BBMP: ರಾಜ್ಯ, ಕೇಂದ್ರ ಸರ್ಕಾರಕ್ಕೆ GST ಉಂಡೇನಾಮ ಹಾಕಿದ ಬಿಬಿಎಂಪಿ & ಗುತ್ತಿಗೆದಾರರು!

ಕೇಂದ್ರದ ಪ್ರಕಾರ ಒಟ್ಟು 18% GST ಪಾವತಿಸಬೇಕು. ಆದರೆ ಮೆಟೀರಿಯಲ್ ಇನ್ವಾಯಿಸ್ ನೀಡದೆ ಕೇವಲ 1% ನಷ್ಟು ಮಾತ್ರ ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ.

BBMP ಕಚೇರಿ

BBMP ಕಚೇರಿ

  • Share this:
ಕೇಂದ್ರ ಸರ್ಕಾರ (Central Government) ಒನ್‌ ನೇಷನ್ ಒನ್ ಟ್ಯಾಕ್ಸ್ (One Nation, One Tax) ನಿಯಮ ಮಾಡಿತ್ತು. ನೇರವಾಗಿ ಕೇಂದ್ರವೇ ತೆರಿಗೆ (Tax) ಸಂಗ್ರಹಿಸಿ ರಾಜ್ಯದ ಪಾಲು ನೀಡುವ ನಿಯಮವಿದು. ಆದರೆ ಇಂತಹ ಯೋಜನೆಗೂ ಬಿಬಿಎಂಪಿ (BBMP) ಟಕ್ಕರ್ ಕೊಟ್ಟು ಸಾವಿರಾರು ಕೋಟಿ ಉಂಡೇನಾಮೆ ಹಾಕಿರುವ ಆರೋಪ ಕೇಳಿ ಬಂದಿದೆ ಬಿಬಿಎಂಪಿಯಲ್ಲಿ ಹಳೇ ಕಲ್ಲಿಗೆ ಹೊಸ ಬಿಲ್ಲು ಎನ್ನುವುದು ಬಹಳ ಹಿಂದಿನಿಂದಲೂ ಇರುವ ಕುಖ್ಯಾತಿ. ಈಗ ಆ ಸಾಲಿಗೆ ಹೊಸ ಆರೋಪವೊಂದು  (Allegation) ಕೇಳಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಯಾವ ಕಾಮಗಾರಿಗೂ GST ಮೊತ್ತ ಪಾವತಿಯಾಗುತ್ತಿಲ್ಲ ಎಂದು ಬೆಂಗಳೂರು ಮಾಹಿತಿ ಹಕ್ಕು ಕೇಂದ್ರ ಗಂಭೀರವಾಗಿ ಆರೋಪಿಸಿದೆ.

ಬಿಬಿಎಂಪಿಯಲ್ಲಿ ನೀಡಲಾಗುತ್ತಿರುವ ಯಾವ ಟೆಂಡರ್ ಗೂ GST ಕಟ್ಟಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇಂದ್ರದ One Nation - One Tax ಅಡಿಯಲ್ಲಿ ಕಡ್ಡಾಯವಾಗಿ GST ಕಟ್ಟಬೇಕು ಎಂಬ ನಿಯಮವಿದೆ. ಆದರೆ ಬಿಬಿಎಂಪಿಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾಮಗಾರಿಯ ಬಿಲ್ ಗಳಿಗೆ GST Invoice ಮಾಡಲಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕೇಂದ್ರದ ಪದಾಧಿಕಾರಿಗಳು ದೂರಿದ್ದಾರೆ.

ಬಿಬಿಎಂಪಿ & ಗುತ್ತಿಗೆದಾರರಿಂದ ಕೇಂದ್ರ ಸರ್ಕಾರಕ್ಕೇ GST ದೋಖಾ?

ಈ ಮೂಲಕ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿ ಸರ್ಕಾರಕ್ಕೆ GST ಕಟ್ಟದೇ ಮೋಸ ಮಾಡುತ್ತಿದ್ದಾರಂತೆ. ಬಿಬಿಎಂಪಿಯ ದಾಸರಹಳ್ಳಿ ವಲಯದಲ್ಲಿ ಮಾಡಲಾದ ರಸ್ತೆ ಕಾಮಗಾರಿಯ ಬಿಲ್ ನಲ್ಲಿ ಈ‌ ವಿಚಾರ ಬಹಿರಂಗವಾಗಿದೆ.

ಇದನ್ನೂ ಓದಿ:  Bakrid: ಕುರಿ, ಮೇಕೆ ವ್ಯಾಪಾರ ಜೋರು; ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಈ ಬಗ್ಗೆ ಮಾಹಿತಿ ಹಕ್ಕು ಕೇಂದ್ರದಿಂದ ಪ್ರಧಾನಿ ಮೋದಿ ಕಚೇರಿಗೆ ಈ ಮೇಲ್ ಮೂಲಕ ದೂರು ನೀಡಲಾಗಿದೆ. 2017ರಿಂದ ಈಚೆಗೆ ಸುಮಾರು ಸಾವಿರ ಕೋಟಿಗೂ ಅಧಿಕ ಮೊತ್ತದ GST ಕೇಂದ್ರಕ್ಕೆ ಕಟ್ಟದೇ ಯಾಮಾರಿಸಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ವೀರೇಶ್ ಆರೋಪಿಸಿದ್ದಾರೆ.

ಶೇ.1ರಷ್ಟು ತೆರಿಗೆ ಪಾವತಿ

ಪಾಲಿಕೆಯಿಂದ ಟೆಂಡರ್ ಪಡೆದುಕೊಳ್ಳುವ ಗುತ್ತಿಗೆದಾರರು, ಬಿಲ್ ಪಾವತಿಗಾಗಿ ಕೇಳಿಕೊಳ್ಳುವಾಗ ಕಾಮಾಗರಿಗೆ ಬಳಿಸಿದ ಮೆಟೀರಿಯಲ್‌ಗಳ ಬಗ್ಗೆಗಿನ ಯಾವ ಮಾಹಿತಿಯನ್ನೂ ನೀಡಲಾಗುತ್ತಿಲ್ಲ. ಕೇಂದ್ರದ ಪ್ರಕಾರ ಒಟ್ಟು 18% GST ಪಾವತಿಸಬೇಕು. ಆದರೆ ಮೆಟೀರಿಯಲ್ ಇನ್ವಾಯಿಸ್ ನೀಡದೆ ಕೇವಲ 1% ನಷ್ಟು ಮಾತ್ರ ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ.

ಮೆಟೀರಿಯಲ್ ಇನ್ವಾಯಿಸ್ ಕೇಳಿ ಪಡೆದುಕೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಕೂಡ ಗುತ್ತಿಗೆದಾರರ ಜೊತೆಗೂಡಿ ಇನ್ವಾಯಿಸ್ ಇಲ್ಲದೆ ಬಿಲ್ ನೀಡಿ, ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬುವುದು ಒಟ್ಟಾರೆ ಆರೋಪದ ಒಳ ಹುರುಳು.

ಪ್ರಧಾನಿ ಕಚೇರಿಗೂ ದೂರು ಸಲ್ಲಿಕೆ

ಸದ್ಯ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಧಾನಿ ಕಚೇರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳು ಹಾಗೂ ದೋಖಾ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು‌ ಕೇಂದ್ರ ಆಗ್ರಹಿಸಿದೆ.

ಇದನ್ನೂ ಓದಿ:  J Manjunath: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್

ವಾಹನ ಸವಾರರಿಗೆ ಬಿಬಿಎಂಪಿಯಿಂದ ಶಾಕಿಂಗ್ ನ್ಯೂಸ್

ಇನ್ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿದ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರೆಂಟಿ. ಪೇ ಅಂಡ್ ಪಾರ್ಕಿಂಗ್ (Pay And Parking) ಭೂತ ಮತ್ತೆ ಸಿಲಿಕಾನ್ ಸಿಟಗೆ ಎಂಟ್ರಿ ಕೊಟ್ಟಿದೆ. ನಗರದಲ್ಲಿ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆಗೆ ಬಿಬಿಎಂಪಿ ಅಸ್ತು ಎಂದಿದೆ. ಮೆಜೆಸ್ಟಿಕ್, ಗಾಂಧಿನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಪಾಲಿಕೆ ಈ ಪ್ಲಾನ್ ಮಾಡಿಕೊಂಡಿದೆ
Published by:Mahmadrafik K
First published: