Amazon is Hiring: ಈ ವರ್ಷ 8,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಅಮೆಜಾನ್

Amazon is Hiring: ಭಾರತದಲ್ಲಿ ಅಮೆಜಾನ್ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದ್ದು, ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಾಗಿದೆ. ಭಾರತದಲ್ಲಿ ತನ್ನ ಮೊದಲ ವೃತ್ತಿ ದಿನ ಸೆಪ್ಟೆಂಬರ್ 16ರಂದು ಒಂದು ಅತ್ಯಾಕರ್ಷಕ ಕಾರ್ಯಕ್ರಮ ನಡೆಸಲು ಅಮೆಜಾನ್ ಪ್ಲ್ಯಾನ್ ಮಾಡಿಕೊಂಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  Amazon is Hiring: ಅಮೆಜಾನ್ ಕಂಪನಿಯು(Amazon Company) ಈ ವರ್ಷ ಭಾರತದಾದ್ಯಂತ ಸುಮಾರು 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇರವಾಗಿ ನೇಮಿಸಿಕೊಳ್ಳಲಿದೆ. ದೇಶದ ಸುಮಾರು 35 ನಗರಗಳಲ್ಲಿ ಕಾರ್ಪೋರೇಟ್(Corporate), ಟೆಕ್ನಾಲಜಿ(Technology), ಕಸ್ಟಮರ್ ಸರ್ವೀಸ್(Customer Service) ಮತ್ತು ಆಪರೇಷನ್ ರೋಲ್ಸ್(Operation Roles)​(ಕಾರ್ಯಾಚರಣೆ ಪಾತ್ರ) ಹೀಗೆ ವಿವಿಧ ಕಾರ್ಯಕ್ಷೇತ್ರಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ದೇಶಾದ್ಯಂತ ಸುಮಾರು 35 ನಗರಗಳಲ್ಲಿ 8,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಸಿಲಿಕಾನ್ ಸಿಟಿ ಬೆಂಗಳೂರು(Bengaluru) ಸೇರಿದಂತೆ, ಹೈದ್ರಾಬಾದ್, ಚೆನ್ನೈ, ಗುರ್​ಗಾಂವ್, ಮುಂಬೈ, ಕೊಲ್ಕತ್ತಾ, ನೋಯ್ಡಾ, ಅಮೃತಸರ, ಅಹಮದಾಬಾದ್, ಭೋಪಾಲ್, ಕೊಯಮತ್ತೂರ್, ಜೈಪುರ, ಕಾನ್ಪುರ, ಲೂಧಿಯಾನ, ಪುಣೆ ಮತ್ತು ಸೂರತ್​ ನಗರಗಳಲ್ಲಿ ಉದ್ಯೋಗಿಗಳ ನೇರ ನೇಮಕಾತಿ ನಡೆಯಲಿದೆ ಎಂದು ಹೇಳಿದ್ದಾರೆ.

  ಈ ಉದ್ಯೋಗಾವಕಾಶಗಳು ಕಾರ್ಪೋರೇಟ್, ಟೆಕ್ನಾಲಜಿ, ಕಸ್ಟಮರ್ ಸರ್ವೀಸ್ ಮತ್ತು ಆಪರೇಶನ್ ರೋಲ್ಸ್​ ಕಾರ್ಯಕ್ಷೇತ್ರಗಳಲ್ಲಿ ಹರಡಿಕೊಂಡಿಕೊಂಡಿವೆ ಎಂದು ಅಮೆಜಾನ್​ ಹೆಚ್​ಆರ್​ ಲೀಡರ್​-ಕಾರ್ಪೋರೇಟ್​, APAC ಮತ್ತು MENA ದೀಪ್ತಿ ವರ್ಮಾ ಪಿಟಿಐಗೆ ತಿಳಿಸಿದ್ದಾರೆ.

  ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ

  ನಾವು ಮೆಶಿನ್ ಲರ್ನಿಂಗ್ ಅಪ್ಲೈಡ್​ ಸೈನ್ಸ್​​ಗೂ ಕೂಡ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಸಪೋರ್ಟ್​ ಫಂಕ್ಷನ್​​ಗಳಾದ ಹೆಚ್​ಆರ್, ಫೈನಾನ್ಸ್​ ಲೀಗಲ್.. ಹೀಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಿದ್ದೇವೆ ಎಂದು ದೀಪ್ತಿ ವರ್ಮಾ ಹೇಳಿದರು.

  ಕಂಪನಿಯು ಭಾರತದಲ್ಲಿ 2025ರ ಹೊತ್ತಿಗೆ 20 ಲಕ್ಷ ಉದ್ಯೋಗಾವಕಾಶಗಳನ್ನು ತೆರೆಯುವ ಉದ್ದೇಶ ಹೊಂದಿದೆ. ನೇರ ಮತ್ತು ಪರೋಕ್ಷ ಹುದ್ದೆಗಳೆರಡೂ ಸೇರಿವೆ. ಈಗಾಗಲೇ 10 ಲಕ್ಷ ಡೈರೆಕ್ಟ್​​ ಮತ್ತು ಇನ್​ಡೈರೆಕ್ಟ್​ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.

  ಕೋವಿಡ್​ ಬಿಕ್ಕಟ್ಟಿನ ಸಮಯದಲ್ಲೂ ಸಹ ಅಮೆಜಾನ್​ ಸುಮಾರು 3 ಲಕ್ಷ ಜನರಿಗೆ ಉದ್ಯೋಗ ನೀಡಿತ್ತು. ಕೊರೋನಾ ಸಮಯವಾಗಿದ್ದರಿಂದ ಆಯ್ಕೆ ಪ್ರಕ್ರಿಯೆ ಎಲ್ಲವೂ ವರ್ಚುಯಲ್(ಆನ್​ಲೈನ್) ಮಾದರಿಯಲ್ಲೇ ಇತ್ತು ಎಂದರು.

  ಏತನ್ಮಧ್ಯೆ ಭಾರತದಲ್ಲಿ ಅಮೆಜಾನ್ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದ್ದು, ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಾಗಿದೆ. ಭಾರತದಲ್ಲಿ ತನ್ನ ಮೊದಲ ವೃತ್ತಿ ದಿನ ಸೆಪ್ಟೆಂಬರ್ 16ರಂದು ಒಂದು ಅತ್ಯಾಕರ್ಷಕ ಕಾರ್ಯಕ್ರಮ ನಡೆಸಲು ಅಮೆಜಾನ್ ಪ್ಲ್ಯಾನ್ ಮಾಡಿಕೊಂಡಿದೆ.

  ಈ ವರ್ಚುಯಲ್ ಮತ್ತು ಇಂಟರ್​ ಆ್ಯಕ್ಟೀವ್​ ಈವೆಂಟ್​​ ಅಮೆಜಾನ್​ ಲೀಡರ್​ಶಿಪ್ ಮತ್ತು ಉದ್ಯೋಗಿಗಳನ್ನು ಒಟ್ಟುಗೂಡಿಸುತ್ತದೆ. 21ನೇ ಶತಮಾನದಲ್ಲಿ ಭಾರತವು ತನ್ನ ನೈಜ ಸಾಮರ್ಥ್ಯವನ್ನು ಹೊರಹಾಕಲು ಅಮೆಜಾನ್​​​ ಕಂಪನಿಯು ತನ್ನ ಬದ್ಧತೆಯಲ್ಲಿ ಹೇಗೆ ದೃಢವಾಗಿದೆ ಎಂಬುದನ್ನು ಹಂಚಿಕೊಳ್ಳುತ್ತದೆ ಎಂದು ವರ್ಮಾ ಹೇಳಿದರು.

  ಇದನ್ನೂ ಓದಿ:Jobs for Women: ಶೀಘ್ರದಲ್ಲೇ 10 ಸಾವಿರ ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ ಕಂಪನಿ..!

  ಅಮೆಜಾನ್ ವಿಶ್ವಾದ್ಯಂತ 55,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಚಿಂತನೆ ಮಾಡಿದೆ. ಅಮೆರಿಕಾದಲ್ಲಿ ಸುಮಾರು 40,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ.

  ಪ್ರಸ್ತುತ ಅಮೆಜಾನ್​ ಎಂಜಿನಿಯರಿಂಗ್, ಅಪ್ಲೈಡ್​ ಸೈನ್ಸಸ್​, ಬಿಸಿನೆಸ್ ಮ್ಯಾನೇಜ್​ಮೆಂಟ್​, ಸರಪಳಿ ಚೈನ್, ಕಾರ್ಯಾಚರಣೆಗಳು, ಹಣಕಾಸು, ಎಚ್​ಆರ್​​ನಿಂದ ವಿಶ್ಲೇಷಣೆಗಳು, ವಿಷಯ ರಚನೆ ಮತ್ತು ಸ್ವಾಧೀನ, ಮಾರ್ಕೆಟಿಂಗ್, ರಿಯಲ್ ಎಸ್ಟೇಟ್, ಕಾರ್ಪೋರೇಟ್ ಸೆಕ್ಯುರಿಟಿ, ವಿಡಿಯೋ, ಮ್ಯೂಸಿಕ್ ಹಾಗೂ ಇನ್ನೂ ಹಲವು ಕ್ಷೇತ್ರಗಳಲ್ಲಿ
  1 ಲಕ್ಷಕ್ಕೂ ಹೆಚ್ಚು ವೃತ್ತಿ ಪರರನ್ನು ನೇಮಿಸಿಕೊಂಡಿದೆ ಎಂದು ವರ್ಮಾ ಹೇಳಿದರು.

  ಅಮೆಜಾನ್ ಪ್ರಸ್ತುತ ವಿಶ್ವದಾದ್ಯಂತ 1.3 ದಶಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.  ಇದು ರೀಟೈಲ್​ ಪ್ರತಿಸ್ಪರ್ಧಿ ವಾಲ್ಮಾರ್ಟ್ ನಂತರ ಎರಡನೇ ಅತಿದೊಡ್ಡ ಕಂಪನಿಯಾಗಿದೆ.

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: