• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mahadayi Issue: ಮಹದಾಯಿ ನೀರು ಪಡೆಯಲು ಸರ್ಕಾರದ ಮಾಸ್ಟರ್ ಪ್ಲಾನ್; ಕಾಂಗ್ರೆಸ್ ಪಾದಯಾತ್ರೆಗೂ ಮುನ್ನ ಘೋಷಣೆ

Mahadayi Issue: ಮಹದಾಯಿ ನೀರು ಪಡೆಯಲು ಸರ್ಕಾರದ ಮಾಸ್ಟರ್ ಪ್ಲಾನ್; ಕಾಂಗ್ರೆಸ್ ಪಾದಯಾತ್ರೆಗೂ ಮುನ್ನ ಘೋಷಣೆ

ಮಹದಾಯಿ ಯೋಜನೆ

ಮಹದಾಯಿ ಯೋಜನೆ

ಕಾಂಗ್ರೆಸ್​ ಬಾದಾಮಿಯಿಂದ ಕಣಕುಂಬಿ ವರೆಗೆ ಪಾದಯಾತ್ರೆ ಮಾಡೋ ಬಗ್ಗೆ ರೂಪರೇಷೆ ಮಾಡಿಕೊಂಡಿದೆ. ಇನ್ನೂ ಸರ್ಕಾರ ಸಹ ಮಹದಾಯಿ ಯೋಜನೆಯ ಪ್ಲ್ಯಾನ್ ಬದಲು ಮಾಡಿ, ಯೋಜನೆ ಅನುಷ್ಠಾನಕ್ಕೆ ಸದ್ದಿಲ್ಲದೇ ತಯಾರಿ ನಡೆಸಿದೆ.

  • Share this:

ಬೆಳಗಾವಿ (ಜುಲೈ 3): ಮಹದಾಯಿ, ಕಳಸಾ ಬಂಡೂರಿ (Mahadayi Kalasa Banduri) ಉತ್ತರ ಕರ್ನಾಟಕದ ಮಹತ್ವ ನೀರಾವರಿ ಯೋಜನೆ ಆಗಿದೆ.  ಈ ಯೋಜನೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಮಹದಾಯಿ ನೀರು ಪಡೆಯಲು ಉತ್ತರ ಕರ್ನಾಟಕ (Uttara Karnataka) ಜನರು ನಾಲ್ಕು ದಶಕಗಳಿಂದ ಹೋರಾಟ (Fight) ನಡೆಸುತ್ತಿದ್ದಾರೆ. ಮಹದಾಯಿ ನೀರಿಗಾಗಿ ಕರ್ನಾಟಕ, ‌ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ವ್ಯಾಜ್ಯವಿದೆ. ಮಹದಾಯಿ ನ್ಯಾಯಧೀಕರಣದಿಂದ 2015ರಲ್ಲಿ ಅಂತಿಮ ತೀರ್ಪು ಪ್ರಕಟ ಆಗಿದ್ದರು. ರಾಜ್ಯದ ಪಾಲಿನ ನೀರು ಪಡೆಯಲು ಕಾನೂನಿನ ತೊಡಕು ಇದೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಸರ್ಕಾರ ವೈಫಲ್ಯ ಎತ್ತಿ ಹಿಡಿಯಲು ಕಾಂಗ್ರೆಸ್ (Congress) ತಯಾರಿ ನಡೆಸಿದೆ. 


ಯೋಜನೆ ಅನುಷ್ಠಾನಕ್ಕೆ ಸದ್ದಿಲ್ಲದೇ ತಯಾರಿ


ಕಾಂಗ್ರೆಸ್​ ಬಾದಾಮಿಯಿಂದ ಕಣಕುಂಬಿ ವರೆಗೆ ಪಾದಯಾತ್ರೆ ಮಾಡೋ ಬಗ್ಗೆ ರೂಪರೇಷೆ ಮಾಡಿಕೊಂಡಿದೆ. ಇನ್ನೂ ಸರ್ಕಾರ ಸಹ ಮಹದಾಯಿ ಯೋಜನೆಯ ಪ್ಲ್ಯಾನ್ ಬದಲು ಮಾಡಿ, ಯೋಜನೆ ಅನುಷ್ಠಾನಕ್ಕೆ ಸದ್ದಿಲ್ಲದೇ ತಯಾರಿ ನಡೆಸಿದೆ.


ಗೋವಾ ಸರ್ಕಾರದಿಂದ ಪದೇ ಪದೇ ಅಡ್ಡಿ


ಮಹದಾಯಿ ನ್ಯಾಯಾಧೀಕರಣದಿಂದ 2015ರ ಆಗಸ್ಟ್ 14 ರಂದು ತೀರ್ಪು ಪ್ರಕಟವಾಗಿದೆ. ತೀರ್ಪಿನಲ್ಲಿ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದ್ದು, ಕಳಸಾ- 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಹಂಚಿಕೆ ಆಗಿದೆ. ಕಳಸಾ ನಾಲಾಗೆ ಕಣಕುಂಬಿ ಬಳಿ ಈಗಾಗಲೇ 5 km ಟನಲ್ ನಿರ್ಮಾಣ ಮಾಡಲಾಗಿದೆ.  ಇದರ ಜತೆಗೆ ಕಳಸಾ ನೀರು ಬಳಕೆಗೆ  ಕಳಸಾ, ಹಲತಾರ ಡ್ಯಾಂ ನಿರ್ಮಾಣದ ಅವಶ್ಯಕತೆ ಇದೆ. ಡ್ಯಾಂ ನಿರ್ಮಾಣದ ಜಮೀನು ಅರಣ್ಯ ‌ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ಕೇಂದ್ರ ‌ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಸಿಕಿಲ್ಲ. ಜತೆಗೆ ಗೋವಾ ಸರ್ಕಾರ ಪರಿಸರದ ನೆಪವೊಡ್ಡಿ ಪದೇ ಪದೇ ಅಡ್ಡಿ ಮಾಡುತ್ತಿದೆ.


ಇದನ್ನೂ ಓದಿ: BMTC ಬಸ್​ನಲ್ಲಿ ಇನ್ಮುಂದೆ ಕಂಡಕ್ಟರ್ ಇರೋದಿಲ್ಲ! ಟಿಕೆಟ್ ಪಡೆಯೋದು ಹೇಗೆ ಗೊತ್ತಾ?


ಸರಕಾರದಿಂದ 1 ಸಾವಿರ ಕೋಟಿ ಹಣ ಮೀಸಲು


ಬಂಡೂರಿ ನೀರು ಬಳಸಲು ಒಂದು ಡ್ಯಾಂ ಹಾಗೂ ಅರಣ್ಯ ಪ್ರದೇಶದಲ್ಲಿ ಟನಲ್ ನಿರ್ಮಾಣದ ಅವಶ್ಯಕತೆ ಇದೆ. ಅರಣ್ಯದಲ್ಲಿ ಕಾಮಗಾರಿಗೆ ಗೋವಾದಿಂದ ಪದೇ ಪದೇ ಕ್ಯಾತೆ. ಕೇಂದ್ರ ಪರಿಸರ, ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿಲ್ಲ. ಯೋಜನೆಗೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ 500 ಕೋಟಿ ಮೀಸಲು. ಬಸವರಾಜ ಬೊಮ್ಮಾಯಿ ಸರಕಾರದಿಂದ 1 ಸಾವಿರ ಕೋಟಿ ಹಣ ಬಜೆಟ್ ನಲ್ಲಿ ಮೀಸಲು ಇಡಲಾಗಿದೆ.


ಈ ಯೋಜನೆಗೆ 500ಹೆಕ್ಟರ್ ಪ್ರದೇಶದಲ್ಲಿ ಅರಣ್ಯ ನಾಶವಾಗೋ ಸಾಧ್ಯತೆ ‌ಇದೆ. ಯೋಜನೆ ಅನುಷ್ಠಾನ ನಿರಂತರವಾಗಿ ವಿಘ್ನಗಳು ಎದುರಾಗುತ್ತಿವೆ. ಶೀಘ್ರದಲ್ಲೇ ರಾಜ್ಯಕ್ಕೆ ನೀರು ತರುವ ಯೋಜನೆ ಘೋಷಣೆ ಮಾಡಲು ಪ್ಲ್ಯಾನ್ ಮಾಡಿದೆ. ಕಾಂಗ್ರೆಸ್ ಪಾದಯಾತ್ರೆ ಮೊದಲೇ ಹೊಸ ಯೋಜನೆ ಘೋಷಣೆ ಮಾಡೋ ಸಾಧ್ಯತೆ ಇದೆ.


ಇದನ್ನೂ ಓದಿ: Suicide: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು


ಜನರ ಒಲವು ಗಳಿಸಲು ಬಿಜೆಪಿ ಪ್ಲಾನ್


ಸಮಗ್ರ ಯೋಜನಾ ವರದಿ ಸಿದ್ದ ಮಾಡಲು ಅಧಿಕಾರಿಗಳ ತಂಡ ಈಗಾಗಲೇ ದೆಹಲಿಯಲ್ಲಿ ಬಿಡುಬಿಟ್ಟದೆ. ವರದಿ ಸಿದ್ದವಾದ ಬಳಿಕ ಕೇಂದ್ರದಿಂದ ಅನುಮತಿ ಪಡೆದು ಕಾಮಗಾರಿ. ರಾಜ್ಯದ ಅರಣ್ಯ ಪ್ರದೇಶ ಹಾಗೂ ಪೈಪ್ ಲೈನ್ ಮೂಲಕ ನೀರು ಪಡೆಯಲು ಯೋಜನೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅನುಮತಿ ಪಡೆಯಲು ಯೋಚನೆ.‌ ಉತ್ತರ ಕರ್ನಾಟಕದಲ್ಲಿ ಜನರ ಒಲವು ಗಳಿಸಲು ಬಿಜೆಪಿ ಪ್ಲ್ಯಾನ್. ಕಳೆದ ಅನೇಕ ವರ್ಷಗಳಿಂದ ಯೋಜನೆ ಜಾರಿ ಬಗ್ಗೆ ಬಿಜೆಪಿ ಭರವಸೆ ನೀಡುತ್ತಲೇ ಬಂದಿದೆ. ಮಾತು ಉಳಿಸಿಕೊಂಡು ಚುನಾವಣೆಯಲ್ಲಿ ಹೆಚ್ಚಿನ ಸಿಟ್ ಪಡೆಯಲು ಬಿಜೆಪಿ ಚಿಂತನೆ ಮಾಡಿದೆ.

Published by:Pavana HS
First published: