MLC Election: ದಕ್ಷಿಣ ಪದವೀಧರರ ಚುನಾವಣೆಗೆ ಸಕ್ಕರೆ ನಾಡು ಸಜ್ಜು; ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ

ಚುನಾವಣಾ ಕಾರ್ಯಕ್ಕಾಗಿ ಡಿ.ಎಸ್.ಪಿ-4, ಸಿಪಿಐ/ಪಿಐ- 15, ಪಿ.ಎಸ್.ಐ- 20, ಎಎಸ್ಐ- 45, ಸಿ.ಹೆಚ್.ಸಿ/WHC-71, ಸಿ.ಪಿಸಿ/WPC -112 ಸಿಬ್ಬಂದಿ ಹಾಗೂ 9 ಡಿಎಆರ್ ಪಾರ್ಟಿಗಳನ್ನು ನೇಮಕ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
MLC Election: ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ (Election) ಸಂಬಂಧಿಸಿದಂತೆ ಮತದಾನ (Voting) ನಡೆಯಲು ಕ್ಷಣಗಣನೆ ಶುರುವಾಗಿದೆ. ಇಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳ (Candidates) ಹಣೆ ಬರಹವನ್ನ ಮತದಾರರು ಬರೆಯಲಿದ್ದಾರೆ. ಈ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ-3326, ನಾಗಮಂಗಲ-2959, ಪಾಂಡವಪುರ-3705, ಮಂಡ್ಯ-15925, ಮದ್ದೂರು- 10360, ಶ್ರೀರಂಗಪಟ್ಟಣ-3307, ಮಳವಳ್ಳಿ-7720 ಒಟ್ಟು 47,302 ಮತದಾರರು ಇದ್ದಾರೆ. ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಅಧಿಕಾರಿ, ಹಾಗೂ ಮೂವರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್‌ವರ್ ನೇಮಕಮಾಡಲಾಗಿದ್ದು, 45 ಮೈಕ್ರೋ ಅಬ್ಸರ್ ವರ್, ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟು 180 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಕರ್ನಾಟಕ ದಕ್ಷಿಣ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ-03, (ಮಿನಿ ವಿಧಾನಸೌಧದ 3 ವಿವಿಧ ಕೊಠಡಿ) ನಾಗಮಂಗಲ-03 ಮಿನಿ ವಿಧಾನಸೌಧದ 3 ವಿವಿಧ ಕೊಠಡಿ), ಪಾಂಡವಪುರ-04 ( ಮಿನಿ ವಿಧಾನಸೌಧದ 1 ಕೊಠಡಿ ಹಾಗೂ ತಾಲ್ಲೂಕು ಕಚೇರಿಯ 3 ವಿವಿಧ ಕೊಠಡಿ) ಮಂಡ್ಯ-15 (ಮಂಡ್ಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ 7 ವಿವಿಧ ಕೊಠಡಿ ಹಾಗೂ ಮಂಡ್ಯ ವಿಶ್ವವಿದ್ಯಾಲಯ ವಿಜ್ಞಾನ ವಿಭಾಗದ 8 ಕೊಠಡಿ) ಮದ್ದೂರು-10 ( ಮಿನಿ ವಿಧಾನಸೌಧದ 2 ಕೊಠಡಿ, ತಾಲ್ಲೂಕು ಪಂಚಾಯತ್ ಕಚೇರಿಯ 2 ಕೊಠಡಿ, ಸರ್ಕಾರಿ ಮಹಿಳಾ ಕಾಲೇಜಿನ ಹಳೆ ಕಟ್ಟಡದ 3 ಕೊಠಡಿ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಹೊಸ ಕಟ್ಟಡದ 3 ಕೊಠಡಿ), ಶ್ರೀರಂಗಪಟ್ಟಣ-03(ಮಿನಿ ವಿಧಾನಸೌಧದ 3 ಕೊಠಡಿ),ಮಳವಳ್ಳಿ-07 (ಮಿನಿ ವಿಧಾನಸೌಧದ 2 ಕೊಠಡಿ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಯ ವಿವಿಧ 5 ಕೊಠಡಿ) ಒಟ್ಟು 45 ಮತಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ.

ಪೊಲೀಸ್ ಬಂದೋಬಸ್ತ್

ಚುನಾವಣಾ ಕಾರ್ಯಕ್ಕಾಗಿ ಡಿ.ಎಸ್.ಪಿ-4, ಸಿಪಿಐ/ಪಿಐ- 15, ಪಿ.ಎಸ್.ಐ- 20, ಎಎಸ್ಐ- 45, ಸಿ.ಹೆಚ್.ಸಿ/WHC-71, ಸಿ.ಪಿಸಿ/WPC -112 ಸಿಬ್ಬಂದಿ ಹಾಗೂ 9 ಡಿಎಆರ್ ಪಾರ್ಟಿಗಳನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ:  Motamma: ತನ್ನ ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಸಿಡಿದೆದ್ದ ಮೋಟಮ್ಮ; ಕೈ ನಾಯಕರ ಮೇಲೇಕೆ ಈ ಪರಿ ಸಿಟ್ಟು

ಮತದಾನವು ಜೂನ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಅರ್ಹ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡುವುದು.

ಭಾವಚಿತ್ರ ಇರುವ ಗುರುತಿನ ಚೀಟಿ ಕಡ್ಡಾಯ

ಮತದಾರರ ಗುರುತಿನ ಚೀಟಿ ಇಲ್ಲದ ಮತದಾರರು ತಮ್ಮ ಭಾವಚಿತ್ರದೊಂದಿಗೆ ಹೆಸರು ಇರುವ ಮೂಲ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್,ಭಾರತೀಯ ಪಾಸ್ ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ, ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್, ಸ್ಥಳೀಯ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಎಂಪಿ/ಎಂಎಲ್‌ಎ/ಎಂಎಲ್.ಸಿ ಅವರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಸಂಬಂಧಪಟ್ಟ ಶಿಕ್ಷಕರ/ಪದವೀಧರರ ಕ್ಷೇತ್ರದ ಮತದಾರರನ್ನು ನೇಮಿಸಿಕೊಳ್ಳಬಹುದಾದ ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯವು ನೀಡಿದ ಪದವಿ/ಡಿಪ್ಲೊಮಾ ಪ್ರಮಾಣಪತ್ರದ ಮೂಲಪ್ರತಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕ ನ್ಯೂನತೆಯ ಪ್ರಮಾಣಪತ್ರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾಗಿರುವ ವಿಶಿಷ್ಟ ಅಂಗವೈಕಲ್ಯ ID (UDID) ಕಾರ್ಡ್ ಮತದಾರರು ಪರ್ಯಾಯವಾಗಿ ಹಾಜರು ಪಡಿಸಿ ಮತದಾನ ಮಾಡಬಹುದು.

ಇದನ್ನೂ ಓದಿ:  Gunaranjan Shetty: ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್! ಸಂಚು ರೂಪಿಸಿದ್ದು ಯಾರು ಗೊತ್ತಾ?

ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ವ್ಯಾಪ್ತಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ, ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ Establishment ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಮತ ಚಲಾಯಿಸಲಿರುವ ಮತದಾರರಿಗೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
Published by:Mahmadrafik K
First published: