ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಎಎಐ ಅನುಮತಿ; ಲೋಹದ ಹಕ್ಕಿ ಹಾರಾಟಕ್ಕೆ ಕ್ಷಣಗಣನೆ

ಕಲಬುರ್ಗಿಯಿಂದ ದೆಹಲಿ, ಬೆಂಗಳೂರು ಹಾಗೂ ತಿರುಪತಿಗಳ ಮಾರ್ಗಗಳು ಅಂತಿಮಗೊಂಡಿವೆ. ಆದರೆ ಕಲಬುರ್ಗಿಯಿಂದ ಹೈದರಾಬಾದ್, ಮುಂಬೈ ಮತ್ತು ಹುಬ್ಬಳ್ಳಿಗಳ ನಡುವೆಯೂ ವಿಮಾನ ಹಾರಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೈ.ಕ. ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Latha CG | news18-kannada
Updated:November 1, 2019, 3:38 PM IST
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಎಎಐ ಅನುಮತಿ; ಲೋಹದ ಹಕ್ಕಿ ಹಾರಾಟಕ್ಕೆ ಕ್ಷಣಗಣನೆ
ಕಲಬುರ್ಗಿ ವಿಮಾನ ನಿಲ್ದಾಣ
  • Share this:
ಕಲಬುರ್ಗಿ(ನ.01): ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಿಂದ ನಾಗರೀಕ ವಿಮಾನ ಯಾನಕ್ಕೆ ಕೊನೆಗೂ ಅನುಮತಿ ಸಿಕ್ಕಿದೆ. ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅನುಮತಿ ನೀಡಿದೆ. ಈಗಾಗಲೇ ಹಲವು ಕಂಪನಿಗಳು ಕಲಬುರ್ಗಿ - ಬೆಂಗಳೂರು, ಕಲಬುರ್ಗಿ-ದೆಹಲಿ, ಕಲಬುರ್ಗಿ-ತಿರುಪತಿ ಮಾರ್ಗಗಳ ನಡುವೆ ವಿಮಾನ ಹಾರಾಟಕ್ಕೆ ಮುಂದಾಗಿವೆ. ಜೊತೆಗೆ ಮುಂಬೈ, ಹುಬ್ಬಳ್ಳಿ ಹಾಗೂ ಹೈದರಾಬಾದ್ ಗಳ ನಡುವೆಯೂ ವಿಮಾನಯಾನ ಆರಂಭಗೊಳಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ. ನಾಗರೀಕ ವಿಮಾನಯಾನ ಅನುಮತಿ ಕಲ್ಯಾಣ ಕರ್ನಾಟಕದ ಜನತೆಗ ರಾಜ್ಯೋತ್ಸವದ ಉಡುಗೊರೆಯಾಗಿದ್ದು, ಜನರು ಸಂತಸ ವ್ಯಕ್ತಪಡಿಸಿದ್ಧಾರೆ.

ರನ್ ವೇ, ಎಟಿಸಿ ಟವರ್, ಟರ್ಮಿನಲ್ ಸೇರಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳುಗಳೇ ಗತಿಸಿದ್ದವು. ವಿಶೇಷ ವಿಮಾನಗಳ ಹಾರಾಟವೂ ನಡೆದಿತ್ತು. ಆದರೆ ನಾಗರೀಕ ವಿಮಾನಯಾನಕ್ಕೆ ಅನುಮತಿ ಸಿಕ್ಕಿರಲಿಲ್ಲ. ಕೊನೆಗೂ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಕಲ್ಯಾಣ ಕರ್ನಾಟಕದ ಜನತೆಗೆ ರಾಜ್ಯೋತ್ಸವದ ಕೊಡುಗೆಯೇ ಸಿಕ್ಕಂತಾಗಿದೆ. ಬಹುದಿನಗಳ ಕನಸು ನನಸಾಗಿದೆ ಎಂದು ಹೈದರಾಬಾದ್ ಕರ್ನಾಟಕ  ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.ಪೇಶ್ವೆಗಳು ಕದ್ದೊಯ್ದ ಚಿನ್ನದ ಕಳಸವನ್ನು ಶಾರದಾ ಪೀಠಕ್ಕೆ ವಾಪಸ್ ತಂದುಕೊಟ್ಟ ಟಿಪ್ಪು ಮತಾಂಧನೇ? ಹೆಚ್​​.ಸಿ.ಮಹದೇವಪ್ಪ ಪ್ರಶ್ನೆ

ನವೆಂಬರ್ ತಿಂಗಳಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ವಿಮಾನ ನಿಲ್ದಾಣ ಉದ್ಘಾಟಿಸಿ, ವಿಮಾನಯಾನಕ್ಕೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದ್ದು, ಪ್ರಧಾನಿಗಳನ್ನು ಕರೆತರುವ ಪ್ರಯತ್ನ ಆರಂಭಗೊಂಡಿವೆ. ಹಲವು ಖಾಸಗಿ ಕಂಪನಿಗಳು ಈಗಾಗಲೇ ನಾಗರೀಕ ವಿಮಾನ ಹಾರಟ ನಡೆಸಲು ಒಪ್ಪಿಗೆ ಸೂಚಿಸಿವೆ. ಕಲಬುರ್ಗಿಯಿಂದ ದೆಹಲಿ, ಬೆಂಗಳೂರು ಹಾಗೂ ತಿರುಪತಿಗಳ ಮಾರ್ಗಗಳು ಅಂತಿಮಗೊಂಡಿವೆ. ಆದರೆ ಕಲಬುರ್ಗಿಯಿಂದ ಹೈದರಾಬಾದ್, ಮುಂಬೈ ಮತ್ತು ಹುಬ್ಬಳ್ಳಿಗಳ ನಡುವೆಯೂ ವಿಮಾನ ಹಾರಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೈ.ಕ. ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗ ಹಾಗೂ ಕಲಬುರ್ಗಿಗಳಲ್ಲಿ ಏಕಕಾಲಕ್ಕೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳುಗಳೇ ಆಗಿದ್ದರೂ ನಾಗರೀಕ ವಿಮಾನ ಯಾನಕ್ಕೆ ಅನುಮತಿ ಸಿಕ್ಕಿರಲಿಲ್ಲ. ಏರ್​ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿರ್ಧಾರದಿಂದ ಕಲ್ಯಾಣ ಕರ್ನಾಟಕದ ಜನತೆಯ ಹರ್ಷ ದುಪ್ಪಟ್ಟುಗೊಂಡಿದೆ.

ಇಂದು ಸಂಜೆ ಬಿಜೆಪಿ ಪ್ರತಿಷ್ಠೆಯ ಕಣವಾದ ಜಾರ್ಖಂಡ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ(ವರದಿ: ಶಿವರಾಮ ಅಸುಂಡಿ)

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ