MLC Election: ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕ ಮತದಾರರು ಇರುವುದು ಸ್ಥಳೀಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಪ್ಲಸ್ ಪಾಯಿಂಟ್ ಆದ್ರೆ, ಅರುಣ ಶಹಾಪುರಗೆ ಆಡಳಿತಾರೂಢ ಪಕ್ಷವೇ ಆಸರೆಯಾಗಿದೆ.

ಚುನಾವಣೆ ಸಿದ್ಧತೆ

ಚುನಾವಣೆ ಸಿದ್ಧತೆ

  • Share this:
ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯ (Election) ಮತದಾನಕ್ಕೆ (Voting) ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.  ಚುನಾವಣಾ ಆಯೋಗ (Election Commission) ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದು ಅಭ್ಯರ್ಥಿಗಳ (Candidate) ಎದೆಯಲ್ಲಿ ಢವ ಢವ ಶುರುವಾಗಿದೆ. ಬೆಳಗಾವಿ (Belagavi), ವಿಜಯಪುರ ಹಾಗೂ ಬಾಗಲಕೋಟೆ (Bagalkot) ಜಿಲ್ಲೆಗಳನ್ನೊಳಗೊಂಡ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಗಳನ್ನ ಮಾಡಿಕೊಂಡಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು,  ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 17,238 ಪುರುಷ ಮತದಾರರಿದ್ದು 8,150 ಮಹಿಳಾ ಮತದಾರರು ಸೇರಿದಂತೆ ಒಟ್ಟು 25,388 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ ಹಾಗೂ ಬಿಜೆಪಿಯ ಅರುಣ ಶಹಾಪುರ ಮಧ್ಯೆ ಬಿಗ್ ಫೈಟ್ ನಡೆದಿದ್ದು, ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿ ಬನ್ನೂರ ಸ್ಪರ್ಧೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕ ಮತದಾರರು ಇರುವುದು ಸ್ಥಳೀಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಪ್ಲಸ್ ಪಾಯಿಂಟ್ ಆದ್ರೆ, ಅರುಣ ಶಹಾಪುರಗೆ ಆಡಳಿತಾರೂಢ ಪಕ್ಷವೇ ಆಸರೆಯಾಗಿದೆ.

99,598 ಮತದಾರರು

ವಾಯವ್ಯ ಪದವೀಧರ ಕ್ಷೇತ್ರದಲ್ಲಿ 71,040 ಪುರುಷ ಮತದಾರರು ಹಾಗೂ 28,554 ಮತದಾರರು ಸೇರಿದಂತೆ ಒಟ್ಟು 99,598 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.  ವಾಯವ್ಯ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯ ಮತದಾನ ಕಾರ್ಯಕ್ಕೆ 1548 ಸಿಬ್ಬಂದಿಯನ್ನ ನೇಮಕ ಮಾಡಲಾಗಿದ್ದು, ಸೂಕ್ಷ್ಮ-ಅತಿ ಸೂಕ್ಷ್ಮ ಸೇರಿದಂತೆ ಒಟ್ಟು 190  ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.

ಇದನ್ನೂ ಓದಿ:  CM Ibrahim: ಬಿಜೆಪಿಗೆ ಮತ ಹಾಕಿಸಿದ್ದೇ ಡಿಕೆಶಿ, ಸಿದ್ದು; ಯಡಿಯೂರಪ್ಪ ಜೊತೆ ನಡೆದಿದೆ ಡೀಲ್​- ಇಬ್ರಾಹಿಂ ಆರೋಪ

ಮತದಾನದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಠಿಯಿಂದ ಮತ ಕೇಂದ್ರಗಳಲ್ಲಿ ಸಿಸಿಟಿವಿ ಸೇರಿದಂತೆ, ಕೆ.ಎಸ್.ಆರ್.ಪಿ, ಡಿಎಆರ್, ಸಿಎಆರ್ ತುಕಡಿಗಳು ಸೇರಿದಂತೆ ಹೆಚ್ಚುವರಿ ಪೋಲಿಸರನ್ನ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಅಂತಿಮ ಹಂತದ ಕಸರತ್ತು

ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹನಮಂತ ನಿರಾಣಿ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ನಿಂದ ಸುನಿಲ್ ಸಂಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತದಾನಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಮತದಾರರನ್ನ ತಮ್ಮತ್ತ ಸೆಳೆಯಲು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿಗೆ ನೋಟಿಸ್ ನೀಡಲಾಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ‌ಬಿಸ್ವಾಸ್ ಹೇಳಿಕೆ ನೀಡಿದ್ದಾರೆ.‌ ಚುನಾವಣೆ ಸಂದರ್ಭದಲ್ಲಿ ಬಸವರಾಜ ಪಥ ಎಂಬ ಪುಸ್ತಕ ಪ್ರಕಟಿಸಿದ್ದ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ. ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಭನ, ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಆರೋಪ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ‌ ಮಾಡಲಾಗಿದೆ.

ರಜೆ ಘೋಷಣೆ

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಗಳು (Legislative Council Election) ನಡೆಯಲಿವೆ. ಈ ಹಿನ್ನೆಲೆ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಇಂದು ವಿಶೇಷ ಸಾಂದರ್ಭಿಕ ರಜೆಯನ್ನು (Special Holiday) ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:  Rain Update: ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ; 3 ದಿನ ಅಬ್ಬರಿಸಲಿದ್ದಾನೆ ವರುಣ

ಶಿಕ್ಷಕರು ಮತ್ತು ಪದವೀಧರರು ಈ ಚುನಾವಣೆಯಲ್ಲಿ ಮತದಾನ (Voting) ಮಾಡಲಿದ್ದಾರೆ. ವಿಧಾನ ಪರಿಷತ್ ನ ಮತದಾನ ಕ್ಷೇತ್ರಗಳಲ್ಲಿನ ಸರಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ (Education Institution) ರಜೆ ಘೋಷಣೆ ಮಾಡಲಾಗಿದೆ.
Published by:Mahmadrafik K
First published: