ಆಪರೇಷನ್​ ಕಮಲ ಆರೋಪ; ಬಿಎಸ್​ವೈ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲು

ಯಡಿಯೂರಪ್ಪ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡಲು ವಾಮಮಾರ್ಗ ಹಿಡಿದಿದ್ದಾರೆ. ಕೋಟಿ ಕೋಟಿ ಹಣದ ಆಮಿಷವೊಡ್ಡಿ ಭ್ರಷ್ಟಾಚಾರ ಮಾಡುತ್ತಿದ್ಧಾರೆ. ಹೀಗಾಗಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಹನುಮೇಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.

Latha CG | news18
Updated:February 11, 2019, 2:05 PM IST
ಆಪರೇಷನ್​ ಕಮಲ ಆರೋಪ; ಬಿಎಸ್​ವೈ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲು
ಬಿಎಸ್​ ಯಡಿಯೂರಪ್ಪ
Latha CG | news18
Updated: February 11, 2019, 2:05 PM IST
ಬೆಂಗಳೂರು,(ಫೆ.11): ಆಪರೇಷನ್​ ಕಮಲ ಆರೋಪದ ಮೇಲೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಜೆಡಿಎಸ್​ ಶಾಸಕರಿಗೆ 10 ಕೋಟಿ ಆಮಿಷ ಒಡ್ಡಿದ್ಧಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಎಸಿಬಿಗೆ ದೂರು ನೀಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಎಂಬುವರು ಸಹ ಬಿಎಸ್​ವೈ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ.

ಯಡಿಯೂರಪ್ಪ ಜೆಡಿಎಸ್​ ಶಾಸಕರಿಗೆ ಕೋಟಿ ಕೋಟಿ ಹಣದ ಆಮಿಷವೊಡ್ಡಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ದಿನೇಶ್​ ಮನವಿ ನೀಡಿದ್ಧಾರೆ. ಜೊತೆಗೆ ನಾಗನಗೌಡ, ಶಿವನಗೌಡ ನಾಯಕ್​ ವಿರುದ್ಧವೂ ಸಹ ದೂರು ನೀಡಿದ್ಧಾರೆ.

ದಿನೇಶ್​ ಕಲ್ಲಹಳ್ಳಿ ನೀಡಿರುವ ದೂರಿನ ಪ್ರತಿ


ಮತ್ತೆ ಸದನದಲ್ಲಿ ಯಡಿಯೂರಪ್ಪ ಯೂ ಟರ್ನ್​; ಧ್ವನಿ ತಮ್ಮದು ಎಂದು ಒಪ್ಪಿಕೊಂಡಿಲ್ಲವಂತೆ

ಯಡಿಯೂರಪ್ಪ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡಲು ವಾಮಮಾರ್ಗ ಹಿಡಿದಿದ್ದಾರೆ. ಕೋಟಿ ಕೋಟಿ ಹಣದ ಆಮಿಷವೊಡ್ಡಿ ಭ್ರಷ್ಟಾಚಾರ ಮಾಡುತ್ತಿದ್ಧಾರೆ. ಹೀಗಾಗಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಹನುಮೇಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಭಾಧ್ಯಕ್ಷರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.ಹನುಮೇಗೌಡ ನೀಡಿರುವ ದೂರಿನ ಪ್ರತಿ


ಈ ಹಿಂದೆ ಚುನಾವಣೆ ಮುಗಿದ ವೇಳೆ ಬಿಎಸ್​ವೈ ಕಾಂಗ್ರೆಸ್​ ಶಾಸಕ ಬಿ.ಸಿ.ಪಾಟೀಲ್​​ಗೆ ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಲೂ ಸಹ ಯಡಿಯೂರಪ್ಪ ವಿರುದ್ಧ ದಿನೇಶ್​ ಕಲ್ಲಹಳ್ಳಿ ದೂರು ನೀಡಿದ್ದರು. ಈಗಾಗಲೇ ಎಸಿಬಿ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಹಣದ ಆಮಿಷದ ಮೂಲ ಧ್ವನಿ ಮುದ್ರಿಕೆಯನ್ನು ಹಾಜರುಪಡಿಸುವಂತೆ ಎಸಿಬಿ ಬಿಎಸ್​ವೈಗೆ ನೋಟಿಸ್​ ಕೂಡ ನೀಡಿತ್ತು.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...