ಸರಕಾರದ ಅನುದಾನಕ್ಕಾಗಿ ನಕಲಿ ದಾಖಲೆ ಸೃಷ್ಟಿ; ರಂಗಕರ್ಮಿಗೆ ಎರಡು ವರ್ಷ ನಿಷೇಧ

ಆಲ್ತಾಫ್ ರಂಗಮಿತ್ರ ಎಂಬುವವರು ನಾಟಕೋತ್ಸವಕ್ಕಾಗಿ ಇಲಾಖೆಯಿಂದ ಅನುದಾನಕ್ಕಾಗಿ ಅರ್ಜಿ‌ ಸಲ್ಲಿಸಿದ್ದರು,

ಆಲ್ತಾಫ್ ರಂಗಮಿತ್ರ

ಆಲ್ತಾಫ್ ರಂಗಮಿತ್ರ

  • Share this:
ರಾಯಚೂರು(ಫೆ.4):  ಸರಕಾರದಿಂದ ಕಲಾವಿದರ ಪ್ರೋತ್ಸಾಹಕ್ಕಾಗಿ ನೀಡುವ ಹಣ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಅನುದಾನ ಪಡೆಯುವ ಯತ್ನಕ್ಕೆ ಮುಂದಾಗಿದ್ದ ಕಲಾವಿದರೊಬ್ಬರಿಗೆ ಎರಡು ವರ್ಷ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ‌ ನಿಷೇಧ ಹೇರಲಾಗಿದೆ.  ರಂಗ ಕಲಾವಿದರಾದ ಆಲ್ತಾಫ್ ರಂಗಮಿತ್ರ ಈ ವಾಮಾಮಾರ್ಗ ಅನುಸರಿಸಿದ ಕಲಾವಿದರು. ಸರಕಾರದಿಂದ ಸಿಗುವ ಪ್ರೋತ್ಸಾಹ ಹಣಕ್ಕಾಗಿ ನಾಟಕೋತ್ಸವ ಮಾಡಿರದಿದ್ದರೂ, ಮಾಡಿರುವುದಾಗಿ ಇವರು ದಾಖಲೆ ಸೃಷ್ಟಿಸಿ, ಅದನ್ನು ಪಡೆಯಲು ಮುಂದಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಕಲಾವಿದರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಲೆಗಳ ಪ್ರೋತ್ಸಾಹ ಕ್ಕಾಗಿ ಅನುದಾನ ನೀಡಲಾಗುತ್ತಿದೆ, ಈ ಅನುದಾನದಿಂದ ಕಲಾವಿದರು ತಮ್ಮ ಕಲೆಯನ್ನು ಮುಂದುವರಿಸಲು ಸಣ್ಣ ಸಹಾಯವಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಕಾರ್ಯಕ್ರಮ ನೀಡಿ ಕಾರ್ಯಕ್ರಮ ನಡೆಸಿದ ಬಗ್ಗೆ ಫೋಟೊಗಳು, ಅಗತ್ಯ ದಾಖಲೆಗಳನ್ನು ನೀಡಬೇಕು, ಈ ದಾಖಲೆಗಳ ಆಧಾರದಲ್ಲಿ ಇಲಾಖೆಯಿಂದ ಅನುದಾನ ನೀಡಲಾಗುತ್ತಿದೆ.

ಈ ಅನುದಾನಕ್ಕಾಗಿ ರಾಯಚೂರಿನ ಹಿರಿಯ ಕಲಾವಿದ ಆಲ್ತಾಫ್ ರಂಗಮಿತ್ರ ಎಂಬುವವರು ನಾಟಕೋತ್ಸವಕ್ಕಾಗಿ ಇಲಾಖೆಯಿಂದ ಅನುದಾನಕ್ಕಾಗಿ ಅರ್ಜಿ‌ ಸಲ್ಲಿಸಿದ್ದರು, 2020 ಫೆಬ್ರುವರಿ 14 ರಂದು ರಾಯಚೂರು ತಾಲೂಕಿನ ಸಂಕನೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಲ್ತಾಫ್ ರಂಗಮಿತ್ರ ಸಂಸ್ಥೆಯಿಂದ ಎರಡು ನಾಟಕಗಳ ಪ್ರದರ್ಶನದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಅದಕ್ಕೆ ಇಲಾಖೆಯಿಂದ ಅನುದಾನ ನೀಡಲು ಅರ್ಜಿ‌ ಸಲ್ಲಿಸಿದ್ದರು.

ನಾಟಕೋತ್ಸವಕ್ಕೆ ಅತಿಥಿ ಗಣ್ಯರನ್ನು ಕರೆದಿದ್ದೇವೆ ಎಂದು ಫೋಟೊ, ಆಹ್ವಾನ ಪತ್ರಿಕೆಗಳನ್ನು ಅರ್ಜಿಯೊಂದಿಗೆ ಅಂಟಿಸಿ ದಾಖಲೆ ನೀಡಿದ್ದಾರೆ. ಆದರೆ ಈ ದಾಖಲೆಗಳು ನಕಲಿ ಎನ್ನುವ ಅನುಮಾನದಿಂದಾಗಿ ಇಲಾಖೆಯಿಂದ ಪರಿಶೀಲನೆ ಮಾಡಿದಾಗ ಫೋಟೊಗಳನ್ನು ಕಂಪ್ಯೂಟರ್ ‌ನಲ್ಲಿ ಫೋರ್ಜರಿ ಮಾಡಿದ್ದಾರೆ, ಅಸಲಿ ಅಂದು ಸಂಕನೂರಿನಲ್ಲಿ ಕಾರ್ಯಕ್ರಮವೇ ನಡೆದಿಲ್ಲ, ಫೋಟೊಗಳಲ್ಲಿರುವ ಅತಿಥಿಗಳನ್ನು ಸಂಪರ್ಕಿಸಿದಾಗ ತಾವು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಿ.ಆರ್.ಟಿ ಹುಲಿರಕ್ಷಿತಾರಣ್ಯದಲ್ಲಿ ಹೂ ಬಿಟ್ಟ ಬಿದಿರು; ಏನಿದರ ಮುನ್ಸೂಚನೆ?

ಇದರಿಂದ ಕಲಾವಿದರು ಅನುದಾನಕ್ಕಾಗಿ ನಕಲಿ ದಾಖಲೆ ಸೃಷ್ಠಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ಕಾರಣಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ನೀಡಿದ್ದು, ಇಲಾಖೆಯು ಆಲ್ತಾಫ್ ರಂಗಮಿತ್ರ ಹಾಗು ಕಲಾವಿದರಾದ ಚಂದ್ರಶೇಖರ ಹಾಗೂ ಮತ್ತಣ್ಣರಿಗೆ ಎರಡು ವರ್ಷ ಇಲಾಖೆಯ ಕಾರ್ಯಕ್ರಮ ಗಳಿಗೆ ನಿಷೇಧ ಹೇರಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಯಚೂರಿನ ಸಹಾಯಕ ನಿರ್ದೇಶಕಿ ಮಂಗಳ ನಾಯಕ ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದ ಆಲ್ತಾಫ್ ರಂಗಮಿತ್ರ ನಾನು ರಾಜ್ಯೋತ್ಸವ ಪ್ರಶಸ್ತಿ ವಿಜೇತ, ನಿಗಿದಿತ ಸಮಯಕ್ಕೆ ನಾಟಕೋತ್ಸವ ನಡೆಸಲಾಗಿದೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯರು ವಿನಾಕಾರಣ ನಿಷೇಧ ಹೇರಿದ್ದಾರೆ, ಒಂದು ವೇಳೆ ನಾನು ತಪ್ಪು ಮಾಡಿದ್ದರೆ ನಾನು ನನ್ನ ರಾಜ್ಯೋತ್ಸವ ಪ್ರಶಸ್ತಿ ವಾಪಸ್ಸು ನೀಡುತ್ತೇನೆ ಎಂದು ಹೇಳಿದ ಅವರು ಇಲಾಖೆಯಲ್ಲಿಯ ಕಾರ್ಯಕ್ರಮಗಳ ಕುರಿತು ಮಾಹಿತಿ ಕೇಳಿದ್ದು ಮಾಹಿತಿ ನೀಡಿದರೆ ತಾವು ತಪ್ಪುಗಾರರಾಗುತ್ತೇವೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Published by:Seema R
First published: