HOME » NEWS » State » ALLEGATION ON GRAM PANCHAYATH MEMBER OF CHITRADURGA IS PROVED VTC LG

ಚಿತ್ರದುರ್ಗ: ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಗ್ರಾ.ಪಂ. ಸದಸ್ಯೆಯಾದ ಆರೋಪ ಸಾಬೀತು; ಪೇಚಿಗೆ ಸಿಲುಕಿದ ಮಹಿಳೆ

ಜಾತಿ ಪ್ರಮಾಣ ಪತ್ರ ನೀಡುವ ಮುನ್ನ ವಿವಿ ಪುರ ಗ್ರಾಮ ಲೆಕ್ಕಾಧಿಕಾರಿ,ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಹಿರಿಯೂರು ತಹಶಿಲ್ದಾರ್ ಶಾಮೀಲು ಶಂಕೆಯೂ ಕೂಡಾ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರುದಾರ ಉಮೇಶ್ ಒತ್ತಾಯಿಸಿದ್ದಾರೆ.

news18-kannada
Updated:April 11, 2021, 3:58 PM IST
ಚಿತ್ರದುರ್ಗ: ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಗ್ರಾ.ಪಂ. ಸದಸ್ಯೆಯಾದ ಆರೋಪ ಸಾಬೀತು; ಪೇಚಿಗೆ ಸಿಲುಕಿದ ಮಹಿಳೆ
ಗ್ರಾ.ಪಂ.ಸದಸ್ಯೆ
  • Share this:
ಚಿತ್ರದುರ್ಗ(ಏ.11) : ಗ್ರಾಮ ಪಂಚಾಯ್ತಿ ಮಿನಿ ಸಮರ ಮುಗಿದು ಮೂರು ತಿಂಗಳಷ್ಟೆ ಆಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್ಟಿ ಮೀಸಲು ಕ್ಷೇತ್ರದಿಂದ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ಧಿಸಿ ಮಹಿಳೆಯೊಬ್ಬರು ಗೆದ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಗಂಭೀರತೆ ಅರಿತ ಅಲ್ಲಿನ ಉಪ ವಿಭಾಗಾಧಿಕಾರಿಗಳು ಜಾತ್ರಿ ಪ್ರಮಾಣ ಪತ್ರ ಸುಳ್ಳು ಎಂದು ಆದೇಶ ನೀಡಿದ್ದು, ಆಯ್ಕೆ ಆಗಿರುವ ಮಹಿಳೆ ಪೇಚಿಗೆ ಸಿಲುಕಿದ್ದಾರೆ. ಆದರೂ ನಾನು ಅದೇ ಜಾತಿಯವಳು ಅನ್ನೋ ವಾದಕ್ಕೆ ಮುಂದಾಗಿದ್ದಾರೆ. ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಪುರ ಗ್ರಾಮದಲ್ಲಿ ನಡೆದಿದೆ.

ಇಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಎರಡನೇ ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಗ್ರಾಮದ ನೀಲಮ್ಮ ಎಂಬ ಮಹಿಳೆ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ಎ ಬ್ಲಾಕ್  ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಲ್ಲದೇ ವಿವಿ ಪುರ ಜನರ ಆಶಿರ್ವಾದದಿಂದ ಗೆಲ್ಲುವ ಮೂಲಕ ಗ್ರಾಮ ಪಂಚಾಯ್ತಿ ಪ್ರವೇಶ ಮಾಡಿದ್ರು. ಆದರೆ ಇದೀಗ ಗ್ರಾಮ ಪಂಚಾಯ್ತಿ ಸದಸ್ಯೆ ನೀಲಮ್ಮ ಸಂಕಷ್ಠಕ್ಕೆ ಸಿಲುಕಿದ್ದಾರೆ.

ಯಾಕಂದ್ರೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ಧೆ ಮಾಡಿ ಗೆದಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.ಈ ಕುರಿತು ಇದೇ ಗ್ರಾಮದ ಉಮೇಶ್ ಎಂಬಾತ ನಕಲಿ ಜಾತಿ ಪ್ರಮಾಣ ಪತ್ರದ ಕುರಿತು ಕೂಡಾ ದೂರು ನೀಡಿದ್ದರು. ಉಮೇಶ್ ನೀಡಿದ್ದ ದೂರು ಆಧರಿಸಿದ್ದ ಚಿತ್ರದುರ್ಗ ಎಸಿ ವಿ.ಪ್ರಸನ್ನ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಹಿರಿಯೂರು ತಹಶಿಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿದ್ದರು.

ಯಡಿಯೂರಪ್ಪನವರೇ ನಮಗೆ ದಯಾಮರಣ ಕೊಡಿ; ಚಿಕ್ಕಮಗಳೂರಿನಲ್ಲಿ ಕಣ್ಣೀರಿಟ್ಟ ಸಾರಿಗೆ ನೌಕರರು

ತನಿಖೆ ವೇಳೆ ನೀಲಮ್ಮ ಅವರ ಮಕ್ಕಳ ಶಾಲಾ ದಾಖಲಾತಿಯಲ್ಲಿ ಶೆಟ್ಟಿ ಬಣಜಿಗ ಎಂದು ಬರೆಸಿದ್ದು ಬಯಲಾಗಿದೆ. ಜಂಟಿ ತನಿಖೆಯ ವರದಿ ಆಧಿಸಿದ್ದ ಚಿತ್ರದುರ್ಗ AC, ಗ್ರಾಮ ಪಂಚಾಯ್ತಿ ಸದಸ್ಯೆ ನೀಲಮ್ಮರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ನೀಡುವ ಮುನ್ನ ವಿವಿ ಪುರ ಗ್ರಾಮ ಲೆಕ್ಕಾಧಿಕಾರಿ,ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಹಿರಿಯೂರು ತಹಶಿಲ್ದಾರ್ ಶಾಮೀಲು ಶಂಕೆಯೂ ಕೂಡಾ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರುದಾರ ಉಮೇಶ್ ಒತ್ತಾಯಿಸಿದ್ದಾರೆ.

ನಾವು ಯಾವುದೇ ನಕಲಿ ಪ್ರಮಾಣ ಪತ್ರ ನೀಡಿಲ್ಲ,ಚುನಾವಣೆಯಲ್ಲಿ ಉಮೇಶ್ ಪುತ್ರ ಸೋತಿದ್ದು,ಈ ರೀತಿ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ನೀಲಮ್ಮ ಹೇಳ್ತಿದ್ದಾರೆ. ನಾನು,ನನ್ನ ಪತಿ,ಮತ್ತು ತಂದೆ ತಾಯಿ ನಾಯಕ ಸಮುದಾಯದವರು. ಅದಕ್ಕೆ ಎಲ್ಲಾ ಪುರಾವೆಗಳಿವೆ. ನನ್ನ ಪತಿಯ ಅಕ್ಕ ಅಂತರ್ಜಾತಿ ವಿವಾಹವಾಗಿದ್ದು, ಆಗಿನ ಸ್ಥಿತಿಗೆ ಮಕ್ಕಳನ್ನ ಅವರ ಮನೆಯಲ್ಲಿ ಬಿಟ್ಟಿದ್ದೆವು. ಆಗ ಆರೀತಿ ಬರೆಸಲಾಗಿದೆ ಎಂಬ ಸಬೂಬು ಹೇಳಿ ಆರೋಪ ತಳ್ಳಿ ಹಾಕಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲೂ ಇಂತದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ನಾಣ್ಣುಡಿಗೆ ಸರ್ಕಾರಿ ಅಧಿಕಾರಿಗಳು ಶ್ರದ್ಧೆ ವಹಿಸಿ ಕೆಲಸ ಮಾಡದೆ ಅಕ್ರಮ ಎಸಗಿದ್ದಾರೆ ಅನ್ನೋ ಅನುಮಾನಗಳು ಮೂಡಿವೆ.
Published by: Latha CG
First published: April 11, 2021, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories