ನಾಳೆ ಕರ್ನಾಟಕ ಮೊದಲ ಹಂತದ ಮತದಾನ; ಬಹಿರಂಗ ಪ್ರಚಾರ ಅಂತ್ಯ; ಇಂದು ಮನೆಮನೆ ಪ್ರಚಾರಕ್ಕೆ ಅವಕಾಶ!

ರಾಜ್ಯದ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಇದೇ ಏಪ್ರಿಲ್ 18ರಂದು ಮತದಾನ ನಡೆಯಲಿದೆ.

Ganesh Nachikethu | news18
Updated:April 17, 2019, 9:12 AM IST
ನಾಳೆ ಕರ್ನಾಟಕ ಮೊದಲ ಹಂತದ ಮತದಾನ; ಬಹಿರಂಗ ಪ್ರಚಾರ ಅಂತ್ಯ; ಇಂದು ಮನೆಮನೆ ಪ್ರಚಾರಕ್ಕೆ ಅವಕಾಶ!
ಸಿದ್ದರಾಮಯ್ಯ, ಎಚ್​​ಡಿಕೆ ಮತ್ತು ಬಿಎಸ್​​ ಯಡಿಯೂರಪ್ಪ
Ganesh Nachikethu | news18
Updated: April 17, 2019, 9:12 AM IST
ಬೆಂಗಳೂರು(ಏ.17): ಕರ್ನಾಟಕದಲ್ಲೀಗ ಮೊದಲ ಹಂತದ ಮತದಾನಕ್ಕೆ ಇನ್ನೇನು 24 ಗಂಟೆ ಮಾತ್ರ ಬಾಕಿಯಿದೆ. ಲೋಕಸಭಾ ಚುನಾವಣೆ ಗೆಲ್ಲಲು ಬೀದಿಬೀದಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ರಾಜಕೀಯ ಪಕ್ಷಗಳು ನಿನ್ನೆಯೇ ಬಹಿರಂಗ ಪ್ರಚಾರ ಅಂತ್ಯಗೊಳಿಸಿವೆ. ಕೇಂದ್ರ ಚುನಾವಣಾ ಆಯೋಗ ಇಂದು ಮನೆಮನೆ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಕೊನೆಯದಾಗಿ ಮತಯಾಚಿಸಲಿದ್ದಾರೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ಇಂದು ಮನೆಮನೆ ಪ್ರಚಾರ ನಡೆಯಲಿದೆ. ಇದಕ್ಕೂ ಸಂಜೆಯವರೆಗೂ ಅವಕಾಶ ಮಾಡಿಕೊಟ್ಟಿರುವ ಆಯೋಗ, ರಾಜಕೀಯ ಪಕ್ಷಗಳ ಮೇಲೆ ಹದ್ದಿನಕಣ್ಣನ್ನು ಇಟ್ಟಿದೆ. ಕೊನೆಯ ದಿನ ಮತದಾರರನ್ನು ಓಲೈಸುವ ನೆಪದಲ್ಲಿ ಅಭ್ಯರ್ಥಿಗಳು ಹಣದ ಆಮೀಷ ನೀಡುವ ಸಾಧ್ಯತೆಯಿದೆ. ಹಾಗಾಗಿ ಚುನಾವಣೆ ಆಯೋಗ ಕಾಂಗ್ರೆಸ್​​-ಜೆಡಿಎಸ್​​ ಮತ್ತು ಬಿಜೆಪಿ ಮೇಲೆ ನಿಗಾವಹಿಸಿದೆ ಎನ್ನಲಾಗಿದೆ.

ಇನ್ನು ರಾಜ್ಯದ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಇದೇ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಮತದಾನ ಮುಕ್ತಾಯಕ್ಕೆ 24 ಗಂಟೆ ಮುನ್ನವೇ ಮನೆಮನೆ ಪ್ರಚಾರಕ್ಕೆ ಕೂಡ ತೆರೆ ಬೀಳಲಿದೆ.

ಇದನ್ನೂ ಓದಿ: ಬೆಂಗಳೂರು ಕಾರ್ಪೋರೇಟರ್​ಗಳಿಗೆ ತಟ್ಟಿದ ರೇಡ್​ ಬಿಸಿ; ಚುನಾವಣಾ ಆಯೋಗದಿಂದ ದಾಳಿ

ಈಗಾಗಲೇ ಸ್ಥಳೀಯ ಮತದಾರರಲ್ಲದ ನಾಯಕರೂ ತಮ್ಮ ಅಭ್ಯರ್ಥಿಗಳ ಕ್ಷೇತ್ರಗಳನ್ನು ಬಿಟ್ಟು ಹೊರಟಿದ್ದಾರೆ. ಈ ಕಾರಣಕ್ಕೆ ನಿನ್ನೆ ಬಹುತೇಕ ಅಭ್ಯರ್ಥಿಗಳು ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ. ಸದ್ಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆಗೂಡಿ ಇಂದು ಮನೆಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ’ಸುಮಲತಾ ಬಿಜೆಪಿ ಸೇರಲು ಸಿದ್ಧತೆ, ಶೀಘ್ರದಲ್ಲಿ ವಿಡಿಯೋ ಬಿಡ್ತೀನಿ’; ಸಚಿವ ಸಿ.ಎಸ್​​ ಪುಟ್ಟರಾಜು!
Loading...

ಇದರ ಬೆನ್ನಲ್ಲೇ ಎರಡನೇ ಹಂತದಲ್ಲಿ ಏ. 23ರಂದು ಮತದಾನ ನಡೆಯುವ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳತ್ತ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಮುಖ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಹ ಆ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
------------
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626