• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • No Rain: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆ ಬರುತ್ತೆ ಅಂತ ಕಾದವರಿಗೆ ಆಗಿದ್ದೇನು?

No Rain: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆ ಬರುತ್ತೆ ಅಂತ ಕಾದವರಿಗೆ ಆಗಿದ್ದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಳೆಗಾಗಿ ಜ‌ನರು ಪೂಜೆ ಹೋಮ ಹವನ ಮಾಡೋದನ್ನ ನೋಡಿದ್ದೀರಿ. ಕತ್ತೆಗಳು, ಕಪ್ಪೆಗಳಿಗೆ ಮದುವೆ ಮಾಡೋದನ್ನೂ ನೋಡಿದ್ದೀರಿ. ಆದರೆ ವಿಜಯಪುರ ಜಿಲ್ಲೆಯಲ್ಲಿ ನಡೆದ ಈ ಆಚರಣೆ ಕೇಳಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ.

  • Share this:

ವಿಜಯಪುರ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕರಾವಳಿ (Coastal) ಹಾಗೂ ಮಲೆನಾಡು (Malenadu) ಭಾಗದಲ್ಲಿ ಭಾರೀ ಮಳೆ (Heavy Rain) ಸುರಿಯುತ್ತಿದೆ. ಹಲವೆಡೆ ಪ್ರವಾಹ (Flood) ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ವಿಜಯಪುರ (Vijayapur) ಜಿಲ್ಲೆಯಲ್ಲಿ ಮಾತ್ರ ಮಳೆ ಸುರಿಯುತ್ತಿರುವುದು ಅಷ್ಟಕ್ಕಷ್ಟೇ ಅಂತೆ. ಅದರಲ್ಲೂ ಜಿಲ್ಲೆಯ ಕೆಲ ಭಾಗಗಳಲ್ಲಿ ಈ ಮಳೆಗಾಲದಲ್ಲೂ ಸಹ ಬೇಸಿಗೆಯ (Summer) ಪರಿಸ್ಥಿತಿ ಇದೆಯಂತೆ. ಹೀಗಾಗಿ ಇಲ್ಲಿನ ಜನ ಮಳೆಗಾಗಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಬಾರದಿದ್ದರೆ ಒಂದಿಷ್ಟು ವಿಶೇಷ ಆಚರಣೆಗಳನ್ನು (Special Rituals) ಕೈಗೊಳ್ಳುತ್ತಾರೆ. ಕತ್ತೆ ಮದುವೆ (Donkey Marriage) ಮಾಡಿಸುವುದು, ಕಪ್ಪೆ ಮದುವೆ (Frog wedding) ಮಾಡಿಸುವುದು, ಗ್ರಾಮದ ದೇವರಿಗೆ (God) ಮೆಣಸಿನ ಕಾಯಿಯ ಖಾರ ಪೌಡರ್ ಹಚ್ಚುವುದು ಇತ್ಯಾದಿ ಮಾಡುತ್ತಾರೆ. ಹೀಗೆ ಮಾಡಿದ್ರೆ ಕೂಡಲೆ ಮಳೆ ಸುರಿಯುತ್ತದೆ ಎನ್ನುವುದು ನಂಬಿಕೆ. ಆದರೆ ವಿಜಯಪುರದ ಈ ಗ್ರಾಮದಲ್ಲಿ ಮಳೆ ಬರಲಿ ಅಂತ ಗ್ರಾಮಸ್ಥರೆಲ್ಲ ಶವದ (Dead Body) ಮೊರೆ ಹೋಗಿದ್ದಾರಂತೆ!


ಮಳೆಗಾಗಿ ಶವದ ಮೊರೆ ಹೋದ ಗ್ರಾಮಸ್ಥರು


ಮಳೆಗಾಗಿ ಜ‌ನರು ಪೂಜೆ ಹೋಮ ಹವನ ಮಾಡೋದನ್ನ ನೋಡಿದ್ದೀರಿ. ಕತ್ತೆಗಳು, ಕಪ್ಪೆಗಳಿಗೆ ಮದುವೆ ಮಾಡೋದನ್ನೂ ನೋಡಿದ್ದೀರಿ. ಆದರೆ ವಿಜಯಪುರ ಜಿಲ್ಲೆಯಲ್ಲಿ ನಡೆದ ಈ ಆಚರಣೆ ಕೇಳಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ. ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿನ ಜನರು ಮಳೆಗಾಗಿ ಶವದ ಬಾಯಿಗೆ ನೀರು ಹಾಕಿದ್ದಾರಂತೆ.
ಟ್ಯಾಂಕರ್‌ ತರಿಸಿ ಶವ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು


ಹೌದು, ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ಜನರು ನೀರು ಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಆತಂಕಗೊಂಡಿರುವ ರೈತಾಪಿ ವರ್ಗದ ಜನ, ಈ ರೀತಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆಯಲ್ಲಿ ವಿಶೇಷ ಆಚರಣೆ ನಡೆಸಿದ್ದಾರೆ. ಟ್ಯಾಂಕರ್ ಮೂಲಕ ನೀರು ತಂದು, ಪೈಪ್ ಮೂಲಕ ಶವದ ಬಾಯಿಗೆ ಬಿಟ್ಟಿದ್ದಾರೆ.


ಇದನ್ನೂ ಓದಿ: Earthquake: ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನದ ಅನುಭವ! ಭಾರೀ ಮಳೆಯಿಂದಾಗಿ ಹೈರಾಣಾದ ಜನ


ಶವದ ಬಾಯಿಗೆ ನೀರು ಹಾಕುತ್ತಿದ್ದಂತೆ ಸುರಿದ ಮಳೆ!


ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಕಾಕತಾಳೀಯ ಎಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ಆ ಗ್ರಾಮದಲ್ಲಿ ಜಿಟಿ ಜಿಟಿ ಮಳೆ ಸುರಿದಿದ್ಯಂತೆ. ಇದರಿಂದ ಗ್ರಾಮದ ಜನರು, ರೈತರೆಲ್ಲ ಸಂತಸಗೊಂಡಿದ್ದಾರೆ.


ಕಲಬುರಗಿಯಲ್ಲಿ ಮಳೆ ಅಬ್ಬರ


ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ರಾತ್ರಿವಿಡಿ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದ ದಸ್ತಾಪುರ-ಶಿರೋಳ್ಳಿ ಗ್ರಾಮದ ಮಧ್ಯೆ ಇರುವ ನಾಲಾ ಕಟ್ಟೆ ಒಡೆದು ಹೋಗಿದೆಚ. ಇದರಿಂದ ಶಿರೋಳ್ಳಿ ಗ್ರಾಮದ ಶಾಲಾ ಆವರಣ ಸಂಪೂರ್ಣ ಜಲಾವೃತವಾಗಿದೆ. ಜೊತೆಗೆ ಹಲವೆಡೆ ಜಮೀನುಗಳಲ್ಲಿ ಮಳೆ ನೀರು ಸಂಗ್ರಹವಾಗಿ, ಅನ್ನದಾತರಿಗೆ ಸಂಕಷ್ಟ ಎದುರಾಗಿದೆ.


ಇದನ್ನೂ ಓದಿ: Heavy Rain: ರಾಜ್ಯದಲ್ಲಿ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಸಾಧ್ಯತೆ; ರೆಡ್ ಅಲರ್ಟ್ ಘೋಷಣೆ


ರಾಜ್ಯದಲ್ಲಿ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಸಾಧ್ಯತೆ


ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ವರುಣ ಬಿಟ್ಟುಬಿಡದೆ ಕಾಡುತ್ತಿದ್ದಾನೆ. ಇದೀಗ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಮುಂದಿನ 48 ಗಂಟೆಗಳ ಅವಧಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ.

Published by:Annappa Achari
First published: