ಇಂದಿನಿಂದ ಮೈಸೂರಿನಿಂದ ಮಂಗಳೂರು ನೇರ ವಿಮಾನ : ಅಲೈಯನ್ಸ್​ ಏರ್​ ಸಂಸ್ಥೆಯಿಂದ ಆರಂಭ

ಅಲೈಯನ್ಸ್ ಏರ್‌ ಸಂಸ್ಥೆಯು ಮೈಸೂರು - ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಇಂದಿನಿಂದ ಪ್ರಾರಂಭಿಸಿದೆ ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ (ವಾರಕ್ಕೆ 4 ದಿನ) ವಿಮಾನ ಹಾರಾಟ ನಡೆಸಲಿದೆ.

ಅಲೈಯನ್ಸ್​  ವಿಮಾನ

ಅಲೈಯನ್ಸ್​ ವಿಮಾನ

  • Share this:
ಮೈಸೂರು(ಡಿಸೆಂಬರ್​. 11): ಅಲೈಯನ್ಸ್ ಏರ್‌ ಸಂಸ್ಥೆಯು ಮೈಸೂರು - ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ (ವಾರಕ್ಕೆ 4 ದಿನ) ವಿಮಾನ ಹಾರಾಟ ನಡೆಸಲಿದೆ.  9I 532 ನಂಬರ್​ ವಿಮಾನ ಮೈಸೂರಿನಿಂದ ಬೆಳಗ್ಗೆ 11.20 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.30 ಕ್ಕೆ ಮಂಗಳೂರು ತಲುಪಲಿದೆ. ಇನ್ನೊಂದೆಡೆ, 9I 533 ನಂಬರ್​ ವಿಮಾನ ಮಧ್ಯಾಹ್ನ 12.55 ಕ್ಕೆ ಮಂಗಳೂರಿನಿಂದ ಹೊರಡಲಿದ್ದು, ಮಧ್ಯಾಹ್ನ 1.55 ಕ್ಕೆ ಮೈಸೂರು ತಲುಪಲಿದೆ ಎಂದು ಅಲೈಯನ್ಸ್​​ ಏರ್​​​​​ ಸಂಸ್ಥೆ ಮಾಹಿತಿ ನೀಡಿದೆ.

ಅಕ್ಟೋಬರ್‌ ತಿಂಗಳಲ್ಲೇ ಈ ವಿಮಾನ ಸೇವೆಗೆ ಅನುಮತಿ ದೊರಕಿತ್ತಾದರೂ ಡಿಸೆಂಬರ್‌ನಿಂದ ಶುರುವಾಗಲಿದೆ. ಈ ವಿಮಾನ ಸೇವೆಗೆ ಹಲವರಿಂದ ಬೇಡಿಕೆ ಕೇಳಿಬಂದಿತ್ತು ಎಂದು ತಿಳಿದುಬಂದಿದೆ.

ಮೈಸೂರು - ಮಂಗಳೂರು ನಡುವೆ ರಸ್ತೆಯಲ್ಲಿ ಪ್ರಯಾಣ ಮಾಡಿದರೆ 6 ರಿಂದ 8 ಗಂಟೆ ಬೇಕಿದ್ದು, ಪ್ರಮುಖವಾಗಿ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಭೂ ಕುಸಿತ ಸಂಭವಿಸುವುದರಿಂದ ಈ ಎರಡೂ ಸ್ಥಳಗಳ ನಡುವಿನ ಪ್ರಯಾಣಿಕರು ಪರದಾಡಬೇಕಿತ್ತು.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಸ್​​ಆರ್​​​ಟಿಸಿ ಬಸ್ ಸಂಚಾರ ಸ್ಥಗಿತ : ಪ್ರಯಾಣಿಕರ ಪರದಾಟ

ಈಗ ಈ ವಿಮಾನ ಸೇವೆಯಿಂದ ಪ್ರಯಾಣಿಕರ ಸಂಚಾರ ಅವಧಿ ಸಾಕಷ್ಟು ಉಳಿಯಲಿದ್ದು, ಕೇವಲ 60 ರಿಂದ 70 ನಿಮಿಷಗಳಲ್ಲಿ ಮೈಸೂರು - ಮಂಗಳೂರು ನಡುವೆ ಪ್ರಯಾಣ ಮಾಡಬಹುದಾಗಿದೆ. ಇದರಿಂದ ಪ್ರಮುಖವಾಗಿ ಕರಾವಳಿ ಜನತೆಗೆ ನೆರವಾಗಲಿದೆ.
Published by:G Hareeshkumar
First published: