ಎಲ್ಲ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಏಕರೂಪ ನಾಗರಿಕ ಸಂಹಿತೆ ತನ್ನಿ: ಪೇಜಾವರ ಶ್ರೀ

news18
Updated:July 11, 2018, 8:14 PM IST
ಎಲ್ಲ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಏಕರೂಪ ನಾಗರಿಕ ಸಂಹಿತೆ ತನ್ನಿ: ಪೇಜಾವರ ಶ್ರೀ
news18
Updated: July 11, 2018, 8:14 PM IST
- ಮಹೇಶ ವಿ.ಶಟಗಾರ, ನ್ಯೂಸ್ 

ವಿಜಯಪುರ, ಜು. 11 ) :  ದೇಶದಲ್ಲಿ ಏಕರೂಪ ನಾಗರಿಕ ಜಾರಿಯಾಗಬೇಕು.  ಆದರೆ, ಯಾವುದೇ ಧಾರ್ಮಿಕ ಭಾವನೆಗೂ ಧಕ್ಕೆಯಾಗದಂತೆ, ಘರ್ಷಣೆಗೆ ಅವಕಾಶವಿರದಂತೆ ಇದನ್ನು ಜಾರಿಗೆ ತರಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದಲ್ಲಿ ಶ್ರೀಕೃಷ್ಣ ಮಠದಲ್ಲಿ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಎಲ್ಲರೂ ಸೇರಿಕೊಂಡು ಯಾರ ಧಾರ್ಮಿಕ ಭಾವನೆಗೂ ಧಕ್ಕೆಯಾಗದಂತೆ ನಿರ್ಣಯ ಕೈಗೊಳ್ಳಬೇಕು.  ಇದನ್ನು ಪರಾಮರ್ಶೆ ಮಾಡಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.  ಈ ವಿಚಾರದಲ್ಲಿ ಕೆಲವು ವಿಷಯಗಳಲ್ಲಿ ಹಿಂದೂಗಳಿಗೆ ಮತ್ತೆ ಕೆಲವು ವಿಷಯಗಳಲ್ಲಿ ಮುಸ್ಲಿಮರಿಗೂ ಬಹಳಷ್ಟು ಆಗ್ರಹಗಳಿವೆ.  ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು ಸೇರಿಕೊಂಡು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ವಿಧಾನ ಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಎಂಬುದರ ಕುರಿತು ಈಗ ಚರ್ಚೆ ನಡೆಯುತ್ತಿದೆ.  ಇದರ ಸಾಧಕ ಮತ್ತು ಬಾಧಕಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು.  ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುತ್ತದೆ.  ಅದಕ್ಕೂ ಮೂರ್ನಾಲ್ಕು ತಿಂಗಳ ಮೊದಲು ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯಬಹುದು.  ಆಗ ಗೊಂದಲ ಉಂಟಾಗುತ್ತದೆ.  ಈ ಹಿನ್ನೆಲೆಯಲ್ಲಿ ಸಾಧಕ-ಬಾಧಕ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕಚ್ಚಾಡುವ ಬದಲು, ಸರ್ವಪಕ್ಷಗಳ ಸರಕಾರವಾದರೆ ಒಳ್ಳೆಯದು,  ಇದರಿಂದ ರೆಸಾರ್ಟ್ ಸಂಸ್ಕೃತಿ, ಆಪರೇಶನ ಹಾಗೂ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕಬಹುದು.  ಎರಡು ಪಕ್ಷಗಳು ಸೇರಿ ಸರಕಾರ ರಚಿಸುವದಕ್ಕಿಂತ ಎಲ್ಲ ಪಕ್ಷಗಳು ಸೇರಿ ಸರಕಾರ ರಚಿಸಿದರೆ ಒಳ್ಳೆಯದು ಎಂದು ಸಲಹೆ ನೀಡುವುದಾಗಿ ಅವರು ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆಡಳಿತ ನಡೆಸುವ ಸರಕಾರ ಸಮತೋಲನ ಕಾಪಾಡಿಕೊಳ್ಳಬೇಕು.  ಯಾವ ಭಾಗಕ್ಕೂ ಅನ್ಯಾಯವಾಗಬಾರದು.  ಉತ್ತರ ಕರ್ನಾಟಕಕ್ಕೆ ನಮ್ಮ ಬೆಂಬಲವಿದೆ.  ರಾಜ್ಯದ ಎಲ್ಲ ಭಾಗಗಳು ನಮಗೆ ಸಮಾನವಾಗಿವೆ.  ಯಾವದೇ ಭಾಗಕ್ಕೂ ಅನ್ಯಾಯವಾಗಿದ್ರೆ ಸರ್ಕಾರ ಅದನ್ನು ಸರಿಪಡಿಸಬೇಕು  ಎಂದರು.

ರೈತರ ಸಾಲಮನ್ನಾ ವಿಚಾರ ಒಳ್ಳೆಯ ವಿಚಾರ.  ರೈತರಿಗೆ ಸರಕಾರ ಸಹಾಯ ಮಾಡಬೇಕು.  ಸಾಲಮನ್ನಾ ಮಾಡುವಾಗ ಸರ್ಕಾರ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕು.  ಒಂದು ವಿಷಯಕ್ಕೆ ಸಹಾಯ ಮಾಡಲು ಹೋಗಿ ಮತ್ತೊಂದಕ್ಕೆ ಸಮಸ್ಯೆ ಆಗಬಾರದು.  ಸಾಲಮನ್ನಾ ಮಾಡಲು ಹಣ ಹೊಂದಣಿಕೆ ಮಾಡುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...