ವಿಜಯಪುರ: ಇಂದು ಪಾಶ್ಚಿಮಾತ್ಯ (Western) ವಾದ್ಯಗಳ (instrument) ಪ್ರಭಾವದಿಂದ ದೇಶಿ ವಾದ್ಯಗಳು (Desi instrument) ತನ್ನ ಮೌಲ್ಯವನ್ನು (Value) ಕಳೆದು ಕೊಳ್ಳುತ್ತಿವೆ. ಬರೀ ಪ್ಲಾಸ್ಟಿಕ್ ವಾದ್ಯಗಳೆ (Plastic instrument) ಹೆಚ್ಚು ಕಂಡು ಬರುತ್ತಿವೆ. ಈ ಪ್ಲಾಸ್ಟಿಕ್ ವಾದ್ಯಗಳಿಗೆ ಜನರು (People) ಮಾರು ಹೋಗಿದ್ದು, ನಿಜವಾದ ಚರ್ಮ (Skin) ವಾದ್ಯವನ್ನೆ ಮರೆತು ಹೋಗಿದ್ದಾರೆ. ಅದರಲ್ಲಿ ಕರಡಿ ಮಜಲು (Bear skin instrument) ಎಂಬ ಚರ್ಮ ವಾದ್ಯದ ಕಲೆಯು ವಾದ್ಯ ಸಂಗೀತದ ಜನಪದ ಕಲೆಯಾಗಿದೆ (Folk art). ಇದು ಕೂಡ ಅವನತಿಯ ಅಂಚಿಗೆ ಬಂದು ನಿಂತಿದೆ.
ಇನ್ನು ಜೀವಂತವಾಗಿದೆ ಈ ಕರಡಿ ಮಜಲು ಕಲೆ
ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಈ ಕಲೆ ಇನ್ನು ಜೀವಂತವಾಗಿದೆ ಎಂದರೆ ತಪ್ಪಾಗುವುದಿಲ್ಲ. ಆಡು, ಚಿಗರೆಯ ಚರ್ಮದಿಂದ ಮಾಡಿದ ಚಿಕ್ಕ ಡೊಳ್ಳಿನ ಆಕಾರದಿಂದ ಕೂಡಿದ ಈ ಕರಡಿ ಚರ್ಮ ವಾದ್ಯವನ್ನು ಹಲವು ವರ್ಷಗಳಿಂದ ನಿರಂತರವಾಗಿ ಇಲ್ಲಿನ ಕರಡಿ ಬಂದುಗಳು ನುಡಿಸುತ್ತಾ ಬಂದಿದ್ದಾರೆ. ವಿಶೇಷವಾಗಿ ಕೆಂಬಾವಿ ಗ್ರಾಮದವರಾದ ಅಶೋಕ ಕರಡಿ ಮತ್ತು ಚನ್ನಮಲ್ಲಪ್ಪ ಕರಡಿ ಕುಟುಂಬದವರು ಕಳೆದ 450 ವರ್ಷಗಳಿಂದ ಈ ಚರ್ಮ ವಾದ್ಯವನ್ನು ನುಡಿಸುತ್ತಾ ಬಂದಿದ್ದಾರೆ. ಈ ಚರ್ಮ ವಾದ್ಯವನ್ನು ನುಡಿಸುತ್ತಾ ಹಲವು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
"ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್" ನಲ್ಲಿ ಹೆಸರು ಗಿಟ್ಟಿಸಿಕೊಂಡ ಕಲಾವಿದರು
ಅಶೋಕ ಕರಡಿ ಮತ್ತು ಚನ್ನಮಲ್ಲಪ್ಪ ಕರಡಿ ಎಂಬ ಕಲಾವಿದರು ಈ ಕರಡಿ ಚರ್ಮ ವಾದ್ಯದಿಂದ ಸ್ವರಗಳನ್ನು ಕಂಡು ಹಿಡಿಯಬಲ್ಲ ಅದ್ಭುತ ಕಲಾವಿರಾಗಿದ್ದಾರೆ. ಅಷ್ಟೆ ಅಲ್ಲದೆ ವಾದ್ಯದಿಂದ ಸ್ವರಗಳನ್ನು ಕಂಡು ಹಿಡಿದು ಹಾಳೆಯ ಮೇಲೆ ಬರೆಯುವ ಕಲೆಯನ್ನು ಹೊಂದಿದ್ದಾರೆ. ಈ ಮೂಲಕ "ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್"ಗೆ ಇವರಿಬ್ಬರು ಪಾತ್ರರಾಗಿದ್ದಾರೆ.
ಇದನ್ನು ಓದಿ: Vet Doctor: ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದು ಮದುವೆ ಮಾಡಿಸಿದ ಜನ
ಸ್ವರವನ್ನು ಕಾಗದಲ್ಲಿ ಮೂಡಿಸುತ್ತಾರೆ ಈ ಕಲಾವಿದರು
ನಾವೂ ಏನಾದರೂ ಒಂದು ಪದವನ್ನು ಬರೆದು ಕೊಟ್ಟರೆ ಆ ಪದವನ್ನು ಕರಡಿ ನುಡಿಸುವ ಕಲಾವಿದ ನುಡಿಸುತ್ತಾನೆ. ಆ ಸ್ವರವನ್ನು ಕೇವಲ ಚರ್ಮ ವಾದ್ಯದ ಶಬ್ದದಿಂದ ಮಾತ್ರ ನಿಖರವಾಗಿ ಗುರುತಿಸಿ ಸ್ವರವನ್ನು ಬರೆಯಬಲ್ಲ ಅದ್ಬುತ ಕಲೆಯನ್ನು ಈ ಕರಡಿ ಚರ್ಮ ವಾದ್ಯದ ಕಲಾವಿದರು ಮೈಗೂಡಿಸಿಕೊಂಡಿದ್ದಾರೆ.
ಬಾಲಕರು ಮೈಗೂಡಿಕೊಳ್ಳುತ್ತಿದ್ದಾರೆ ಕರಡಿ ಚರ್ಮ ವಾದ್ಯ
ಇನ್ನು ಈ ಇಬ್ಬರ ಕಲೆಯನ್ನು ರಾಜ್ಯದಲ್ಲಿಯೇ ಹೆಸರು ಪಡೆದಿದ್ದು, ವಿವಿಧ ಸಭೆ ಸಮಾರಂಭಗಳಲ್ಲಿ ಇವರು ಭಾಗವಹಿಸುತ್ತಾರೆ. ಇನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮುವಾರ ಕರಡಿ ಮಜಲಿನ ಕಲಾವಿದರು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇನ್ನು ಇವರ ಕಲೆಗೆ ಪ್ರಭಾವಗೊಂಡ ಈ ಗ್ರಾಮದ ಬಾಲಕರು ಕಲೆಯನ್ನು ಮೈಗೂಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಮಹಾಲಿಂಗಪುರದ ಕರಡಿ ಚರ್ಮ ವಾದ್ಯದ ಇತಿಹಾಸ
ಮುಧೋಳದ ರಾಜ್ಯ ಮಾಲವಡಿ ರಾವ್ ಘೋರ್ಪಡೆ ಸಮಾರಂಭವನ್ನು ಏರ್ಪಡಿಸಿದಾಗ ಆನೆಯ ಮೇಲೆ ಕುಳಿತು ಬರುತ್ತಿರುತ್ತಾನೆ. ಆ ಸಂದರ್ಭದಲ್ಲಿ ಆನೆ ಮದವೇರಿ ಅಟ್ಟಹಾಸ ಮೆರೆಯುತ್ತಿದ್ದಾಗ ಮಾವುತರಿಗೂ ಕೂಡ ಆನೆಯ ಮದ ಇಳಿಸಲು ಸಾಧ್ಯವಾಗುವುದಿಲ್ಲಾ. ಆನರು ದಿಕ್ಕಾಪಾಲಾಗಿ, ತಮ್ಮ ಪ್ರಾಣ ಭಯಕ್ಕಾಗಿ ಅಲ್ಲಿಂದ ಕಾಲ್ಕಿತ್ತು ಓಡು ತೊಡಗುತ್ತಾರೆ. ಆಸಂದರ್ಭದಲ್ಲಿ ಘೋರ್ಪಡೆ ರಾಜನು ನನ್ನನ್ನು ಕಾಪಾಡಿ ಎಂದು ಬೇಡಿಕೊಂಡಾಗ ಕರಡಿ ಚರ್ಮ ವಾದ್ಯದ ನಾದಕ್ಕೆ ಈ ಆನೆಯು ಶಾಂತವಾಗಿ ನಿಲ್ಲುತ್ತದೆ. ಹೀಗೆ ಮದವೇರಿದ ಆನೆಯನ್ನು ನಿಂತ್ರಣಕ್ಕೆ ತರಬಲ ಅದ್ಭುತ ಕರಡಿ ವಾದ್ಯವು ಜನಪ್ರೀಯವಾಘಿದೆ ಎಂಬುದುಇತಿಹಾಸದಿಂದ ತಿಳಿದು ಬರುತ್ತಿದೆ.
ಇದನ್ನು ಓದಿ: Chamrajnagar: ಶಾಲೆಗೆ ಮಕ್ಕಳು ಚಕ್ಕರ್ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್, ಸ್ಕೂಲ್ಗೆ ಉಚಿತ ಕುದುರೆ ಸವಾರಿ!
ನಾಡಿನಾದ್ಯಂತ ಅನಾವರಣಗೊಂಡಿದೆ ಇವರ ಕಲೆ
ಒಟ್ಟಿನಲ್ಲಿ ಅಶೋಕ ಕರಡಿ ಮತ್ತು ಚನ್ನಮಲ್ಲಪ್ಪ ಕರಡಿ ಕುಟುಂಬದವರು ನಿರಂತರವಾಗಿ ಕರಡಿ ಚರ್ಮ ವಾದ್ಯ ನುಡಿಸಿ ತಮ್ಮ ಕಲೆಯ ಮೂಲಕ ನಾಡಿದಾದ್ಯಂತ ಹೆಸರುವಾಸಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ