ಮಂಡ್ಯದಲ್ಲಿ ಕಮಲ ಅರಳಿಸಿದ ವಿಜಯೇಂದ್ರರನ್ನು ಮಂತ್ರಿ ಮಾಡಿ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಪತ್ರ

ಹಳೆ ಮೈಸೂರು ಭಾಗದಲ್ಲಿ ಸುತ್ತಾಡುವ ಮೂಲಕ ಇಲ್ಲಿನ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡುತ್ತಲೇ ಇದ್ದರು. ಇದರ ಫಲವಾಗಿ ನಾರಾಯಣಗೌಡ ಗೆಲುವಿಗೆ ವಿಶೇಷ ಮುತುವರ್ಜಿ ಕೂಡ ವಹಿಸಿದರು.

G Hareeshkumar | news18-kannada
Updated:December 10, 2019, 8:14 PM IST
ಮಂಡ್ಯದಲ್ಲಿ ಕಮಲ ಅರಳಿಸಿದ ವಿಜಯೇಂದ್ರರನ್ನು ಮಂತ್ರಿ ಮಾಡಿ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಪತ್ರ
ಕೆಆರ್​ ಪೇಟೆ ಗೆಲುವಿಗೆ ಮಗ ವಿಜಯೇಂದ್ರನಿಗೆ ಸಿಹಿ ತಿನಿಸಿ ಸಿಎಂ ಸಂಭ್ರಮ
  • Share this:
ಬೆಂಗಳೂರು(ಡಿ.10) : ಮಂಡ್ಯದಲ್ಲಿ ಪ್ರಥಮಬಾರಿಗೆ  ಬಿಜೆಪಿ ಗೆಲುವಿಗೆ ಕಾರಣರಾದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ  ಮಾಡಿ ಎಂದು ಅಖಿಲ ಭಾರತ ವೀರ ಶೈವ ಮಹಾಸಭಾ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಆಗ್ರಹ ಮಾಡಿದ್ದಾರೆ.

ಕಳೆದ ಬಾರಿ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಸೋಲಪ್ಪಿದ್ದ ವಿಜಯೇಂದ್ರ, ಹಳೆ ಮೈಸೂರು ಭಾಗದಲ್ಲಿ ಸುತ್ತಾಡುವ ಮೂಲಕ ಇಲ್ಲಿನ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡುತ್ತಲೇ ಇದ್ದರು. ಇದರ ಫಲವಾಗಿ ನಾರಾಯಣಗೌಡ ಗೆಲುವಿಗೆ ವಿಶೇಷ ಮುತುವರ್ಜಿ ಕೂಡ ವಹಿಸಿದರು.

latter
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರ


ಗೌಡ ಮತಗಳೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಜೆಡಿಎಸ್​ ಈಗಾಗಲೇ ಆಳವಾದ ಬೇರು ಬಿಟ್ಟಿತ್ತು. ಜೊತೆಗೆ ನಾರಾಯಣಗೌಡ ಅನರ್ಹ ಎಂಬ ಪಟ್ಟ ಹೊಂದುವ ಮೂಲಕ ಜನರ ಆಕ್ರೋಶಕ್ಕೆ ಕೂಡ ಕಾರಣರಾಗಿದ್ದರು. ಈ ಹಿನ್ನೆಲೆ ಬಿಜೆಪಿ ಗೆಲುವು ಇಲ್ಲಿ ಸುಲಭವಾಗಿರಲಿಲ್ಲ.

ಈ ಕಾರಣದಿಂದ ಕ್ಷೇತ್ರದಲ್ಲಿಯೇ ಬೀಡುಬಿಟ್ಟ ವಿಜಯೇಂದ್ರ, ಸ್ಥಳೀಯ ಮುಖಂಡರ ಜೊತೆ ಸತತ ಸಂಪರ್ಕ ಸಾಧಿಸುತ್ತಾ, ಕೇಂದ್ರದ ಬಿಜೆಪಿ ಸಾಧನೆಗಳನ್ನು ಬಿಂಬಿಸುತ್ತಾ, ಸಿಎಂ ಯಡಿಯೂರಪ್ಪ ತವರು ಈ ಕ್ಷೇತ್ರ ಎಂದು ನೆನಪಿಸುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿ, ಕಡೆಗೂ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ : NOTA : ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್​​ಕ್ಕಿಂತ ನೋಟಾಕ್ಕೆ ಚಲಾವಣೆಯಾದ ಮತಗಳೇ ಅಧಿಕ ಎಲ್ಲಿ ಗೊತ್ತಾ ?

ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಬಿಜೆಪಿ ಗೆದ್ದಿದೆ. ಇದಕ್ಕೆ ವಿಜಯೇಂದ್ರ ಅವರ ಶ್ರಮ ಕಾರಣ, ಅವರು, ಎಲ್ಲಾ ವರ್ಗದವರನ್ನು ಎಲ್ಲ ಸಮುದಾಯದವರನ್ನು ಅವರ ತಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುವ ಚಾಣಾಕ್ಷತನ ಇದೆ. ಹಾಗಾಗಿ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​​ ಕುಮಾರ್​ ಕಟೀಲ್​​​ ಅವರಿಗೆ ಒತ್ತಾಯಿಸಿದ್ದಾರೆ.
First published: December 10, 2019, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading