Hindu Mahasabha Ganesh: ಗಣೇಶ ವಿಸರ್ಜನೆಗೆ ಸಜ್ಜಾಯ್ತು ಶಿವಮೊಗ್ಗ, ಹಿಂದೂ ಮಹಾಸಭಾದಿಂದ ಭರ್ಜರಿ ಸಿದ್ಧತೆ

ಶಿವಮೊಗ್ಗವೀಗ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಲ್ಲೂ, ಬೀದಿ, ಬೀದಿಗಳಲ್ಲಿ, ವೃತ್ತ, ವೃತ್ತಗಳಲ್ಲಿ ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿದೆ.  ಇಡೀ ಶಿವಮೊಗ್ಗದಲ್ಲಿ ಕೇಸರಿಮಯವಾದ ಅಲಂಕಾರ ಮಾಡಲಾಗಿದ್ದು, ನಾಳೆ ವಿಸರ್ಜನೆ ಮಾಡಲಾಗುತ್ತಿರುವ ಹಿಂದೂ ಮಹಾಸಭಾ ಗಣಪತಿಗಾಗಿ ಈ ಅಲಂಕಾರ ಮಾಡಲಾಗಿದೆ. 

ಹಿಂದೂ ಮಹಾಸಭಾ ಗಣೇಶೋತ್ಸವ ಮಹಾದ್ವಾರ

ಹಿಂದೂ ಮಹಾಸಭಾ ಗಣೇಶೋತ್ಸವ ಮಹಾದ್ವಾರ

 • Share this:
  ಶಿವಮೊಗ್ಗ: ಸದಾ ಹಸಿರಿನಿಂದ ಕಂಗೊಳಿಸುವ ಶಿವಮೊಗ್ಗ (Shivamogga) ಈಗ ಸಂಪೂರ್ಣ ಕೇಸರಿಮಯವಾಗಿದೆ. ಶಿವಮೊಗ್ಗದ ಹಿಂದೂ ಮಹಾಸಭಾ (Hindu Mahasabha) ಗಣಪತಿ ವಿಸರ್ಜನೆ (Ganapathi Visarjane) ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು (Road), ವೃತ್ತಗಳು (Circle) ಸಂಪೂರ್ಣ ಕೇಸರಿಮಯವಾಗಿದೆ. ವಿಘ್ನ ನಿವಾರಕನ ಮೆರವಣಿಗೆ ಶಾಂತಿಯುತವಾಗಿ ನಡೆಯಲಿ ಎಂಬ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಕುಟುಂಬ ಸಮೇತರಾಗಿ ಜನರು ಬಂದು ನೋಡಲಿ ಎಂಬ ನಿಟ್ಟಿನಲ್ಲಿ ಶಿವಮೊಗ್ಗವನ್ನು ಅಲಂಕಾರ ಮಾಡಲಾಗಿದೆ. ಅದರಲ್ಲೂ ಶಿವಪ್ಪ ನಾಯಕ ಪ್ರತಿಮೆ (Shivappa Nayaka Statue) ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಗೀತೋಪದೇಶ ಅಲಂಕಾರವಂತೂ ಕಣ್ಣಿಗೆ ಕಟ್ಟುವಂತೆ ರಾರಾಜಿಸುತ್ತಿದೆ. ಬೂದಿಮುಚ್ಚಿದ ಕೆಂಡದಂತಿರುವ ಶಿವಮೊಗ್ಗದಲ್ಲಿ ಹೆಚ್.ಎಂ.ಎಸ್. ಗಣಪತಿ ವಿಸರ್ಜನೆಗೆ ಸಕಲ ತಯಾರಿ ನಡೆಸಲಾಗಿದೆ.

  ಗಣೇಶ ವಿಸರ್ಜನೆಗೆ ಭರ್ಜರಿ ತಯಾರಿ

  ಇತ್ತೀಚಿಗಷ್ಟೇ ಮಲೆನಾಡು ಜಿಲ್ಲೆ, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಶಿವಮೊಗ್ಗ ಕೋಮು ದಳ್ಳುರಿಯಿಂದ ನಲುಗಿ ಹೋಗಿತ್ತು. ಪದೇ ಪದೆ ಅಶಾಂತಿಯಿಂದ ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವಂತಾಗಿತ್ತು. ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿರುವ ಶಿವಮೊಗ್ಗವೀಗ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಲ್ಲೂ, ಬೀದಿ, ಬೀದಿಗಳಲ್ಲಿ, ವೃತ್ತ, ವೃತ್ತಗಳಲ್ಲಿ ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿದೆ.  ಇಡೀ ಶಿವಮೊಗ್ಗದಲ್ಲಿ ಕೇಸರಿಮಯವಾದ ಅಲಂಕಾರ ಮಾಡಲಾಗಿದ್ದು, ನಾಳೆ ವಿಸರ್ಜನೆ ಮಾಡಲಾಗುತ್ತಿರುವ ಹಿಂದೂ ಮಹಾಸಭಾ ಗಣಪತಿಗಾಗಿ ಈ ಅಲಂಕಾರ ಮಾಡಲಾಗಿದೆ.

  all preparations have been made for the ganesh visarjane of the hindu mahasabha in shivamoga
  ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯ


  ಕೇಸರಿಮಯವಾದ ಶಿವಮೊಗ್ಗ ನಗರ

  ನಗರದ ಗಾಂಧಿ ಬಜಾರ್ ನಲ್ಲಿ ನಿರ್ಮಿಸಲಾಗಿರುವ ಗೀತೋಪದೇಶ ಸಾರುವ ಮಹಾದ್ವಾರ ಕಣ್ಮನ ಸೆಳೆಯುತ್ತಿದೆ. ಕೃಷ್ಣನು ತನ್ನ ವಿಶ್ವರೂಪ ಪ್ರದರ್ಶಿಸಿ, ಅರ್ಜುನನಿಗೆ ಗೀತೋಪದೇಶ ಸಾರುವ ಪರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಜನರು ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗಗಳು ಸಂಪೂರ್ಣ ಕೇಸರಿಮಯವಾಗಿದ್ದು, ಬಂಟಿಂಗ್ಸ್, ಬ್ಯಾನರ್ಸ್ ಗಳು ರಾರಾಜಿಸುತ್ತಿವೆ.

  ಇದನ್ನೂ ಓದಿ: Kurudumale: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ

  ಭಕ್ತರಿಗೆ ಊಟ ತಿಂಡಿಯ ವ್ಯವಸ್ಥೆ

  ಗಾಂಧಿ ಬಜಾರ್, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆಗಳಲ್ಲಂತೂ ಸಂಪೂರ್ಣ ಕೇಸರಿಮಯವಾಗಿದ್ದು, ಕಣ್ಣಿಗೆ ಕಟ್ಟುವಂತೆ ರಾರಾಜಿಸುತ್ತಿವೆ. ಜೊತೆಗೆ, ಮೆರವಣಿಗೆಯುದ್ದಕ್ಕೂ ಬರುವ ಭಕ್ತರಿಗೆ, ಕಾರ್ಯಕರ್ತರಿಗೆ ಊಟ-ಉಪಹಾರ, ಸಿಹಿ, ಪಾನಿಯಗಳ ವ್ಯವಸ್ಥೆಗಳು ಸಹ ವಿವಿಧ ಸಂಘ-ಸಂಸ್ಥೆಗಳು ಮಾಡುತ್ತಿವೆ.

  ನಗರದಾದ್ಯಂತ ತೀವ್ರ ಖಾಕಿ ಭದ್ರತೆ

  ಇನ್ನು ನಾಳೆ ನಡೆಯಲಿರುವ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಬಂದೋಬಸ್ತ್ ಕರ್ತವ್ಯಕ್ಕೆ 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್  ಉಪಾಧೀಕ್ಷಕರು, 46 ಪೋಲಿಸ್ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿಗಳು,  700 ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಇದರ ಜೊತೆಗೆ, 1  ಆರ್.ಎ.ಎಫ್. ತುಕಡಿಯ 200 ಅಧಿಕಾರಿ ಮತ್ತು ಸಿಬ್ಬಂದಿಗಳು, 15 ಕೆ.ಎಸ್.ಆರ್.ಪಿ. ತುಕಡಿಯ 300 ಅಧಿಕಾರಿ ಮತ್ತು ಸಿಬ್ಬಂದಿಗಳು, 15 ಡಿ.ಎ.ಆರ್. ತುಕಡಿಯ 120 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇವೆಲ್ಲದರ ಜೊತೆಗೆ, ಸಿಸಿಟಿವಿ ಹಾಗೂ ದ್ರೋಣ್ ಕ್ಯಾಮೆರಾ ಮೂಲಕವೂ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಕೆಲವರನ್ನು ಗಡಿಪಾರು ಸಹ ಮಾಡಲಾಗಿದೆ.  ಕಿಡಿಗೇಡಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ.

  ಕೆಎಸ್ ಈಶ್ವರಪ್ಪ ಆತಂಕ

  ಇನ್ನುಳಿದಂತೆ, ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊರಗಿನಿಂದ ಬರುವ ದುಷ್ಟ ಶಕ್ತಿಗಳು ಗಲಾಟೆ ಎಬ್ಬಿಸುವ ಸಾಧ್ಯತೆ ಎಂಬ ಅನುಮಾನವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಕ್ತಪಡಿಸಿದ್ದು, ಇದಕ್ಕೆ ಅನ್ಯಕೋಮಿನ ಮುಖಂಡರು ಅಂತಹವರನ್ನು ಗುರುತಿಸಿ ಬುದ್ಧಿ ಹೇಳುವ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

  ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!

  ಒಟ್ಟಿನಲ್ಲಿ, ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ, ಕಳೆದ ಹಲವಾರು ದಶಕಗಳಿಂದಲೂ ಈ ಹೆಚ್.ಎಂ.ಎಸ್. ಗಣಪತಿಯನ್ನು ಗಲಾಟೆ ಗಣಪತಿ ಎಂದೇ ಕರೆಯುವ ರೂಡಿ ಇದ್ದು, ಇದನ್ನು ಈ ಬಾರಿ ಸಂಪೂರ್ಣವಾಗಿ ತೆಗೆದು ಹಾಕುವ ನಿಟ್ಟಿನಲ್ಲಿ ಯೋಜಿಸಲಾಗಿದೆ.  ಶಿವಮೊಗ್ಗವನ್ನೂ ಸಂಪೂರ್ಣ ಕೇಸರಿಮಯವನ್ನಾಗಿಸಿ, ಕುಟುಂಬ ಸಮೇತರಾಗಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.  ಈಗಾಗಲೇ ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗದಲ್ಲಿ ಹೇಗಿರುತ್ತೇ ಗಣಪತಿ ಮೆರವಣಿಗೆ ಕಾದು ನೋಡಬೇಕಿದೆ.

  (ವರದಿ: ವಿನಯ್ ಪುರದಾಳು, ನ್ಯೂಸ್ 18 ಕನ್ನಡ, ಶಿವಮೊಗ್ಗ)
  Published by:Annappa Achari
  First published: