ಮೈಸೂರು: ಪ್ರಧಾನಿ ಮೋದಿ (PM Modi) ನಿನ್ನೆ ರಾತ್ರಿಯೇ ಮೈಸೂರಿಗೆ (Mysuru) ಬಂದಿದ್ದು, ಚೆನ್ನೈ (Chennai) ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಬಂದ ಪ್ರಧಾನಿ ಮೋದಿ ರಾತ್ರಿ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ (Radisson Blu Hotel) ವಾಸ್ತವ್ಯ ಹೂಡಿದ್ದರು. ಪ್ರಧಾನಿ ಮೋದಿ ಆಗಮನ ಹಿನ್ನಲೆಯಲ್ಲಿ ರ್ಯಾಡಿಸನ್ ಹೋಟೆಲ್ ಸುತ್ತಾಮುತ್ತಾ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇಂದು ನರೇಂದ್ರ ಮೋದಿ ಅವರು ಬಂಡೀಪುರದ (Bandipura) ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿಗಳ ಕಾರ್ಯಕ್ರಮ ಸಂಪೂರ್ಣ ಮಾಹಿತಿ ಇಂತಿದೆ.
ಬಂಡೀಪುರದಲ್ಲಿ ‘ನಮೋ’ 22 ಕಿ.ಮೀ.ಸಂಚಾರ, ಅರಣ್ಯದಲ್ಲೇ ಸಂವಾದ
ರಾಜ್ಯ ಚುನಾವಣೆಯ ಕಾವು ಜೋರಾಗುತ್ತಿದೆ. ಕೆಲವರು ಟಿಕೆಟ್ ಸಿಕ್ಕ ಖುಷಿಯಲ್ಲಿ ಗೆಲುವಿಗಾಗಿ ಕಾರ್ಯತಂತ್ರ ನಡೆಸುತ್ತಿದ್ದಾರೆ. ಆದರೆ ಮತ್ತೆ ಕೆಲವರು ಟಿಕೆಟ್ ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ. ಟಿಕೆಟ್ ಸಿಗದೆ ಕಂಗಾಲಾದವರು ಅಸ್ವಿತ್ವ ಉಳಿಸಿಕೊಳ್ಳಲು ತಮ್ಮದೇ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: HD Kumaraswamy: ಹಾಸನ ಟಿಕೆಟ್ ವಿಚಾರದಲ್ಲಿ ಭವಾನಿ ರೇವಣ್ಣಗೆ ಎಚ್ಡಿಕೆ ಶಾಕ್! ರೆಬೆಲ್ ಆಗ್ತಾರಾ ಗೌಡರ ಸೊಸೆ?
ಇದರ ನಡುವೆ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಪ್ರಧಾನಿಗಳು ಈ ಬಾರಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿಲ್ಲ, ಬದಲಿಗೆ ಹುಲಿ ಯೋಜನೆ ಸುವರ್ಣಮಹೋತ್ಸವದಲ್ಲಿ ಭಾಗಿಯಾಗುವ ಸಲುವಾಗಿ ಬಂದಿದ್ದಾರೆ. ಭಾರತದಲ್ಲಿ ಹುಲಿ ಯೋಜನೆ 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.
ನಂತರ ತಮಿಳುನಾಡಿನ ಮದುಮಲೈ ಕಾಡಿಗೆ ಭೇಟಿ ನೀಡಲಿದ್ದು, ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್ ಆಗಿ, 50ನೇ ವರ್ಷದ ಹುಲಿ ಸಂರಕ್ಷಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಆಸ್ಕರ್ ಪುರಸ್ಕಾರ ಪಡೆದ ‘The Elephant Whisperers’ ಸಾಕ್ಷ್ಯ ಚಿತ್ರದ ಮಾವುತರಾದ ಬೊಮ್ಮನ್ ದಂಪತಿ ಜೊತೆ ಸಂವಾದ ಕೂಡ ನಡೆಸಲಿದ್ದಾರೆ.
ಏನಿದು ಹುಲಿ ಯೋಜನೆ?
1973 ರಲ್ಲಿ ಹುಲಿಗಳ ಸಂತತಿ ಕಾಪಾಡುವ ಸಲುವಾಗಿ ಪ್ರಾಜೆಕ್ಟ್ ಟೈಗರ್ ಶುರು ಮಾಡಲಾಗಿತ್ತು. ಅಂದಿನಿಂದ ಪ್ರತೀ 4 ವರ್ಷಗಳಿಗೊಮ್ಮೆ ವೈಜ್ಞಾನಿಕವಾಗಿ ಹುಲಿ ಗಣತಿ ಮಾಡುತ್ತಾ ಬರಲಾಗುತ್ತಿದೆ. ಅಲ್ಲದೆ ರಕ್ಷಿತಾರಣ್ಯಗಳಲ್ಲಿ ವಿಶೇಷ ಕಾಳಜಿಗಳನ್ನ ಕೈಗೊಳ್ಳಲಾಗಿದ್ದು, ದೇಶದಲ್ಲಿ 53 ಹುಲಿ ಸಂರಕ್ಷಿತ ಪ್ರದೇಶಗಳಿವೆ.
2018ರ ಹುಲಿಗಣತಿ ಪ್ರಕಾರ ರಾಜ್ಯದಲ್ಲಿ 524 ಹುಲಿಗಳಿದ್ದು 2ನೇ ಸ್ಥಾನದಲ್ಲಿದೆ. ಮಧ್ಯ ಪ್ರದೇಶದಲ್ಲಿ 526 ಹುಲಿಗಳನ್ನ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. 2022ನೇ ಸಾಲಿನ ಹುಲಿಗಣತಿ ಕೂತೂಹಲ ಮೂಡಿಸಿದೆ. ಇನ್ನು, ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ವಿಪಕ್ಷಗಳ ಟೀಕೆಗೂ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ