Amazon: ಕನ್ನಡ ಧ್ವಜದ ಚಿತ್ರವಿರುವ ಬಿಕಿನಿ ಸೇಲ್​ಗಿಟ್ಟ ಅಮೇಜಾನ್!; ಗೂಗಲ್ ಬಳಿಕ Amazonನಿಂದಲೂ ಕನ್ನಡಕ್ಕೆ ಅವಮಾನ

Kannada Flag Inner Wears: ಕೆನಡಾ ದೇಶದಲ್ಲಿ ಅಮೇಜಾನ್ ಆನ್​ಲೈನ್ ಶಾಪಿಂಗ್ ಸೈಟ್​ನಲ್ಲಿ ಕನ್ನಡ ಧ್ವಜವಾದ ಕೆಂಪು, ಹಳದಿ ಬಣ್ಣವಿರುವ ಜೊತೆಗೆ ಕರ್ನಾಟಕದ ಧ್ವಜದ ಲಾಂಛನವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ.

ಅಮೆಜಾನ್

ಅಮೆಜಾನ್

 • Share this:
  ಬೆಂಗಳೂರು (ಜೂನ್ 5): 2 ದಿನಗಳ ಹಿಂದೆ ಕನ್ನಡ ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಎಂದು ಗೂಗಲ್​ ಸರ್ಚ್​ನಲ್ಲಿ ತೋರಿಸುವ ಮೂಲಕ ಕನ್ನಡಿಗರ ವಿರೋಧವನ್ನು ಎದುರಿಸಿತ್ತು. ಇದೀಗ ಅಮೇಜಾನ್ ಕೂಡ ಇದೇ ರೀತಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗೂಗಲ್​ನಲ್ಲಿ ಕನ್ನಡ ಭಾಷೆಯ ಅವಹೇಳನ ಮಾಡಿ, ಕ್ಷಮೆ ಕೇಳಿದ ಬೆನ್ನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಆನ್​ಲೈನ್ ಶಾಪಿಂಗ್ ವೇದಿಕೆಯಾದ ಅಮೇಜಾನ್​ನಲ್ಲಿ ಕನ್ನಡ ಧ್ವಜದ ಬಣ್ಣದ ಬಿಕಿನಿಯನ್ನು ಮಾರಾಟಕ್ಕಿಡಲಾಗಿದೆ. ಕೆನಡಾ ದೇಶದಲ್ಲಿ ಅಮೇಜಾನ್ ಆನ್​ಲೈನ್ ಶಾಪಿಂಗ್ ಸೈಟ್​ನಲ್ಲಿ ಕನ್ನಡ ಧ್ವಜವಾದ ಕೆಂಪು, ಹಳದಿ ಬಣ್ಣವಿರುವ ಜೊತೆಗೆ ಕರ್ನಾಟಕದ ಧ್ವಜದ ಲಾಂಛನವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ.

  ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕರ್ನಾಟಕದ ಫ್ಲಾಗ್​ ಡಿಸೈನ್​ನ ಪ್ರಾಡಕ್ಟ್​ ಎಂದು ನಮೂದಿಸಲ್ಪಟ್ಟಿರುವ ಕನ್ನಡ ಧ್ವಜವಿರುವ ಮಹಿಳೆಯರ ಒಳಉಡುಪುಗಳನ್ನು ಸೇಲ್ ಮಾಡುತ್ತಿರುವುದಕ್ಕೆ ಅಮೇಜಾನ್​ಗೆ ಟ್ಯಾಗ್​ ಮಾಡಿ ವಿರೋಧಿಸಲಾಗಿದೆ.

  After Google Kannadigas angry on Amazon Shopping Website for Selling Kannada Flag Inner Wears in Amazon.
  ಕನ್ನಡ ಧ್ವಜದ ಚಿತ್ರವಿರುವ ಒಳ ಉಡುಪುಗಳು


  ಈಗ ಅಮೇಜಾನ್ ಸರದಿ,‌ ಮೊನ್ನೆ ಗೂಗಲ್ ನಾಳೆ ಇನ್ಯಾರೋ? ಒಟ್ಟಿನಲ್ಲಿ ಕನ್ನಡಿಗರ ಭಾವನೆಗಳ ಜೊತೆ ಆಡುವುದೆಂದರೆ ಇವರಿಗೆ ಸಂತೋಷ ಅನ್ಸುತ್ತೆ, ಅಮೆಜಾನ್ ಮೇಲೆ ಮುಗಿಬೀಳಬೇಕಾಗಿದ್ದು ಈಗ ಕನ್ನಡಿಗರ ಸರದಿ. ಇಂಡಿಯಾದಲ್ಲಿ ಇದು ಪೂರೈಕೆಯಿಲ್ಲ, ಕೆನಡಾ ದೇಶದಲ್ಲಿ ಸದ್ಯಕ್ಕೆ ಈ ಅವಾಂತರ ನಡೆದಿದೆ. ಕರ್ನಾಟಕದ ಹೆಸರು ಬಳಸಿ ಈ ಧ್ವಜದ ಚಿತ್ರವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ. ಕನ್ನಡಿಗರು Amazon Customer careಗೆ ಕರೆ ಮಾಡಿ‌ ಉಗಿಯಿರಿ, ಪ್ರಾಡಕ್ಟ್​ ರಿವ್ಯೂ, ಆ್ಯಪ್ ರಿವ್ಯೂಗೆ ನೆಗೆಟಿವ್ ರೇಟಿಂಗ್ ಕೊಡಿ, ಸಾಧ್ಯವಾದವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ Amazon ಮೇಲೆ ದೂರು ನೀಡಿ ಎಂದು ನಮ್ಮ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಮಾಡಬೇಕಾದ ಕಾರ್ಯ ಮಾಡುತ್ತೇವೆ! ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿ ಕರ್ನಾಟಕಕ್ಕೆ ಆದ ಅವಮಾನವನ್ನು ಸರಿಪಡಿಸೋಣ. ಇದು ಸಹಿಸೋಕೆ ಆಗದಿರುವಂತ ತಪ್ಪು, ಸಾವಿರಾರು ಕೋಟಿ ವ್ಯವಹಾರ ಮಾಡುವ ಅಮೇಜಾನ್​ಗೆ ಕನಿಷ್ಟ ಭಾವನೆಗಳಿಲ್ಲದಿರುವುದು ದುರಂತ ಎಂದು ರಾಜ್​ಕುಮಾರ್ ಅಭಿಮಾನಿಗಳ ಸಂಘದಿಂದ ಟ್ವೀಟ್ ಮಾಡಲಾಗಿದೆ.  ಇದನ್ನೂ ಓದಿ: Kannada Language | ಭಾರತದ ಅತ್ಯಂತ ಕೊಳಕು ಭಾಷೆ ಕನ್ನಡ!; ಗೂಗಲ್ ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು

  2 ದಿನಗಳ ಹಿಂದಷ್ಟೇ ಗೂಗಲ್​ನಲ್ಲಿ ವೆಬ್​ಸೈಟ್ ಲಿಂಕ್​ವೊಂದು ಕನ್ನಡ ಭಾರತದ ಅತ್ಯಂತ ಕೊಳಕು ಭಾಷೆ ಎಂದು ತೋರಿಸುತ್ತಿತ್ತು. ಭಾರತದ ಅಗ್ಲಿಯೆಸ್ಟ್ ಭಾಷೆ ಯಾವುದು ಎಂದು ಸರ್ಚ್ ಮಾಡಿದರೆ ಗೂಗಲ್​ನಲ್ಲಿ ಕನ್ನಡ ಎಂದು ತೋರಿಸುತ್ತಿತ್ತು. ಟ್ವಿಟ್ಟರ್​ನಲ್ಲಿ ಕನ್ನಡಿಗರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತುಕೊಂಡ ಗೂಗಲ್ ಕನ್ನಡದಲ್ಲಿಯೇ ಕ್ಷಮೆಯನ್ನೂ ಕೇಳಿತ್ತು.  ಹುಡುಕುವುದು ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್​ನೆಟ್​ನಲ್ಲಿ ನಿರ್ದಿಷ್ಟ ಹುಡುಕಾಟಕ್ಕೆ ಬರುವ ಫಲಿತಾಂಶ ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ, ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ಅದು ನಮ್ಮ ಗಮನಕ್ಕೆ ಬಂದಾಗ ನಾವು ತಕ್ಷಣಕ್ಕೆ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ, ನಮ್ಮ ಅಲ್ಗೊರಿದಂ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರೆಸುತ್ತೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚನೆ ಮಾಡುತ್ತೇವೆ ಎಂದು ಗೂಗಲ್​ ಕನ್ನಡದಲ್ಲಿಯೇ ಕ್ಷಮಾಪಣೆ ಕೇಳಿತ್ತು.

  ಇದೀಗ ಅಮೇಜಾನ್​ ಶಾಪಿಂಗ್ ಸೈಟ್​ನಲ್ಲಿ ಕನ್ನಡ ಧ್ವಜದ ಚಿತ್ರವಿರುವ ಬಿಕಿನಿ, ಅಂಡರ್​ವೇರ್​ಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಕನ್ನಡಿಗರು ಮತ್ತೆ ಆಕ್ರೋಶ ಹೊರಹಾಕಿದ್ದಾರೆ.
  Published by:Sushma Chakre
  First published: