• Home
 • »
 • News
 • »
 • state
 • »
 • Siddaramaiah: ಕೋಲಾರದಲ್ಲಿ ಸುಲಭವೇ ಸಿದ್ದರಾಮಯ್ಯ ಗೆಲುವು? ಮಾಜಿ ಸಿಎಂಗೆ ಎದುರಾಗಲಿದೆ ಮೂರು ಮೂರು ತಿರುವು!

Siddaramaiah: ಕೋಲಾರದಲ್ಲಿ ಸುಲಭವೇ ಸಿದ್ದರಾಮಯ್ಯ ಗೆಲುವು? ಮಾಜಿ ಸಿಎಂಗೆ ಎದುರಾಗಲಿದೆ ಮೂರು ಮೂರು ತಿರುವು!

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಅಂತ ಘೋಷಿಸಿದ್ದಾರೆ. ಆದರೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಂತ್ರೆ ಏನೆಲ್ಲಾ ಸವಾಲುಗಳಿವೆ? ಯಾವ ಮಾನದಂಡದಲ್ಲಿ ಗೆಲ್ತೀವಿ ಅಂದ್ಕೊಂಡಿದ್ದಾರೆ?

 • News18 Kannada
 • 4-MIN READ
 • Last Updated :
 • Kolar, India
 • Share this:

ಕೋಲಾರ: ಮಾಜಿ ಸಿಎಂ (Former CM) ಸಿದ್ದರಾಮಯ್ಯ (Opposition Leader Siddaramaiah) ಅವರಿಗೆ ನಿಮ್ಮ ಕ್ಷೇತ್ರ ಯಾವುದು ಅಂತ ಪ್ರಶ್ನೆ ಮಾಡ್ತಿದ್ದವರಿಗೆ ಇವತ್ತು ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಕೋಲಾರದಿಂದಲೇ (Kolar) ಸ್ಪರ್ಧೆ ಅಂತ ಘೋಷಿಸಿದ್ದಾರೆ. ಆದರೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಂತ್ರೆ ಏನೆಲ್ಲಾ ಸವಾಲುಗಳಿವೆ? ಯಾವ ಮಾನದಂಡದಲ್ಲಿ ಗೆಲ್ತೀವಿ ಅಂದ್ಕೊಂಡಿದ್ದಾರೆ? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಈ ಕುರಿತ ಪ್ರಶ್ನೆಗಳಿಗೆ ಉತ್ತರ ನಾವು ಹೇಳ್ತೀವಿ. ಕೋಲಾರದಿಂದಲೇ ನನ್ನ ಸ್ಪರ್ಧೆ ಅಂತ ಸಿದ್ದರಾಮಯ್ಯ ಇವತ್ತು ಘಂಟಾಘೋಷವಾಗೇ ಹೇಳಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸಾಕಷ್ಟು ಸವಾಲಗಳಿದ್ರೂ ತಲೆಕೆಡಿಸಿಕೊಳ್ಳದೇ ಕೋಲಾರ ಕ್ಷೇತ್ರ ಆಯ್ಕೆ ಮಾಡ್ಕೊಂಡಿದ್ದಾರೆ.


ಕೋಲಾರ ಕ್ಷೇತ್ರವನ್ನೇ ಮಾದರಿ ಮಾಡ್ತೀನಿ ಅಂತ ಘೋಷಣೆ


ಕೋಲಾರ ಕ್ಷೇತ್ರದ ಘೋಷಣೆಗೂ ಮುನ್ನ ಸಿದ್ದರಾಮಯ್ಯ ಸಾಕಷ್ಟು ತಯಾರಿ ಮಾಡ್ಕೊಂಡೇ ಬಂದಿದ್ದರು. ಮುನಿಸಿಕೊಂಡಿದ್ದ ಕೆ.ಹೆಚ್​.ಮುನಿಯಪ್ಪರ ಮನೆಗೆ ಹೋಗಿ ಮದ್ದು ಹಾಕಿ ಮನವೊಲಿಸಿದ್ದರು. ಆಮೇಲೆ ವೇದಿಕೆಗೆ ಕರ್ಕೊಂಡ್​​ ಬಂದಿದ್ದರು. ಅದೇ ವೇದಿಕೆಯಲ್ಲಿ ರಮೇಶ್​ಕುಮಾರ್​ ಕೂಡ ಇದ್ದರು.


ಸಮಾವೇಶದಲ್ಲಿ ಸಿದ್ದರಾಮಯ್ಯಗೆ ಕುರಿ ಉಡುಗೊರೆ, ಬೆಳ್ಳಿಗದೆ ಕೊಟ್ಟು, ಹಾರ ತುರಾಯಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದ್ದರು. ಆಮೇಲೆ ಜೈಕಾರಗಳ ಮಧ್ಯೆ ಕೋಲಾರದಿಂದ ಸ್ಪರ್ಧಿಸ್ತೀನಿ ಎಂದ ಸಿದ್ದರಾಮಯ್ಯ ಹೈಕಮಾಂಡ್​ ಒಪ್ಪಿದ್ರೆ ಅಂತ ಷರತ್ತು ಹಾಕಿದ್ದರು. ಜೊತೆಗೆ ಕೋಲಾರ ಕ್ಷೇತ್ರವನ್ನೇ ಮಾದರಿ ಮಾಡ್ತೀನಿ ಅಂತ ಹಲವು ಘೋಷಣೆಗಳನ್ನೂ ಮಾಡಿದ್ದಾರೆ.


ಏನೆಲ್ಲಾ ಘೋಷಣೆ ಮಾಡಿದ್ರು ಗೊತ್ತಾ?


ಕೋಲಾರದಲ್ಲಿ ಚಡ್ಡಿ ಹಾಕೋನ ಕೈಗೂ ಸಿಗ್ತೀನಿ, ರಾಜ್ಯದ ಅಭಿವೃದ್ಧಿ ಕೋಲಾರಕ್ಕೆ ವಿಶೇಷ ಸಾಧ್ಯತೆ ಕೊಡ್ತೀನಿ. ಕೆ.ಸಿವ್ಯಾಲಿ, ಎತ್ತಿನ ಹೊಳೆ, ಮಹದಾಯಿ, ಮೇಕೆದಾಟು
ಎಲ್ಲಾ ಯೋಜನೆಗಳನ್ನೂ 2 ವರ್ಷದಲ್ಲಿ ಮುಗಿಸ್ತೀವಿ. ಕೋಲಾರಕ್ಕೆ ಮೊದಲು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಕೊಡ್ತೀನಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ: Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ


ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಘೋಷಣೆ ಜೊತೆಗೆ ಅಧಿಕಾರಕ್ಕೆ ಬರ್ತೀನಿ. ಯೋಜನೆಗಳನ್ನ ಕೊಡ್ತೀನಿ ಅಂತಾನೇ ಮುಂದಿನ ಸಿಎಂ ಕನಸನ್ನೂ ಬಿಚ್ಚಿಟ್ಟಿದ್ದಾರೆ. ಆದ್ರೆ ಸಿದ್ದರಾಮಯ್ಯ ಅಂದುಕೊಂಡಷ್ಟು ಸುಲಭ ಅಲ್ಲ ಕೋಲಾರ ಅಖಾಡ, ಸಾಕಷ್ಟು ಸವಾಲುಗಳಿವೆ.


ಕೋಲಾರದಲ್ಲಿ ನಡೆದ ಸಭೆ


ಸವಾಲು​​ 01- ಸ್ವಪಕ್ಷದವರ ಮುನಿಸು​


ಕಾಂಗ್ರೆಸ್​​​ಗೆ ಮೆಜಾರಿಟಿ ಬಂದ್ರೆ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಆಗ್ತಾರೆ ಅನ್ನೋ ಭಯವಿದೆ. ಸಿದ್ದರಾಮಯ್ಯ ಸೋತ್ರಷ್ಟೇ ಸಿಎಂ ಆಕಾಂಕ್ಷಿಗಳಿಗೆ ಉಳಿಗಾಲ ಅನ್ನೋ ಆಲೋಚನೆ ಇದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂಬ ಹಠ ಸ್ವಪಕ್ಷದವ್ರಲ್ಲೇ ಇದೆ. ಕೋಲಾರದ ಮೂಲ ಕಾಂಗ್ರೆಸ್ಸಿಗರಿಗೂ ವರ್ಚಸ್ಸು ಕುಗ್ಗುವ ಭಯ ಇನ್ನೊಂದ್ಕಡೆ. ಹಾಗಾಗಿ ಎಲ್ಲಾ ಸವಾಲುಗಳನ್ನ ಎದುರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರಷ್ಟೇ ಸಿದ್ದರಾಮಯ್ಯ ಹಾದಿ ಸುಲಭ ಆಗಲಿದೆ.


ಸವಾಲು​​ 02- ಜೆಡಿಎಸ್ ಟೆನ್ಷನ್​


ಮೈತ್ರಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ ಅನ್ನೋ ಸಿಟ್ಟಿದೆ. ಇದರ ಮಧ್ಯೆ ಜೆಡಿಎಸ್ ಭದ್ರಕೋಟೆ ಕೋಲಾರಕ್ಕೆ ಲಗ್ಗೆ ಹಾಕ್ತಿದ್ದಾರೆ. ಆಪರೇಷನ್​ ಹಸ್ತ ನಡೆಸಿ ಜೆಡಿಎಸ್ ಮುಖಂಡರನ್ನೂ ಸೆಳೆಯುತ್ತಿದ್ದಾರೆ. ಸಿದ್ದರಾಮಯ್ಯರನ್ನ ಸೋಲಿಸೋದಷ್ಟೇ ಈಗ ಹೆಚ್​​ಡಿ ಕುಮಾರಸ್ವಾಮಿ ಮುಖ್ಯ ಗುರಿ, ಜೊತೆಗೆ ಸಿದ್ದರಾಮಯ್ಯರನ್ನ ಸೋಲಿಸಿದರೆ ಜೆಡಿಎಸ್ ಆನೆಬಲ ಗ್ಯಾರಂಟಿ.


ಇದನ್ನೂ ಓದಿ: H D Kumarswamy: ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಡಿಸಿಎಂ ಪಟ್ಟ; ಕೋಲಾರದಲ್ಲಿ ಎಚ್‌ಡಿಕೆ ಭರವಸೆ


ಸಿದ್ದರಾಮಯ್ಯಗೆ ಕುರಿ ಉಡುಗೊರೆ, ಬೆಳ್ಳಿಗದೆ ಕೊಟ್ಟು, ಹಾರ ತುರಾಯಿ, ಮೈಸೂರು ಪೇಟಾ ತೊಡಿಸಿ ಸನ್ಮಾನ


ಸವಾಲು​​ 03- ಬಿಜೆಪಿ ಮತ್ತು ಶಿಷ್ಯ ವರ್ತೂರ್​ ಪ್ರಕಾಶ್


ಸಿದ್ದರಾಮಯ್ಯ ಬಿಜೆಪಿ ಪಾಲಿಗೂ ದೊಡ್ಡ ವಿಲನ್. ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿನೂ ಸಿದ್ದರಾಮಯ್ಯನೇ ಬಿಜೆಪಿಗೆ ಶತ್ರು. ಸಿದ್ದರಾಮಯ್ಯರನ್ನ ಸೋತಿದ್ದೇ ಆದರೆ, 2023ಕ್ಕೆ ಮತ್ತೆ ಬಿಜೆಪಿ ಸರ್ಕಾರನೇ ಬಂದರೆ ಸರ್ಕಾರಕ್ಕೆ ದೊಡ್ಡ ಎದುರಾಳಿಯೇ ಇರೋದಿಲ್ಲ. ಹಾಗಾಗಿನೇ ವರ್ತೂರು ಪ್ರಕಾಶ್​ರನ್ನ ಅಭ್ಯರ್ಥಿ ಮಾಡಿರೋ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್​ ನಾಯಕರಿಗೂ ಗಾಳ ಹಾಕಿ ವೇದಿಕೆ ರೆಡಿಮಾಡ್ತಿದೆ.


ಕೋಲಾರದಲ್ಲಿ 2 ಲಕ್ಷದ 31 ಸಾವಿರ ಮತದಾರರಿದ್ದಾರೆ. ಈ ಸಲ ಸಿದ್ದರಾಮಯ್ಯರ ಹಣೆಬರಹವನ್ನೂ ಇವರೇ ಬರಿತಾರೆ. 2023ಕ್ಕೆ ಏನಾಗುತ್ತೆ ಅಂತಾ ಕಾದು ನೋಡಬೇಕಿದೆ.

Published by:Sumanth SN
First published: