• Home
 • »
 • News
 • »
 • state
 • »
 • ಡ್ರಗ್​ ಪೆಡ್ಲರ್​ ಆರೋಪಿ ವೀರೇನ್​ ಖನ್ನ ಮನೆ ಮೇಲೆ ಸಿಸಿಬಿ ದಾಳಿ

ಡ್ರಗ್​ ಪೆಡ್ಲರ್​ ಆರೋಪಿ ವೀರೇನ್​ ಖನ್ನ ಮನೆ ಮೇಲೆ ಸಿಸಿಬಿ ದಾಳಿ

ವೀರೇನ್​ ಖನ್ನಾ

ವೀರೇನ್​ ಖನ್ನಾ

ವೀರೇನ್ ರೇವ್​ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದವರಲ್ಲಿ ಪ್ರಮುಖ ಎನ್ನಲಾಗಿದೆ. ಈತ ಆಯೋಜನೆ ಮಾಡುತ್ತಿದ್ದ ದೊಡ್ಡ ಮಟ್ಟದ ಪಾರ್ಟಿಗಳಲ್ಲಿ ಸ್ಟಾರ್​ಗಳು ಕೂಡ ಬರುತ್ತಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾನೆಯೇ ದಾಳಿ ನಡೆಸಲಾಗಿದೆ.

 • Share this:

  ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು ಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಒಬ್ಬೊಬ್ಬರು ಅರೆಸ್ಟ್​ ಕೂಡ ಆಗುತ್ತಿದ್ದಾರೆ. ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಈಗ ಐದು ದಿನ ಪೊಲೀಸರ ಕಸ್ಟಡಿಗೆ ಒಳಗಾಗಿದ್ದಾರೆ. ಇಂದು ಮುಂಜಾನೆ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈಗ ಡ್ರಗ್​ ಪೆಡ್ಲರ್​ ಆರೋಪ ಹೊತ್ತಿರುವ ವಿರೇನ್​ ಖನ್ನ ಮನೆಯ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶಾಂತಿನಗರ ಮತ್ತು ದೆಹಲಿಯ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇನ್ಸ್​​ಪೆಕ್ಟರ್ ಮಹಮದ್ ಸಿರಾಜ್, ಶ್ರೀಧರ್ , ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ಈ ರೇಡ್​ ಮಾಡಲಾಗಿದೆ.


  ವೀರೇನ್ ರೇವ್​ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದವರಲ್ಲಿ ಪ್ರಮುಖ ಎನ್ನಲಾಗಿದೆ. ಈತ ಆಯೋಜನೆ ಮಾಡುತ್ತಿದ್ದ ದೊಡ್ಡ ಮಟ್ಟದ ಪಾರ್ಟಿಗಳಲ್ಲಿ ಸ್ಟಾರ್​ಗಳು ಕೂಡ ಬರುತ್ತಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾನೆಯೇ ದಾಳಿ ನಡೆಸಲಾಗಿದೆ.


  ವಿರೇನ್ ಖನ್ನ ತಂದೆ ರಾಮ್ ಖನ್ನ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ. ಮಗನನ್ನು ಬಂಧಿಸಿದ ಬೆನ್ನಲ್ಲೇ ವಿರೇನ್ ಖನ್ನ ಸ್ನೇಹಿತರನ್ನು ರಾಮ ಖನ್ನ ಭೇಟಿ ಮಾಡಿದ್ದರು.  ಇದೆಲ್ಲವನ್ನೂ ಸಿಸಿಬಿ ಅಧಿಕಾರಿಗಳು‌‌ ಗಮನಿಸುತ್ತಿದ್ದರು. ಹೀಗಾಗಿ ಈ ದಾಳಿ ನಡೆದಿದೆ.


  ವಿರೇನ್ ಖನ್ನ ಬೆಂಗಳೂರು, ದೆಹಲಿ, ಮುಂಬೈ, ಗೋವಾ ಮೊದಲಾದ ಕಡೆಗಳಲ್ಲಿ ರೇವ್​ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಈತ ಈ ಪಾರ್ಟಿಗಳ ಫೋಟೋಗಳನ್ನು ಇನ್ಸ್​ಟಾಗ್ರಾಂನಲ್ಲಿ ಕೂಡ ಹಾಕಿಕೊಂಡಿದ್ದಾನೆ. ಇನ್ನು, ರೇವ್ ಪಾರ್ಟಿ ವೇಳೆ ಈತನೇ ಡ್ರಗ್​ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಶಾಕಿಂಗ್​ ವಿಚಾರ ಎಂದರೆ, ಈತ ಅಂತರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಇಂದು ನಡೆದ ದಾಳಿ ಪ್ರಾಮುಖ್ಯತೆ ಪಡೆದುಕೊಂಡಿದೆ.

  Published by:Rajesh Duggumane
  First published: