• Home
 • »
 • News
 • »
 • state
 • »
 • Bagalakote ಬಿವಿವಿ ಸಂಘಕ್ಕೆ ತಿರುಪತಿಯಲ್ಲಿ ಛತ್ರ ನಿರ್ಮಾಣಕ್ಕೆ ಜಾಗ ಮಂಜೂರು; ಹಕ್ಕುಪತ್ರ ವಿತರಣೆ

Bagalakote ಬಿವಿವಿ ಸಂಘಕ್ಕೆ ತಿರುಪತಿಯಲ್ಲಿ ಛತ್ರ ನಿರ್ಮಾಣಕ್ಕೆ ಜಾಗ ಮಂಜೂರು; ಹಕ್ಕುಪತ್ರ ವಿತರಣೆ

ಹಕ್ಕುಪತ್ರ ವಿತರಣೆ

ಹಕ್ಕುಪತ್ರ ವಿತರಣೆ

ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ 200 ಕೋಟಿ ರೂಪಾಯಿಗಳ ಅನುದಾನ ದಲ್ಲಿ ತಿರುಮಲ ತಿಮ್ಮಪ್ಪ ದೇವಾಲಯ ಬಳಿ ಬೃಹತ್ ಕರ್ನಾಟಕ ಭವನ ನಿರ್ಮಿಸಿಲಾಗಿದೆ. ಇದರಿಂದ ಈಗ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ನಿವೇಶನ ದೂರಕಿದಂತಾಗಿದೆ.

 • News18 Kannada
 • Last Updated :
 • Karnataka, India
 • Share this:

  ಬಾಗಲಕೋಟೆ (ಅ 17): ತಿರುಪತಿ ತಿಮ್ನಪ್ಪನ (Tirupati Thimnappa) ಸನ್ನಿಧಿಯಲ್ಲಿ ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಭವನ ನಿರ್ಮಾಣಕ್ಕಾಗಿ ಆಂಧ್ರಪ್ರದೇಶದ ಸರ್ಕಾರದದಿಂದ (Government of Andhra Pradesh) ನಿವೇಶನ ಹಂಚಿಕೆಯ ಪತ್ರವನ್ನು ವಿತರಿಸಲಾಯಿತು. ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು (Basaveshwar College of Engineering) ಆವರಣದಲ್ಲಿರುವ ನೂತನ ಬಿ ಇ ಸಿ ಸಭಾಂಗಣದಲ್ಲಿ ಜರುಗಿತು. ಆಂಧ್ರಪ್ರದೇಶದ ಹಣಕಾಸಿನ ಸಚಿವರಾದ ಬುಗ್ಗನಾ ರಾಜೇಂದ್ರನಾಥ ರೆಡ್ಡಿ ಹಾಗೂ ಟಿ ಟಿ ಡಿ ಅಧ್ಯಕ್ಷರಾದ ವೈ ವಿ ಸುಬ್ಬಾರೆಡ್ಡಿ ಅವರು ಬಸವೇಶ್ವರ ಸಂಘದ ಅಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರ ಮಾಡಲಾಯಿತು. 


  ತಿರುಪತಿಯಲ್ಲಿ ಛತ್ರ ನಿರ್ಮಾಣಕ್ಕೆ ಜಾಗ ಮಂಜೂರು


  ಇದೇ ವೇಳೆ ಬಿ ಇ ಸಿ ನೂತನ ಸಭಾಂಗಣದ ಉದ್ಘಾಟನೆ ಮಾಡಿದರು. ಸಮಾರಂಭಕ್ಕೆ ಚಾಲನೆ ನೀಡಿದ ಆಂಧ್ರಪ್ರದೇಶದ ಹಣಕಾಸಿನ ಸಚಿವರಾದ ಬುಗ್ಗನಾ ರಾಜೇಂದ್ರ ರೆಡ್ಡಿ ಮಾತನಾಡಿ, ತಿರುಪತಿ ತಿರುಮಲ ದೇವಸ್ಥಾನ ಬಳಿ 25 ವರ್ಷಗಳಿಂದಲೂ ಒಂದೇ ಒಂದು ಇಂಚು ನಿವೇಶನ ಮಂಜೂರು ಮಾಡಿಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಆದರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿರುವ ಜಗನ್ ಮೋಹನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿ, ನಿವೇಶನ ನೀಡುವಲ್ಲಿ ಜವಾಬ್ದಾರಿಯುತ ಪಾತ್ರ ನಿರ್ವಹಿಸಿದ್ದಾರೆ.


  ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಾರೆ


  ಜಗನ್ ಮಹೋನ ರೆಡ್ಡಿಯವರು ಸಹ ಧಾರ್ಮಿಕ ಮನೋಭಾವನೆ ಹೊಂದಿರುವುದು ಸಹಕಾರ, ಸ್ನೇಹ ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಶಿಕ್ಷಣ ಬಗ್ಗೆಯೂ ಅಪಾರ ಕಾಳಜಿ ಹೊಂದಿರುವ ಜಗನ್ ಮೋಹನ್ ರಡ್ಡಿ ಅವರು, ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಹಲವು ಕಂಟಕಗಳ ಮಧ್ಯೆ ಪ್ರಯತ್ನ ಮಾಡಿ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ನಿವೇಶನ ನೀಡಿದ್ದಾರೆ. ಅದನ್ನು ಹಸ್ತಾಂತರ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಲಾಗಿದೆ ಎಂದರು.


  ಇದನ್ನೂ ಓದಿ: Theerthodbhava: ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ತೀರ್ಥೋದ್ಭವ; ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾದ ಕಾವೇರಿ


  ಇದೇ ಸಮಯದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘವು ಶಿಕ್ಷಣದ ಬಗ್ಗೆ ಇಷ್ಟೊಂದು ಸಾಧನೆ ಮಾಡಿರುವುದು ಚರಂತಿಮಠ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.


  ಇದೇ ಸಮಯದಲ್ಲಿ ಮುಖ್ಯ ಅತಿಥಿಯಾಗಿ ಟಿ ಟಿ ಡಿ ಯ ಅಧ್ಯಕ್ಷರಾದ ವೈ ವಿ ಸುಬ್ಬಾರೆಡ್ಡಿ ಮಾತನಾಡಿ, ದೇಶ ವಿದೇಶಗಳಿಂದ ಸಂಘ ಸಂಸ್ಥೆಯವರು ನಿವೇಶ ಮತ್ತು ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿಲ್ಲ. ಆದರೆ ಮಾಜಿ ಸಿಎಂ ಯಡಿಯೂರಪ್ಪ ನವರ ಮೂಲಕ ತಿರುಮಲದಲ್ಲಿ ಬಸವೇಶ್ವರ ಸಂಘಕ್ಕೆ ನಿವೇಶನ ದೊರಕಿರುವುದು ಪುಣ್ಯ ಮಾಡಿದಂತಾಗಿದೆ. ಆ ಹಿನ್ನಲೆ ಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಯವರ ಉತ್ಸಾಹಕರಾಗಿ ಕೆಲಸ ಮಾಡಿಕೊಟ್ಟಿದ್ದಾರೆ.


  ಹಿಂದೂ ಧರ್ಮ ಪ್ರಚಾರ ಸಮಿತಿ ವತಿಯಿಂದ ಕೇವಲ ತಿರುಪತಿ ತಿಮ್ಮಪ್ಪನ ದೇವಾಲಯ ಅಷ್ಟೇ ಅಲ್ಲ ಇಡೀ ದೇಶದಲ್ಲಿಯೇ ದೇವಾಲಯ ಬಗ್ಗೆ ಜಾಗೃತ ಮೂಡಿಸುವ ಕಾರ್ಯ ನಡೆಯುತ್ತಿದೆ. ಕಾಶ್ಮೀರ ದಿಂದ ಕನ್ಯಾಕುಮಾರಿ ಯವರೆಗೆ ದೇವಾಲಯ ಉಳಿಸುವ ಹಾಗೂ ಬೆಳೆಸುವ ಕಾರ್ಯ ನಡೆಯುತ್ತಿದೆ. ಆಂಧ್ರಪ್ರದೇಶದ ಹಾಗೂ ತೆಲಂಗಾಣ ಪ್ರದೇಶದಲ್ಲಿ ಸುಮಾರು 2000 ದೇವಾಲಯ ನಿರ್ಮಾಣ ಕಾರ್ಯ ಮಾಡಲಾಗಿದೆ.


  ಹಿಂದುಳಿದ ಪ್ರದೇಶ, ದೀನ ದಲಿತರ ಪ್ರದೇಶದಲ್ಲಿ ದೇವಾಲಯ ಉಳಿಸುವ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಲಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಯವರು ಸಹ ಶಿಕ್ಷಣ, ಧಾರ್ಮಿಕ ಹಾಗೂ ಪರಿಸರ ಬಗ್ಗೆ ಹೆಚ್ಚು ಜಾಗೃತ ಮೂಡಿಸುವ ಜೊತೆಗೆ ಅಭಿವೃದ್ಧಿ ಹರಿಕಾರ ಆಗಿದ್ದಾರೆ. ಕರ್ನಾಟಕ ರಾಜ್ಯದ ಜೊತೆಗೆ ಜಗನ್ ಮೋಹನ ರೆಡ್ಡಿಯವರು ಅನ್ಯೋನ್ಯ ಸಂಭಂದ ಇಟ್ಟುಕೊಂಡಿದ್ದಾರೆ.


  ಇದನ್ನೂ  ಓದಿ: Firecrackers: ರಾಜ್ಯದಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅವಕಾಶ! ಮಾಲಿನ್ಯ ನಿಯಂತ್ರಣಕ್ಕೆ ಕ್ರಮ


  ತಿಮ್ಮಪ್ಪ ದೇವಾಲಯ ಬಳಿ ಬೃಹತ್ ಕರ್ನಾಟಕ ಭವನ


  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತ ಅವಧಿಯಲ್ಲಿ 200 ಕೋಟಿ ರೂಪಾಯಿಗಳ ಅನುದಾನ ದಲ್ಲಿ ತಿರುಮಲ ತಿಮ್ಮಪ್ಪ ದೇವಾಲಯ ಬಳಿ ಬೃಹತ್ ಕರ್ನಾಟಕ ಭವನ ನಿರ್ಮಿಸಿಲಾಗಿದೆ. ಇದರಿಂದ ಈಗ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ನಿವೇಶನ ದೂರಕಿದಂತಾಗಿದೆ. ವಿದೇಶಗಳ ಮಾದರಿಯಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘವು ಶಿಕ್ಷಣ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ ಎಂದರು.


  ಇದೇ ಸಮಯದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ, ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ಶಿಕ್ಷಣದ ಸಂತರಾಗಿದ್ದಾರೆ. ಬಾಗಲಕೋಟೆ ಅಭಿವೃದ್ಧಿ ಹೊಂದಬೇಕಾದರೆ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಎಚ್ ಪಟೇಲ್ ಹಾಗೂ ಈಗಿನ ಶಾಸಕರಾದ ವೀರಣ್ಣ ಚರಂತಿಮಠ ಈ ಇಬ್ಬರ ವ್ಯಕ್ತಿಯಿಂದ ಮಾತ್ರ ಅಭಿವೃದ್ಧಿ ಹೊಂದಿದೆ. ತಮಗಾಗಿ ಏನು ಮಾಡಿಕೊಳ್ಳದೆ ಸಮಾಜ ಸೇವೆ ಮಾಡಿಕೊಂಡು ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸುಮಾರು 10 ರಿಂದ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಡಿರುತ್ತಾರೆ. ಹೀಗಾಗಿ ಇವರು ಶಿಕ್ಷಣದ ಸಂತರು ಎಂದು ಗುಣಗಾಣ ಮಾಡಿದರು.


  ವರದಿ: ಮಂಜುನಾಥ್ ತಳವಾರ

  Published by:ಪಾವನ ಎಚ್ ಎಸ್
  First published: