• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Namma Metro: ಟೋಕನ್​, ಸ್ಮಾರ್ಟ್​ಕಾರ್ಡ್​, ವಾಟ್ಸಾಪ್ ಟಿಕೆಟ್​​ ಬಳಿಕ ನಮ್ಮ ಮೆಟ್ರೋ ಮತ್ತೊಂದು ಹೊಸ ಹೆಜ್ಜೆ; ಏನಿದು ಒನ್ ನೇಷನ್ ಒನ್ ಕಾರ್ಡ್?

Namma Metro: ಟೋಕನ್​, ಸ್ಮಾರ್ಟ್​ಕಾರ್ಡ್​, ವಾಟ್ಸಾಪ್ ಟಿಕೆಟ್​​ ಬಳಿಕ ನಮ್ಮ ಮೆಟ್ರೋ ಮತ್ತೊಂದು ಹೊಸ ಹೆಜ್ಜೆ; ಏನಿದು ಒನ್ ನೇಷನ್ ಒನ್ ಕಾರ್ಡ್?

ನಮ್ಮ ಮೆಟ್ರೋ

ನಮ್ಮ ಮೆಟ್ರೋ

ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿಯಾದರೆ ದೇಶದ ಎಲ್ಲಾ ಮೆಟ್ರೋದಲ್ಲೂ ಸಂಚಾರ ಮಾಡಲು ಒಂದೇ ಕಾರ್ಡ್ ಉಪಯೋಗಿಸಬಹುದಾಗಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಮೊದಲಿಗೆ ಟೋಕನ್ (Token Ticket), ನಂತರ ಸ್ಮಾರ್ಟ್ ಕಾರ್ಡ್ (Smart Card ), ಅದಾದ ಬಳಿಕ ವಾಟ್ಸಾಪ್ ಟಿಕೆಟ್ (Whatsapp Ticket Metro) ಜಾರಿಗೊಳಿಸಿದ್ದ, ಮೆಟ್ರೋ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಇಡೀ ದೇಶದಲ್ಲಿ ಬಳಕೆ ಮಾಡುವ ಕಾರ್ಡ್ ಒಂದನ್ನ ಜಾರಿಗೆ ತರಲು ಮುಂದಾಗಿದೆ. ಹೌದು, ಕಾಮನ್ ಮೊಬಿಲಿಟಿ ಕಾರ್ಡ್ (National Common Mobility Card ), ಇದು ಬಿಎಂಆರ್​ಸಿಎಲ್​​ನ (Bangalore Metro Rail Corporation Limited) ಬಹುವರ್ಷದ ಕನಸು. ಇದನ್ನ ಜಾರಿಗೆ ತರಬೇಕು ಅಂತ ಬಿಎಂಆರ್​ಸಿಎಲ್ (Namma Metro) ಹಲವು ವರ್ಷದಿಂದ ಸರ್ಕಸ್ ಮಾಡುತ್ತಿದೆ. ಈ ಯೋಜನೆ ಅಂತಿಮ ಹಂತ ತಲುಪಿದ್ದು, ಮೆಟ್ರೋದಲ್ಲಿ ಶೀಘ್ರದಲ್ಲಿ ಒನ್ ನೇಷನ್ ಒನ್ ಕಾರ್ಡ್ ವ್ಯವಸ್ಥೆ (One Nation One Card) ಜಾರಿಗೆ ಬರುತ್ತಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಟೆಕ್ನಿಕಲ್ ವ್ಯವಸ್ಥೆ ಮಾಡಿಕೊಂಡಿದ್ದು, ಮುಂದಿನ 15 ದಿನಗಳೊಳಗಾಗಿ 25 ಸಾವಿರ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿದೆ.


ಮೆಟ್ರೋದಲ್ಲಿ ಒನ್ ನೇಷನ್ ಒನ್ ಕಾರ್ಡ್ ವ್ಯವಸ್ಥೆ


ಒನ್ ನೇಷನ್ ಒನ್ ಕಾರ್ಡ್ ವ್ಯವಸ್ಥೆ ಜಾರಿಯಾದರೆ ದೇಶದ ಎಲ್ಲಾ ಮೆಟ್ರೋದಲ್ಲೂ ಸಂಚಾರ ಮಾಡಲು ಒಂದೇ ಕಾರ್ಡ್ ಉಪಯೋಗಿಸಬಹುದು. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಹೀಗೆ ಎಲ್ಲಾ ಮೆಟ್ರೋಗಳಿಗೂ ಒಂದೇ ಪೇಮೆಂಟ್ ಸಿಸ್ಟಂ ಜಾರಿಯಾಗಲಿದೆ.
ಮೊದಲ ಹಂತದಲ್ಲಿ 25 ಸಾವಿರ ಕಾರ್ಡ್ ವಿತರಣೆ


ಮುಂದಿನ ದಿನಗಳಲ್ಲಿ ಈ ಯೋಜನೆಯನ್ನ ಬಿಎಂಟಿಸಿ, ಕೆಎಸ್​ಆರ್​ಟಿಸಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೂ ಈ ಕಾರ್ಡ್ ಬಳಕೆ ಮಾಡಬಹುದಾಗಿದೆ. ಬಿಎಂಆರ್​​ಸಿಎಲ್​​ನಂತೆಯೇ ಬಿಎಂಟಿಸಿ ಸಹ ಒನ್ ನೇಷನ್ ಒನ್ ಕಾರ್ಡ್ ವ್ಯವಸ್ಥೆ ಜಾರಿಗೆ ಮುಂದಾಗಲಿದೆ ಎಂದು ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ವಿಭಾಗ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.


ಇದನ್ನೂ ಓದಿ: Namma Metro: ಬೆಂಗಳೂರಿನಲ್ಲಿ ನಿರ್ಮಾಣ ಆಗ್ತಿದೆ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣ; ನಮ್ಮ ಮೆಟ್ರೋಗೆ ಮತ್ತೊಂದು ಗರಿಮೆ


ಮೆಟ್ರೋದಂತೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಟ್ಯಾಕ್ಸಿಗೂ ಕಾರ್ಡ್ ಸೇವೆ


ಈ ಕುರಿತಂತೆ ಮಾಹಿತಿ ನೀಡಿ ಮಾತನಾಡಿರುವ ಮೆಟ್ರೋ ಮುಖ್ಯ ಇಂಜಿನಿಯರ್ ಯಶವಂತ್ ಚೌವ್ಹಾಣ್, ಒನ್​ ನೇಷನ್​ ಒನ್ ಕಾರ್ಡ್​​ ಇದನ್ನು ಎಲ್ಲಾ ಟ್ರಾನ್ಸ್​​ಪೋರ್ಟ್​ ಪ್ರೊವೈಡರ್ಸ್ ಈ ವ್ಯವಸ್ಥೆಯನ್ನು ಅಳಡಿಸಿಕೊಂಡರೆ, ಒಂದೇ ಕಾರ್ಡ್​ನಲ್ಲಿ ಯಾವ ಮೆಟ್ರೋದಲ್ಲಿ ಆದರೂ ಬಳಸಬಹುದು. ಅಲ್ಲದೇ ಈ ವ್ಯವಸ್ಥೆಯನ್ನು ಎಲ್ಲೆಲ್ಲಿ ಅಳವಡಿಸಿಕೊಂಡಿದ್ದರೆ ಉದಾಹರಣೆ ಮುಂಬೈಗೆ ಹೋದರೆ ಅಲ್ಲಿನ ಮೆಟ್ರೋದಲ್ಲಿ ಬಳಸಬಹುದು ಎಂದಿದ್ದಾರೆ.


ನಮ್ಮ ಮೆಟ್ರೋ


ಇನ್ನು ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ವಿಭಾಗ ನಿರ್ದೇಶಕ ಸೂರ್ಯಸೇನ್ ಮಾತನಾಡಿದ್ದು, ನಾವು ಈ ವ್ಯವಸ್ಥೆಯನ್ನು ಬಿಡುಗಡೆ ಮಾಡಲು 30 ರಿಂದ 35 ದಿನಗಳು ಸಮಯ ಬೇಕಾಗುತ್ತದೆ. ಈಗ ಎಲ್ಲವನ್ನು ಸರಿಪಡಿಸಲಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಪೂರ್ಣವಾದ ಬಳಿಕ ನಾವು ಸಾರ್ವಜನಿಕರ ಸೇವೆಗೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ: Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ; ಇನ್ಮುಂದೆ ಪೇಟಿಯಂ, ಯಾತ್ರಾ ಆ್ಯಪ್​ನಲ್ಲೂ ಟಿಕೆಟ್ ಮಾಡ್ಬಹುದು


ಮೆಟ್ರೋ ಈ ಕಾಮನ್ ಮೊಬಿಲಿಟಿ ಕಾರ್ಡ್ ಜಾರಿಗೆ ಕಳೆದ ಕೆಲ ವರ್ಷಗಳ ಹಿಂದೆಯೇ ಪ್ರಯತ್ನಿಸಿತ್ತು. ಈಗ ಮೆಟ್ರೋ ಒನ್ ನೇಷನ್ ಒನ್ ಕಾರ್ಡ್ ಜಾರಿಗೊಳಿಸ್ತಿದೆ. ಮೆಟ್ರೋದಂತೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಟ್ಯಾಕ್ಸಿಗೂ ಕೂಡ ಒನ್ ನೇಷನ್ ಒನ್ ಕಾರ್ಡ್ ಸೇವೆ ಸಿಗಲಿದೆ ಅನ್ನೋದು ಖುಷಿಯ ವಿಚಾರವಾಗಿದೆ.

Published by:Sumanth SN
First published: