ಬೆಂಗಳೂರು: 2023ರ ಫೆಬ್ರವರಿ 13ರಿಂದ 17ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ (Aero India 2023) ವೈಮಾನಿಕ ಪ್ರದರ್ಶನ (Aero Show) ಬೆಂಗಳೂರಿನಲ್ಲಿ (Bengaluru) ನಡೆಯಲಿದೆ. 14ನೇ ಆವೃತ್ತಿಯ ಏರ್ಶೋ ಯಲಹಂಕದ ವಾಯುನೆಲೆಯಲ್ಲಿ (Yelahanka Air Force Station) ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. 1996ರಿಂದ ನಡೆಯುತ್ತಿರುವ ಏರೋ ಇಂಡಿಯಾ ಶೋವನ್ನು ಸತತ 13 ಆವೃತ್ತಿಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಏರೋ ಇಂಡಿಯಾ 2023
ಭಾರತೀಯ ವಾಯುಸೇನೆ (ಐಎಎಫ್) ಐದು ದಿನಗಳ ಕಾಲ ವೈಮಾನಿಕ ಪ್ರದರ್ಶನವನ್ನು ನಡೆಯಲಿದ್ದು, ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಪ್ರದರ್ಶನ ಇದಾಗಿದೆ. ಏರ್ ಶೋ ಪ್ರದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗಳಿಕೆಲ್ಲೊಂದಾಗಿದೆ. ಇದೇ ವೇಳೆ ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳ ಮಹತ್ವದ ವ್ಯಾಪಾರ ಒಪ್ಪಂದಗಳು ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ.
#AeroIndia2023 official Mobile App launched
The app provides detailed information on day-to-day events, logistics, exhibitors, seminars, speakers, e-tickets, venue map, etc.
Download now: ⬇️
Android Playstore ➡️https://t.co/mPTaQhjZpY
iOS App Store ➡️ https://t.co/GxZ5PbVJ0m pic.twitter.com/m5QFFXgoXP
— Aero India (@AeroIndiashow) January 20, 2023
ಇದನ್ನೂ ಓದಿ: PM Modi: ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಬೆನಿಫಿಟ್; ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ
ಏರೋ ಇಂಡಿಯಾ ನೀಡಿರುವ ಮಾಹಿತಿಯ ಅನ್ವಯ ಈ ವರ್ಷದ ಐದು ದಿನಗಳ ಈವೆಂಟ್ನಲ್ಲಿ ಭಾಗವಹಿಸಲು ಒಟ್ಟು 737 ಪ್ರದರ್ಶಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಭಾರತ 643 ಸಂಸ್ಥೆಗಳಿದ್ದರೆ, ಉಳಿದ 93 ಸಂಸ್ಥೆಗಳು 30 ವಿವಿಧ ದೇಶಗಳಿಗೆ ಸೇರಿದೆ. 2021ರಲ್ಲಿ ನಡೆದಿದ್ದ ಏರ್ಶೋನಲ್ಲಿ 55ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಪ್ರದರ್ಶಕರು ಭಾಗಿಯಾಗಿದ್ದರು.
ಏರೋ ಇಂಡಿಯಾ ಶೋ ನೋಡಲು ನೋಂದಣಿ ಮಾಡೋದು ಹೇಗೆ? ಇ-ಟಿಕೆಟ್ಗಳು ಎಲ್ಲಿ ಸಿಗುತ್ತೆ?
ಏರೋ ಇಂಡಿಯಾ ಶೋ ನೋಡಲು ಸಾರ್ವಜನಿಕರಿಗೆ ಪ್ರತಿವರ್ಷ ಅವಕಾಶ ನೀಡಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಲೋಹದ ಹಕ್ಕಿಗಳ ಪ್ರದರ್ಶನವನ್ನು ಕಣ್ತುಂಬಿಕೊಂಡು, ಯುದ್ಧ ವಿಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಚ್ಛಿಸುವವರು aeroindia.gov.in ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ Tickets ಟ್ಯಾಬ್ ಮೇಲೆ ಕ್ಲಿಕ್ ಮಾಡಿದ್ರೆ Book Tickets ಮೆನು ಕಾಣಿಸಿಕೊಳ್ಳುತ್ತದೆ. ಇಲ್ಲಿ ಅಗತ್ಯ ಮಾಹಿತಿಯನ್ನು ತುಂಬಿ, ಎಷ್ಟು ಟಿಕೆಟ್ ಬೇಕು ಎಂದು ನಮೂದಿಸಬೇಕಾಗುತ್ತದೆ. ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಸಂದರ್ಶಕರ ಟಿಕೆಟ್ಗೆ ಅನುಗುಣವಾಗಿ ಹಣವನ್ನು ಪೇ ಮಾಡಬೇಕಾಗುತ್ತದೆ. ಹಣ ಪಾವತಿಯಾದ ಬಳಿಕ ನಿಮ್ಮ ಏರೋ ಇಂಡಿಯಾ 2023ರ ಟಿಕೆಟ್ಗಳನ್ನು ಕಾಯ್ದಿರಿಸಲಾಗುತ್ತದೆ.
ಟಿಕೆಟ್ ದರ ಎಷ್ಟು?
ಶೋ ವೀಕ್ಷಣೆ ಮಾಡಲು ನಮಗೆ ಮೂರು ರೀತಿಯ ಟಿಕೆಟ್ಗಳು ಲಭ್ಯವಿರಲಿದೆ. ಏರ್ ಡಿಸ್ಪ್ಲೇ ವೀಕ್ಷಣೆ ಪ್ರದೇಶ (ADVA), ಸಾಮಾನ್ಯ ವೀಕ್ಷಕರ ಟಿಕೆಟ್ ಮತ್ತು ವ್ಯಾಪಾರಿಗಳ ಟಿಕೆಟ್ಗಳು ಲಭ್ಯವಿರುತ್ತದೆ. ಸಾಮಾನ್ಯ ವೀಕ್ಷಕರ ಟಿಕೆಟ್ ಹಾಗೂ ಏರ್ ಡಿಸ್ಪ್ಲೇ ವೀಕ್ಷಣೆ ಟಿಕೆಟ್ ಪಡೆದವರಿಗೆ ಒಂದು ದಿನ ಒಮ್ಮೆ ಮಾತ್ರ ಪ್ರವೇಶ ಮಾಡಲು ಅವಕಾಶ ಇರುತ್ತದೆ. ವ್ಯಾಪಾರಕ್ಕಾಗಿ ಆಗಮಿಸುವ ಸಂದರ್ಶಕರಿಗೆ ಹಲವು ಬಾರಿ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ.
#AeroIndia2023 official teaser video launched by Hon'ble Raksha Mantri Shri Rajnath Singh today at Ambassadors' Round Table.
Asia's premier biennial event will be held in Bengaluru from 13th- 17th February 2023 pic.twitter.com/WFXVFRqCEu
— Aero India (@AeroIndiashow) January 10, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ