಗೌಡನದೊಡ್ಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಇದರಲ್ಲಿ ದರ್ಶನ್​ ಸಹ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.  ಬಳಿಕ ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಸುಮಲತಾ.

Published by:Anitha E
First published: