HD Devegowda : ಉಪ ಸಮರದಲ್ಲೂ ಚುಕ್ಕಾಣಿ ಹಿಡಿಯದ `ದಳಪತಿ’ಗಳು: ಇನ್ನೂ ಜೀವಂತವಾಗಿದ್ದೇನೆ ಎಂದ ದೇವೇಗೌಡ

HD Devegowda : ಮತದಾರ ಹಾನಗಲ್(Hangal)​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ಕೈ ಹಿಡಿದರೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಹಾರ ಹಾಕಿದ್ದಾರೆ.  ಜೆಡಿಎಸ್​ ಪಕ್ಷವೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತು. ಆದರೆ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್​ ಪರಾಭವಗೊಂಡಿದೆ.

ಹೆಚ್.ಡಿ.ದೇವೇಗೌಡ

ಹೆಚ್.ಡಿ.ದೇವೇಗೌಡ

  • Share this:
ರಾಜ್ಯದ ಉಪಸಮರದ ಫಲಿತಾಂಶ ಹೊರಬಿದ್ದಿದ್ದು, ಅಧಿಕೃತ ಘೋಷಣೆಯೊಂದು ಬಾಕಿ ಇದೆ.  ಸಿಂದಗಿ(Sindagi) ಯಲ್ಲಿ ಬಿಜೆಪಿ(Bjp) ಪಾರುಪತ್ಯ ಸಾಧಿಸಿದೆ. ಇತ್ತ ಹಾನಗಲ್​ನಲ್ಲಿ ಜನರೆಲ್ಲ ‘ಕೈ’ ಹಿಡಿದಿದ್ದಾರೆ.  ಆದರೆ ಅಧಿಕೃತ ಘೋಷಣೆಯೊಂದು ಬಾಕಿಯಾದೆ, ಮೂರು ಪಕ್ಷಗಳ ನಾಯಕರೂ ಸಹ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಮತದಾರ ಹಾನಗಲ್(Hangal)​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ಕೈ ಹಿಡಿದರೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಹಾರ ಹಾಕಿದ್ದಾರೆ.  ಜೆಡಿಎಸ್​ ಪಕ್ಷವೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತು. ಆದರೆ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್​ ಪರಾಭವಗೊಂಡಿದೆ. ಸಿಂದಗಿ (Sindagi  By Election) ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಮಲ ಅರಳಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ, ಬಿಜೆಪಿ ರಮೇಶ್ ಭೂಸನೂರು (Ramesh bhusanuru) ಜಯದ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,680 ಮತ ಪಡೆದ್ರೆ, ಜೆಡಿಎಸ್ ನ ನಾಜೀಯಾ ಅಂಗಡಿ 4,353 ಮತ ಪಡೆದ್ರೆ, ಗೆದ್ದ ಅಭ್ಯರ್ಥಿ ರಮೇಶ್ ಭೂಸನೂರು 93,865 ಮತ ಪಡೆದಿದ್ದಾರೆ. ಬರೋಬ್ಬರಿ  31,185 ಮತಗಳ ಭಾರೀ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು ಇತ್ತ ಹಾವೇರಿಯಲ್ಲಿ ಕಾಂಗ್ರೆಸ್​ ಶ್ರೀನಿವಾಸ್ ಮಾನೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಜೆಡಿಎಸ್​ ಮಾತ್ರ ಪ್ರಾಬಲ್ಯ ಮೆರೆಯುವಲ್ಲಿ ವಿಫಲವಾಗಿದೆ. 

ಸೋಲಿನ ಬಗ್ಗೆ ದೇವೇಗೌಡ  ಪ್ರತಿಕ್ರಿಯೆ

ಉಪ ಸಮರದ ಫಲಿತಾಂಶದ ಬಗ್ಗೆ ದೇವೇಗೌಡ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಂದು ಉಪಚುನಾವಣೆಗಲ ಪ್ರಚಾರಕ್ಕೆ ಹೋದವನಲ್ಲ. ಆದರೂ ಸಿಂದಗಿ ಆದರೆ ಸಿಂದಗಿ ಉಪಚುನಾವಣೆ ಹೋಗಿದ್ದೆ.ಸಿಂದಗಿ ಜನರು ಕಷ್ಟದಲ್ಲಿದ್ದರು, ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು.ಆ ಭಾಗದ ಜನರಿಗೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ. ಮನಗೊಳಿಯವ್ರು ಸಮಾಜವಾದಿ ಜನತಾ ಪಾರ್ಟಿಯಿಂದ ನಿಂತು ಸೋತರು. ಮತ್ತೆ ನಮ್ಮ ಪಕ್ಷಕ್ಕೆ ಬಂದರು, ಗೆದ್ದರು ಅವರನ್ನು  ಮಂತ್ರಿ ಮಾಡಿದ್ದೆವು.ಆತನ ಮಗ ಕಾಂಗ್ರೆಸ್ ಗೆ ಹೋಗಿದ್ದನ್ನು ಚರ್ಚೆ ಮಾಡಲ್ಲ. ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಆದರೆ ಬಿಜೆಪಿ, ಕಾಂಗ್ರೆಸ್​ ಪಕ್ಷ ಹಣದ ಹೊಳೆ ಹರಿಸಿದ್ದಾರೆ ಎಂದು ದೇವೇಗೌಡ ಕಿಡಿಕಾರಿದ್ದಾರೆ.

ಇದನ್ನು ಓದಿ :ಸಿಂದಗಿಯಲ್ಲಿ ಬಿಜೆಪಿ, ಹಾನಗಲ್​ನಲ್ಲಿ ಕಾಂಗ್ರೆಸ್​ ಗೆಲುವು ಬಹುತೇಕ ನಿಶ್ಚಿತ; ಘೋಷಣೆಯೊಂದೇ ಬಾಕಿ

ಇನ್ನೂ ಜೀವಂತವಾಗಿದ್ದೇನೆ ಎಂದ ಎಚ್​ಡಿಡಿ

ಇನ್ನೂಈ ಫಲಿತಾಂಶದಿಂದ ನಾನು ಧೃತಿಗೆಟ್ಟಿಲ್ಲ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದೂವರೆ ಇದೆ. ರಾಜ್ಯ ಪ್ರವಾಸ ಮಾಡುತ್ತೇನೆ. ಬೈ ಎಲೆಕ್ಷನ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಯಾರೂ ಅಷ್ಟು ದುಡ್ಡು ಖರ್ಚು ಮಾಡೊಕಾಗಲ್ಲ.ನಾನು ಜೆಡಿಎಸ್ ಸೊರಗಿರುವ ಕ್ಷೇತ್ರ ಪ್ರವಾಸ ಮಾಡುತ್ತೇನೆ.
ಕುಮಾರಸ್ವಾಮಿ ಹಳೆ ಮೈಸೂರು‌ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ನಾನು ತಿಂಗಳಿಗೆ ಎರಡು ಜಿಲ್ಲೆ ಪ್ರವಾಸ ಮಾಡುತ್ತೇನೆ.  ಪ್ರತಿಯೊಂದು ಲೆಕ್ಕಾಚಾರ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಈ ದೇವೇಗೌಡ ಇನ್ನೂ ಜೀವಂತವಾಗಿದ್ದಾರೆ. ಪರೋಕ್ಷವಾಗಿ ಇದು ಅಸೆಂಬ್ಲಿ ಚುನಾವಣೆಗೆ ದಿಕ್ಸುಚಿ ಅಲ್ಲ ಎಂದ ಎಚ್​​ಡಿಡಿ ಹೇಳಿದ್ದಾರೆ.

ಇದನ್ನು ಓದಿ : ಸಿಂದಗಿಯಲ್ಲಿ ಅರಳಿದ ಕಮಲ; ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ಖಚಿತ

`ಸಿಂಧಗಿ ಕ್ಷೇತ್ರದ ಅಂತರದ ವಿಷಯ ಬೇಕಾಗಿಲ್ಲ’

ಇದೇ ವೇಳೆ ಸಿಂದಗಿಯಲ್ಲಿ ಜೆಡಿಎಸ್​ ಸ್ಥಾನದ ಬಗ್ಗೆ ಕೇಳಿದ್ದಕ್ಕೆ ಎಚ್​ಡಿಡಿ ಗರಂ ಆಗಿದ್ದಾರೆ, ಸಿಂಧಗಿ ಕ್ಷೇತ್ರದ ಅಂತರದ ವಿಷಯ ಬೇಕಾಗಿಲ್ಲ. ಈ ಹಿಂದೆ ಕಾಂಗ್ರೆಸ್​ ಅಲ್ಲಿ ಮೂರನೇ ಸ್ಥಾನದಲ್ಲಿತ್ತು. ಹಾನ್​ಗಲ್​ ಬಗ್ಗೆ ನಾನು ಮಾತನಾಡಲ್ಲ.ಸಿಂಧಗಿ, ಹಾನಗಲ್ ಬಿಟ್ಟರೆ ಬೇರೆಲ್ಲಾ ಮನೆಗೆ ಹೋಗ್ತಾರಾ?. ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​​ ಪಕ್ಷದ ಮಹತ್ವ ತಿಳಿಸುತ್ತೆವೆ ಎಂದು ದೇವೇಗೌಡ ಹೇಳಿದ್ದಾರೆ.
Published by:Vasudeva M
First published: