ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ; ಅನರ್ಹ ಶಾಸಕ ಎಚ್​ ವಿಶ್ವನಾಥ್

ನಾನು ದೇವೇಗೌಡರ ಬಗ್ಗೆ ನಾನು ಮಾತಾಡಲ್ಲ. ದೇಶದ, ರಾಜ್ಯದ ಪ್ರಮುಖ ನಾಯಕರು. ದೇವೇಗೌಡರನ್ನು ಏಕವಚನದಲ್ಲಿ ಸಂಭೋಧಿಸಬಾರದು. ಅವರು ಪ್ರಧಾನಿಯಾದವರು. ಅವರನ್ನ ಎಳೆ ತರೋದು ಸಾಧುವಲ್ಲ ಅವರ ಬಗ್ಗೆ ನನಗೆ ಅಪಾರ ಗೌರವವಿದೆ

G Hareeshkumar | news18
Updated:August 24, 2019, 9:21 PM IST
ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ; ಅನರ್ಹ ಶಾಸಕ ಎಚ್​ ವಿಶ್ವನಾಥ್
ಹೆಚ್. ವಿಶ್ವನಾಥ್​.
  • News18
  • Last Updated: August 24, 2019, 9:21 PM IST
  • Share this:
ಬೆಂಗಳೂರು (ಆ.24) : ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ, ಮೈತ್ರಿ ಪಕ್ಷದ ನಾಯಕರುಗಳಿಂದ ಸರ್ಕಾರ ಬಿದ್ದಿದೆ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್​ ವಿಶ್ವನಾಥ್ ಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಮುಖ್ಯಕಾರಣ ಅಂದು ಮುಖ್ಯಮಂತ್ರಿಯಾಗಿದ್ದ ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ. ಅವರಿಬ್ಬರೂ ಸೇರಿ ಮೈತ್ರಿಯನ್ನು ಕೊಂದು ಸಮಾಧಿ ಮಾಡಿದರು. ಈಗ ನೀ ಕೊಂದೆ, ನೀ ಕೊಂದೆ ಅಂತ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದರು.

ನಾನು ದೇವೇಗೌಡರ ಬಗ್ಗೆ ನಾನು ಮಾತಾಡಲ್ಲ. ದೇಶದ, ರಾಜ್ಯದ ಪ್ರಮುಖ ನಾಯಕರು. ದೇವೇಗೌಡರನ್ನು ಏಕವಚನದಲ್ಲಿ ಸಂಬೋಧಿಸಬಾರದು. ಅವರು ಪ್ರಧಾನಿಯಾದವರು. ಅವರನ್ನು ಎಳೆದು ತರೋದು ಸಾಧುವಲ್ಲ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.

ಇದನ್ನೂ ಓದಿ : ನೆರೆಪೀಡಿತ ಪ್ರದೇಶಗಳಲ್ಲಿ ನಾಳೆಯಿಂದ ಕೇಂದ್ರ ತಂಡದಿಂದ ಪರಿಶೀಲನೆ; ಸಿಎಂ ಯಡಿಯೂರಪ್ಪ

ಜೆಡಿಎಸ್​ ಭದ್ರಕೋಟೆ ಎಂದೇ ಕರೆಯಲಾಗುವ ಹುಣಸೂರಿನ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಬಿಜೆಪಿಯೂ ಒಕ್ಕಲಿಗರ ಪ್ರಬಲ ನಾಯಕ ಸಿ.ಪಿ. ಯೋಗೇಶ್ವರ್​​ನನ್ನು ಅಖಾಡಕ್ಕಿಳಿಸಲಿದ್ದಾರೆ ಎನ್ನಲಾಗುತ್ತಿತ್ತು.

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ