ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಬೆಂಗಳೂರು ಹಿಂದಿನ ಕಮಿಷನರ್​ ಅಲೋಕ್​ ಕುಮಾರ್

ಏತನ್ಮಧ್ಯೆ, ಅಲೋಕ್​ ಕುಮಾರ್ ಅವರು ತಮ್ಮ ಅಧಿಕಾರ ಬಳಿಸಿಕೊಂಡು ಕೆಲವು ಐಪಿಎಸ್​ ಅಧಿಕಾರಿಗಳ ಫೋನ್​ ಟ್ಯಾಪಿಂಗ್​ ಮಾಡಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಇದೀಗ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

HR Ramesh | news18
Updated:August 16, 2019, 12:54 PM IST
ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಬೆಂಗಳೂರು ಹಿಂದಿನ ಕಮಿಷನರ್​ ಅಲೋಕ್​ ಕುಮಾರ್
ಅಲೋಕ್ ಕುಮಾರ್
  • News18
  • Last Updated: August 16, 2019, 12:54 PM IST
  • Share this:
ಬೆಂಗಳೂರು: ಬೆಂಗಳೂರು ಕಮಿಷನರ್​ ಸ್ಥಾನದಿಂದ ವರ್ಗಾವಣೆ ಮಾಡಿದ್ದ ಬಿಜೆಪಿ ಸರ್ಕಾರದ ಆದೇಶ ಪ್ರಶ್ನೆ ಮಾಡಿ ಸಿಎಟಿಯಲ್ಲಿ ಅಲೋಕ್​ ಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ಅವರು ಹಿಂಪಡೆದಿದ್ದಾರೆ.

ಇಂದು ತಮ್ಮ ವಕೀಲರ ಮೂಲಕ ಅಲೋಕ್ ಕುಮಾರ್​ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಪರ ವಾದ ಮಂಡನೆಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಖುದ್ದಾಗಿ ಹಾಜರಾಗಿದ್ದರು. ಆದರೆ, ಅಲೋಕ್​ ಕುಮಾರ್ ಅವರೇ ತಮ್ಮ ಮೂಲ ಅರ್ಜಿಯನ್ನು ಹಿಂಪಡೆದಿದ್ದಾರೆ.

ಇದನ್ನು ಓದಿ: ಮೈತ್ರಿ ಸರ್ಕಾರದ ವೇಳೆ ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ, ಬೇಕಿದ್ದರೆ ಸೂಕ್ತ ತನಿಖೆ ನಡೆಸಲಿ; ಡಿ.ಕೆ.ಶಿವಕುಮಾರ್

ಮೈತ್ರಿ ಸರ್ಕಾರದ ಅವಧಿಯಲ್ಲಿ ಅಲೋಕ್​ ಕುಮಾರ್​ ಅವರನ್ನು ಜೂನ್​ನಲ್ಲಿ ಬೆಂಗಳೂರು ಪೊಲೀಸ್​ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಇದಾದ ಬಳಿಕ ಮೈತ್ರಿ ಸರ್ಕಾರ ಪತನಗೊಂಡು, ಬಿಜೆಪಿ ಸರ್ಕಾರ ರಚನೆಯಾಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ವರ್ಗಾವಣೆಗೊಂಡಿದ್ದ ಸಾಕಷ್ಟು ಅಧಿಕಾರಿಗಳನ್ನು ಸಿಎಂ ಬಿಎಸ್​ವೈ ವರ್ಗಾವಣೆ ಮಾಡಿದ್ದರು. ಅವರಲ್ಲಿ ಅಲೋಕ್​ ಕುಮಾರ್ ಅವರು ಕೂಡ ಒಬ್ಬರು. ಬೆಂಗಳೂರು ಕಮಿಷನರ್​ ಆಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಇವರನ್ನು ಸಶಸ್ತ್ರ ಮೀಸಲು ಪಡೆಗೆ ವರ್ಗಾವಣೆ ಮಾಡಲಾಯಿತು. ಇವರ ಸ್ಥಾನಕ್ಕೆ ಭಾಸ್ಕರ್​ ರಾವ್​ ಅವರನ್ನು ನೇಮಿಸಲಾಯಿತು. ಸರ್ಕಾರದ ಈ ವರ್ಗಾವಣೆ ಆದೇಶ ಪ್ರಶ್ನೆ ಮಾಡಿ ಅಲೋಕ್​ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು.

ಏತನ್ಮಧ್ಯೆ, ಅಲೋಕ್​ ಕುಮಾರ್ ಅವರು ತಮ್ಮ ಅಧಿಕಾರ ಬಳಿಸಿಕೊಂಡು ಕೆಲವು ಐಪಿಎಸ್​ ಅಧಿಕಾರಿಗಳ ಫೋನ್​ ಟ್ಯಾಪಿಂಗ್​ ಮಾಡಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಇದೀಗ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್​ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 
Loading...

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...