ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿ; ಮಾಜಿ ಸಚಿವ ಸಾರಾ ಮಹೇಶ್​ ಸ್ಪಷ್ಟನೆ

ಮೈಸೂರು ಮೇಯರ್​ ಉಪ ಮೇಯರ್​ ಚುನಾವಣೆಯನ್ನು ಜೆಡಿಎಸ್​-ಕಾಂಗ್ರೆಸ್​ ಪಕ್ಷಗಳು ಮೈತ್ರಿಯೊಂದಿಗೆ ಎದುರಿಸಲಿದ್ದು, ಈ ಬಾರಿ ಜೆಡಿಎಸ್​ ಅಭ್ಯರ್ಥಿ ಮೇಯರ್​ ಆಗಿ ಆಯ್ಕೆಯಾದರೆ, ಮುಂದಿನ ಬಾರಿ ಕಾಂಗ್ರೆಸ್​ ಅಭ್ಯರ್ಥಿ ಮೇಯರ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಎಂದು ಮಾಜಿ ಸಚಿವ ಸಾ.ರಾ. ಮಹೇಶ್​ ತಿಳಿಸಿದ್ದಾರೆ.

news18-kannada
Updated:January 13, 2020, 2:53 PM IST
ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿ; ಮಾಜಿ ಸಚಿವ ಸಾರಾ ಮಹೇಶ್​ ಸ್ಪಷ್ಟನೆ
ಮಾಜಿ ಸಚಿವ ಸಾ.ರಾ. ಮಹೇಶ್​
 • Share this:
ಮೈಸೂರು (ಜನವರಿ 13); ಮೈಸೂರು ಪಾಲಿಕೆ ಮೇಯರ್​-ಉಪ ಮೇಯರ್​ ಚುನಾವಣೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ಹೊಂದಾಣಿಕೆಯಲ್ಲೇ ನಡೆಯಲಿದೆ. ಅಲ್ಲದೆ, ಈ ಅವಧಿಗೆ ಜೆಡಿಎಸ್ ಅಭ್ಯರ್ಥಿ ಮೇಯರ್​ ಆಗಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಸಚಿವ ಜೆಡಿಎಸ್​ ಮುಖಂಡ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಮೈಸೂರು ಪಾಲಿಕೆ ಮೇಯರ್​-ಉಪ ಮೇಯರ್​ ಚುನಾವಣೆ ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚುನಾವಣೆ ರಣತಂತ್ರದ ಕುರಿತಾಗಿ ಇಂದು ಮಾಹಿತಿ ನೀಡಿರುವ ಸಾ.ರಾ. ಮಹೇಶ್, "ಚುನಾವಣೆ ಹಿನ್ನೆಲೆ ಇಂದು ಪಕ್ಷದ ಸಭೆ ನಡೆಸಿ ಪಾಲಿಕೆ ಸದಸ್ಯರ ಅಭಿಪ್ರಾಯಗಳನ್ನು ಆಲಿಸಲಿದ್ದೇವೆ. ಸಭೆಯ ಮಾಹಿತಿಯಂತೆ ಐವರು ಮೇಯರ್​-ಉಪಮೇಯರ್​ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯವನ್ನು ವರಿಷ್ಠರಿಗೆ ಕಳುಹಿಸುತ್ತೇವೆ. ವರಿಷ್ಠರ ಸೂಚನೆಯಂತೆ ಮೇಯರ್​ ಆಯ್ಕೆಯಾಗುತ್ತಾರೆ" ಎಂದು ಅವರು ತಿಳಿಸಿದ್ದಾರೆ.

ಮೈತ್ರಿಯ ಕುರಿತು ಮಾಹಿತಿ ನೀಡಿದ ಅವರು, "ಮೈಸೂರು ಮೇಯರ್​ ಉಪ ಮೇಯರ್​ ಚುನಾವಣೆಯನ್ನು ಜೆಡಿಎಸ್​-ಕಾಂಗ್ರೆಸ್​ ಪಕ್ಷಗಳು ಮೈತ್ರಿಯೊಂದಿಗೆ ಎದುರಿಸಲಿದ್ದು, ಈ ಬಾರಿ ಜೆಡಿಎಸ್​ ಅಭ್ಯರ್ಥಿ ಮೇಯರ್​ ಆಗಿ ಆಯ್ಕೆಯಾದರೆ, ಮುಂದಿನ ಬಾರಿ ಕಾಂಗ್ರೆಸ್​ ಅಭ್ಯರ್ಥಿ ಮೇಯರ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ಉಳಿದ ಎರಡು ವರ್ಷಕ್ಕೂ ಜೆಡಿಎಸ್​ ಸದಸ್ಯರೇ ಮೇಯರ್​ ಆಗಲಿದ್ದಾರೆ. ಗುರುವಾರ ಅಂತಿಮ ಸುತ್ತಿನ ಸಭೆ ಬಳಿಕ ಮೇಯರ್ ಅಭ್ಯರ್ಥಿ ಫೈನಲ್ ಆಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : 10 ದಿನದಲ್ಲಿ ರೆಡ್ಡಿ ಬಂಧನವಾಗದಿದ್ದರೆ ಸಿದ್ದರಾಮಯ್ಯ ಸಮೇತರಾಗಿ ಪ್ರತಿಭಟನೆ: ಜಮೀರ್ ಎಚ್ಚರಿಕೆ
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres