‘ಕೊಡಗನ್ನು ಕಾಪಾಡುವಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​​ ಎಲ್ಲಾ ಪಕ್ಷಗಳು ಸೋತಿವೆ‘ - ಡಿಕೆ ಶಿವಕುಮಾರ್​​

ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆ ರಾಜ್ಯದ ಬೊಕ್ಕಸಕ್ಕೆ ಅಪಾರ ಆದಾಯ ತಂದುಕೊಡುತ್ತದೆ. ಇಲ್ಲಿ ಹುಟ್ಟಿ ಹರಿಯುವ ಕಾವೇರಿಯಿಂದಲೇ ಹಲವು ಜಿಲ್ಲೆಗಳು ಬದುಕಿವೆ. ದೇಶದ ಸೇನೆಗೆ ಹಲವು ಧೀಮಂತ ನಾಯಕರನ್ನು ಈ ಜಿಲ್ಲೆ ನೀಡಿದೆ ಎಂದರು ಡಿಕೆಶಿ.

news18-kannada
Updated:August 9, 2020, 2:43 PM IST
‘ಕೊಡಗನ್ನು ಕಾಪಾಡುವಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​​ ಎಲ್ಲಾ ಪಕ್ಷಗಳು ಸೋತಿವೆ‘ - ಡಿಕೆ ಶಿವಕುಮಾರ್​​
ಡಿ.ಕೆ ಶಿವಕುಮಾರ್​​
  • Share this:
ಕೊಡಗು(ಆ.09): ಕೊಡಗು ಜನರ ಹಿತ ಕಾಯುವಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ ಸೇರಿದಂತೆ ಕಾಂಗ್ರೆಸ್​-ಜೆಡಿಎಸ್​​​​ ಎಲ್ಲಾ ಪಕ್ಷಗಳು ಸೋತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಬ್ರಹ್ಮಗಿರಿ ಬೆಟ್ಟ ಭೂಕುಸಿತದಲ್ಲಿ ಕಣ್ಮರೆಯಾದ ಅರ್ಚಕರ ಕುಟುಂಬದ ರಕ್ಷಣಾ ಕಾರ್ಯಚರಣೆ ಪರಿಶೀಲಿಸಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಲು ಬಂದಿದ್ದ ಡಿಕೆ ಶಿವಕುಮಾರ್​​​ ಸುದ್ದಿಗಾರರೊಂದಿಗೆ ಮಾತಾಡುವ ವೇಳೆ ಹೀಗೆಂದರು.

'ಕರ್ನಾಟಕದ ಕಾಶ್ಮೀರ' ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆ ರಾಜ್ಯದ ಬೊಕ್ಕಸಕ್ಕೆ ಅಪಾರ ಆದಾಯ ತಂದುಕೊಡುತ್ತದೆ. ಇಲ್ಲಿ ಹುಟ್ಟಿ ಹರಿಯುವ ಕಾವೇರಿಯಿಂದಲೇ ಹಲವು ಜಿಲ್ಲೆಗಳು ಬದುಕಿವೆ. ದೇಶದ ಸೇನೆಗೆ ಹಲವು ಧೀಮಂತ ನಾಯಕರನ್ನು ಈ ಜಿಲ್ಲೆ ನೀಡಿದೆ ಎಂದರು.

ಇಂತಹ ಜಿಲ್ಲೆಯಲ್ಲಿ ಮಳೆ ಪ್ರವಾಹ ಬಂದು ಮೂರು ವರ್ಷಗಳಿಂದ ಆಸ್ತಿ ಪಾಸ್ತಿಯೆಲ್ಲಾ ನಷ್ಟವಾಗುತ್ತಿರುವಾಗ ಯಾವ ಪಕ್ಷಗಳು ಅದನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಮೂರು ವರ್ಷಗಳ ಹಿಂದೆ ಮನೆಗಳನ್ನು ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಖಾಸಗಿಯವರು ಜಾಗಕೊಟ್ಟರು ಅದಕ್ಕೆ ಪರ್ಮಿಷನ್ ಸಿಕ್ಕಿಲ್ಲ ಎಂದರೆ ಏನು ಅರ್ಥ. ಕೊಡಗಿನ ಜನರಿಗೆ ಸಿಗಬೇಕಾಗಿರುವ ಸೌಲಭ್ಯಗಳ ದೊರಕಿಸುವಲ್ಲಿ ಇಲ್ಲಿಯ ಶಾಸಕರು ವಿಫಲರಾಗಿದ್ಧಾರೆ. ಇವರಿಗೆ ಧಮ್ಮಿಲ್ಲ ಎಂದು ಟೀಕಿದರು.

ಕರ್ನಾಟಕದಲ್ಲಿ ಐದು ದಿನ ಸುರಿದ ಮಳೆಗೆ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಮಣ್ಣಿನಡಿ ಹೂತುಹೋಗಿದ್ದ ತಲಕಾವೇರಿ ಅರ್ಚಕರ ಕುಟುಂಬದ ಶೋಧ ಕಾರ್ಯಾಚರಣೆ ನಿನ್ನೆ ನಡೆಸಲಾಗಿದೆ.

ಐದು ದಿನಗಳು ಸುರಿದ ರಣಭೀಕರ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ನಾರಾಯಣ ಆಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಕೊನೆಗೂ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಆಚಾರ್ಯರ ಕುಟುಂಬದ ಐವರು ಮಣ್ಣಿನಡಿ ಸಿಲುಕಿದ್ದರು. ಉಳಿದವರ ಶವ ಇನ್ನೂ ಪತ್ತೆಯಾಗಿಲ್ಲ.

ಮೂರು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ಮಾಡಿದ ಸಚಿವ ವಿ ಸೋಮಣ್ಣ ಇಂದು ಹೇಗಾದರೂ ಸರಿ ರಕ್ಷಣಾ ಕಾರ್ಯಾಚರಣೆ ಮಾಡಲೇಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಷ್ಟರಲ್ಲೇ ಭೂ ಕುಸಿತದ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎನ್ ಡಿಆರ್ ಎಫ್ ತಂಡ ಮಳೆ ಕಡಿಮೆ ಆಗಿದ್ದೇ ತಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಮತ್ತೊಂದೆಡೆ ತಮ್ಮನ ಕುಟುಂಬ ಭೂ ಕುಸಿತದಲ್ಲಿ ಕಣ್ಮರೆಯಾಗಿರುವ ಸುದ್ದಿ ತಿಳಿದು ಮಂಗಳೂರಿನಿಂದ ಬಂದಿದ್ದ ನಾರಾಯಣ ಆಚಾರ್ಯ ಅವರ ಸಹೋದರಿ ಸುಶೀಲಾ ತಮ್ಮನ ಕುಟುಂಬ ಬದುಕಿರುವ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕೊನೆ ಪಕ್ಷ ಅವರ ದೇಹಗಳನ್ನಾದರೂ ಹುಡುಕಿ ಕೊಡಿ ಅಂತ ಕಣ್ಣೀರು ಸುರಿಸಿದರು.

ಇದನ್ನೂ ಓದಿ: ಇನ್ನಾದರೂ ಲೆಕ್ಕ ಕೊಡ್ತೀರಾ?; ಡಿಸಿಎಂ ಕಾರಜೋಳ, ಸಚಿವರ ಮುಂದೆ ಸಾಲುಸಾಲು ಪ್ರಶ್ನೆಯಿಟ್ಟ ಸಿದ್ದರಾಮಯ್ಯ

ಗುಡ್ಡ ಕುಸಿತದಿಂದ ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಬಂದ್ ಆಗಿದೆ.
Published by: Ganesh Nachikethu
First published: August 9, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading