ಅಮ್ಮ ನೇಣಿಗೆ, ಅಪ್ಪ ಜೈಲಿಗೆ, ಮಕ್ಕಳು ಅನಾಥ: ರಾಯಚೂರಿನ ಆತ್ಮಹತ್ಯಾ ಪ್ರಕರಣವೊಂದರ ಸುತ್ತ…

ಅಪ್ಪನ ಅನೈತಿಕ ಸಂಬಂಧ, ನೊಂದ ತಾಯಿ ನೇಣಿಗೆ ಶರಣು, ಆಕೆಯನ್ನು ಹೊಡೆದು ನೇಣು ಹಾಕಿದ್ದಾರೆ ಎಂಬುವುದು ಅಜ್ಜಿ ಮನೆಯವರ ಅಭಿಪ್ರಾಯ. ಇದು ರಾಯಚೂರು ಜಿಲ್ಲೆಯ ಮಾನವಿಯಲ್ಲಿ ನಡೆದ ಆತ್ಮಹತ್ಯೆಯ ಹಿಂದಿನ ಕಥೆ.

news18
Updated:January 8, 2020, 7:23 PM IST
ಅಮ್ಮ ನೇಣಿಗೆ, ಅಪ್ಪ ಜೈಲಿಗೆ, ಮಕ್ಕಳು ಅನಾಥ: ರಾಯಚೂರಿನ ಆತ್ಮಹತ್ಯಾ ಪ್ರಕರಣವೊಂದರ ಸುತ್ತ…
ಆತ್ಮಹತ್ಯೆಯಾದ ಶಾಲಿನಿ ಮತ್ತಾಕೆಯ ಪತಿ
  • News18
  • Last Updated: January 8, 2020, 7:23 PM IST
  • Share this:
ರಾಯಚೂರು(ಜ. 08): ಅಪ್ಪ ಅಮ್ಮ ಎಂದು ಅಳುತ್ತಿರುವ ಮಕ್ಕಳ ರೋಧನೆ… ಎರಡನೆಯ ಮಗಳನ್ನೂ ಕಳೆದುಕೊಂಡ ವೃದ್ದರ ವೇದನೆ… ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಲ್ಲೆಯ ಮಾನವಿ ಪಟ್ಟಣದಲ್ಲಿ. ಇದಕ್ಕೆ ಕಾರಣವಾಗಿದ್ದು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಶಾಲಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ.

ಮೃತ ಶಾಲಿನಿಯ ಗಂಡ ಮೋಹನ್ ಕೊರವಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು, ಆತ ತನ್ನ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನೆಂಬ ಆರೋಪ ಇದೆ. ಆತನಿಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧ ಇತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸುಂದರ ಸಂಸಾರ ಸಾಗಿಸುತ್ತಿದ್ದ ದಂಪತಿಯ ಬಾಳಿನಲ್ಲಿ ಅನೈತಿಕ ಸಂಬಂಧದ ವಿಚಾರ ಅಲ್ಲೋಲ ಕಲ್ಲೋಲ ತಂದಿದೆ. ಮೋಹನನ ಪರಸ್ತ್ರೀ ವ್ಯಾಮೋಹವು ಶಾಲಿನಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಮೃತ ಶಾಲಿನಿ ಕುಟುಂಬಸ್ಥರು ತಮ್ಮ ಮಗಳನ್ನ ಅಳಿಯನೇ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ತಾಯಿಯನ್ನ ಕಳೆದುಕೊಂಡ ಕಂದಮ್ಮಗಳನ್ನ ನೋಡಿದ್ರೆ ಎಂಥವರ ಕರುಳೂ ಚುರ್ ಎನ್ನುವಂತಿತ್ತು.

ಇದನ್ನೂ ಓದಿ: ಅನೈತಿಕ ಸಂಬಂಧ; ಪ್ರೇಯಸಿಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಪೊಲೀಸರ ಅತಿಥಿಯಾದ ಕಳ್ಳ ಪ್ರಿಯತಮ..!

ಮಂಡ್ಯ ಜಿಲ್ಲೆಯ ಮೋಹನ ಹಾಗು ತುಮಕೂರು ಜಿಲ್ಲೆಯ ಶಾಲಿನಿ ಅವರಿಬ್ಬರೂ ಮಾನವಿ ತಾಲೂಕಿಗೆ ಶಿಕ್ಷಕರಾಗಿ ಆಗಮಿಸಿದ ನಂತರ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೂ ಎರಡು ಮುದ್ದಾದ ಮಕ್ಕಳಾದವು. ಆದರೆ ಮೋಹನ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಶಾಲಿನಿ ಆತನೊಂದಿಗೆ ಜಗಳವಾಡುತ್ತಿದ್ದರು. ಈ ಸಂದರ್ಭದಲ್ಲಿ ಮೋಹನನ ತಾಯಿ ಹಾಗೂ ಆತನ ತಂಗಿ ಇಬ್ಬರೂ ಶಾಲಿನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಭಾನುವಾರ ಸಹ ಜಗಳ ಮಾಡಿಕೊಂಡು ಶಾಲಿನಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳಂತೆ. ಈ ಸಂದರ್ಭದಲ್ಲಿ ಸಹ ಶಿಕ್ಷಕರು ಆಕೆಯನ್ನು ಉಳಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ, ಮಾನಸಿಕ ಕಿರುಕುಳ ಹಿನ್ನೆಲೆಯಲ್ಲಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದಾಳೆ. ಈ ಎಲ್ಲಾ ಮಾಹಿತಿಯೊಂದಿಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿ ಪತಿ ಶಿಕ್ಷಕ ಮೋಹನ್​ನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ದಂಪತಿಯ ಮಕ್ಕಳು ಅನಾಥಗೊಂಡಿದ್ದಾರೆ. ತಾಯಿ ಬಾರದ ಲೋಕಕ್ಕ ಹೋಗಿದ್ದು, ತಂದೆ ಜೈಲು ಪಾಲಾಗಿರುವುದು ಮುದ್ದಾದ ಮಕ್ಕಳಿಗೆ ದಿಕ್ಕು ಕಾಣದಂತಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ