ಬಜೆಟ್​ ಅಧಿವೇಶನದಂದು ಸಂವಿಧಾನ ಕುರಿತು ಎಲ್ಲಾ ಸದಸ್ಯರಿಂದ ಭಾಷಣ: ಸಿಎಂ ಬಿಎಸ್​ವೈ

ಇದೇ ಮೊದಲ ಬಾರಿಗೆ ಸಂವಿಧಾನ ಕುರಿತು ಮಾತನಾಡಲು ಏರ್ಪಾಡು ಮಾಡಲಾಗಿದೆ. ಎಲ್ಲಾ ಸದಸ್ಯರು ಈ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದ ಅವರು, ಬಜೆಟ್​ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಜನಪರ ಬಜೆಟ್​ ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

Seema.R | news18-kannada
Updated:February 26, 2020, 1:14 PM IST
ಬಜೆಟ್​ ಅಧಿವೇಶನದಂದು ಸಂವಿಧಾನ ಕುರಿತು ಎಲ್ಲಾ ಸದಸ್ಯರಿಂದ ಭಾಷಣ: ಸಿಎಂ ಬಿಎಸ್​ವೈ
ಸಿಎಂ ಬಿಎಸ್ ಯಡಿಯೂರಪ್ಪ.
  • Share this:
ಕೊಪ್ಪಳ(ಫೆ. 26): ಈ ಬಾರಿಯ ಬಜೆಟ್​ ಅಧಿವೇಶನದಲ್ಲಿ ಎಲ್ಲಾ ಶಾಸಕರು ಸಂವಿಧಾನದ ಕುರಿತು ಮಾತನಾಡಲಿದ್ದು, ಇದೊಂದು ಐತಿಹಾಸಿಕ ಅಧಿವೇಶನ ಆಗಿರಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ಕುಕನೂರಿನಲ್ಲಿ ಮಾತನಾಡಿದ ಅವರು, ಸಂವಿಧಾನ ಕುರಿತು ಶಾಸಕರು ಮಾತನಾಡಲು ನೆರವಾಗಲು ಕನ್ನಡ ಅನುವಾದ ಪ್ರತಿ ಮುದ್ರಿಸಿ ಹಂಚಲಾಗುವುದು. ಇದರಿಂದ ಸಂವಿಧಾನವನ್ನು ಓದಿಕೊಂಡು ಬರಲು ಸಹಾಯಕವಾಗಲಿದೆ. ಬಜೆಟ್​ ಮುನ್ನ ಅಂದರೆ ಮಾರ್ಚ್​ 3 ಮತ್ತು 4ರಂದು ಎಲ್ಲ ಶಾಸಕರು ಸಂವಿಧಾನದ ಕುರಿತು ಭಾಷಣ ಮಾಡಲಿದ್ದಾರೆ ಎಂದರು.

ಇದೇ ಮೊದಲ ಬಾರಿಗೆ ಸಂವಿಧಾನ ಕುರಿತು ಮಾತನಾಡಲು ಏರ್ಪಾಡು ಮಾಡಲಾಗಿದೆ. ಎಲ್ಲಾ ಸದಸ್ಯರು ಈ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದ ಅವರು, ಬಜೆಟ್​ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಜನಪರ ಬಜೆಟ್​ ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನಾನೆಲ್ಲೂ ಎಸ್​ಎಸ್​ಎಲ್​ಸಿ ಪಾಸ್​ ಎಂದು ನಮೂದಿಸಿಲ್ಲ: ಸ್ಪಷ್ಟನೆ ನೀಡಿದ ಸಚಿವ ಶಿವರಾಮ್​ ಹೆಬ್ಬಾರ್​​

ಇನ್ನು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಆಡಳಿತ ನಡೆಸಲು ಬರುವುದಿಲ್ಲ ಎಂಬ ಪ್ರತಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಾಗೆಂದು ಹೇಳೋರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

(ವರದಿ: ಬಸವರಾಜ್​ ಕರುಗಲ್​)
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading