ಬೆಂಗಳೂರು: 5 ವರ್ಷದಿಂದ ಹಿಂದೆ ಊರೂರಲ್ಲಿ ನಡೆದಿದ್ದ ಚುನಾವಣೆ (Election) ಹಬ್ಬ (Festival) ಮತ್ತೆ ಬಂದಿದೆ. ಹಬ್ಬದಲ್ಲಿ ಯಾರನ್ನ ಉತ್ಸವ ಮೂರ್ತಿ (Utsava Murti) ಮಾಡಬೇಕು, ಯಾರನ್ನು ಮತ ಅನ್ನೋ ಅಸ್ತ್ರದಲ್ಲಿ ಬಲಿ ಹಾಕಬೇಕು ಎಂದು ನಿರ್ಧರಿಸುವ ಸಮಯದ ಬಂದಿದೆ. ಹೌದು, ಇಂದು ನಿಮ್ಮ ದಿನ ಮರಿಬೇಡಿ. ನಾವು ಹೇಳುತ್ತಿರುವುದು ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಮತದಾನದ ಬಗ್ಗೆ ರಾಜ್ಯದಲ್ಲಿ ಒಂದು ಒಳ್ಳೆ ಸರ್ಕಾರ (Govt) ರಚನೆ ಮಾಡಿ, ಅಭಿವೃದ್ಧಿ ಕಡೆ ತೆಗೆದುಕೊಂಡು ಹೋಗುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ದಿನ.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ
ನಿಮ್ಮ ಹಕ್ಕು ಚಲಾಯಿಸುವ ದಿನ. ಹಾಗಾಗಿ ಮಿಸ್ ಮಾಡದೆ ವೋಟ್ ಮಾಡಿ. ಈ ಪ್ರಜಾಪ್ರಭುತ್ವ (Democracy) ಹಬ್ಬಕ್ಕಾಗಿ ಚುನಾವಣಾ ಆಯೋಗ ಹಗಲಿರುಳು ಕೆಲಸ ಮಾಡಿದೆ. ಇನ್ನು ಚುನಾವಣಾ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದರೆ, ಮತದಾನಕ್ಕೆ (Voting) ಯಾವೆಲ್ಲಾ ದಾಖಲೆಗಳು ತೋರಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಮಾಡಲು ಅವಕಾಶವಿದೆ. ನಾಗರೀಕರು ತಮ್ಮ ಮತ ಚಲಾಯಿಸಲು ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್, ಕೇಂದ್ರ, ರಾಜ್ಯ ಸರ್ಕಾರದ ಗುರುತಿನ ಚೀಟಿ, ಖಾಸಗಿ ಕಂಪನಿ ಸಿಬ್ಬಂದಿ ಗುರುತಿನ ಚೀಟಿ, ಬೂತ್ಗಳಲ್ಲಿ ಹೆಸರು ಪರಿಶೀಲಿಸಿ ಮತ ಹಾಕಬಹುದು.
ಎಲೆಕ್ಷನ್ ರಣಕಣದಲ್ಲಿರುವ ಅಭ್ಯರ್ಥಿಗಳು
ಒಟ್ಟು | 2615 |
ಪುರುಷ | 2430 |
ಮಹಿಳೆ | 184 |
ತೃತೀಯ ಲಿಂಗ | 01 |
ನಾಮಪತ್ರ ವಾಪಾಸ್ | 517 |
ಒಟ್ಟು ಮತಗಟ್ಟೆ | 58,545 |
ಸೂಕ್ಷ್ಮ ಮತಗಟ್ಟೆ | 11,617 |
ಸಖಿ ಮತಗಟ್ಟೆ | 996 |
ಯುವ ಮತಗಟ್ಟೆ | 286 |
ಸಾಂಸ್ಕೃತಿಕ ಮತಗಟ್ಟೆ | 737 |
ಒಟ್ಟು ಮತದಾರರು | 5 ಕೋಟಿ 30 ಲಕ್ಷದ 85 ಸಾವಿರದ 566 |
ಪುರುಷ ಮತದಾರರು | 2 ಕೋಟಿ 66 ಲಕ್ಷದ 82 ಸಾವಿರದ 156 |
ಮಹಿಳಾ ಮತದಾರರು | 2 ಕೋಟಿ 63 ಲಕ್ಷದ 98 ಸಾವಿರದ 483 |
ಇತರೆ ಮತದಾರರು | 4 ಸಾವಿರದ 927 |
80 ವರ್ಷ ಮೇಲ್ಪಟ್ಟವರು | 12 ಲಕ್ಷದ 15 ಸಾವಿರದ 920 |
ಹೊಸ ಮತದಾರರು | 16 ಲಕ್ಷದ 4 ಸಾವಿರದ 285 |
ಯುವ ಮತದಾರರು | 11 ಲಕ್ಷದ 71 ಸಾವಿರದ 558 |
ಒಟ್ಟು ಪೊಲೀಸರು | 84,119 |
ಹೊರರಾಜ್ಯ ಪೊಲೀಸರು | 8500 ( ಕರ್ನಾಟಕ ಅಕ್ಕಪಕ್ಕದ ರಾಜ್ಯಗಳು) |
ಕೇಂದ್ರ ಭದ್ರತಾ ಪಡೆ | 650 |
ಮೊಬೈಲ್ ಸೆಕ್ಟರ್ ಟೀಂ | 2930 |
ಸನ್ನಡತೆ ಬಾಂಡ್ | 53,406 |
ಒಟ್ಟು ಪ್ರಕರಣಗಳು | 30,418 |
ಗಡಿಪಾರು | 714 |
ಗೂಂಡಾಕಾಯ್ದೆ(ಹೊಸಪಟ್ಟಿ) | 68 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ