ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಕುಮಾರಸ್ವಾಮಿ ಚಾಲನೆ: ಕನ್ನಡ ಜಾತ್ರೆಗೆ ಕೈ ಬೀಸಿ ಕರೆಯುತ್ತಿದೆ ವಿದ್ಯಾನಗರ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿದ್ಯಾಲಯ ಗೋಪುರ, ಹಂಪಿಯ ಶಿಲ್ಪ ಕಲಾಕೃತಿಗಳ ಪ್ರತಿಬಿಂಬಗಳನ್ನು ಒಳಗೊಂಡ ವೇದಿಕೆಯ ಮುಖ್ಯ ಸಭಾಮಂಟಪ ನಿರ್ಮಾಣವಾಗಿದೆ. ಕೃಷಿ ವಿಶ್ವವಿದ್ಯಾಲಯದ ಫುಟ್‍ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದಲ್ಲಿ ಮಾಧ್ಯಮ ಕೇಂದ್ರ ನಿರ್ಮಿಸಲಾಗಿದೆ. ಸುಮಾರು 500 ಪುಸ್ತಕ ಮಳಿಗೆಗಳು 250 ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ, ನೋಂದಾಯಿತ ಸದಸ್ಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Ganesh Nachikethu
Updated:January 4, 2019, 5:47 PM IST
ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಕುಮಾರಸ್ವಾಮಿ ಚಾಲನೆ: ಕನ್ನಡ ಜಾತ್ರೆಗೆ ಕೈ ಬೀಸಿ ಕರೆಯುತ್ತಿದೆ ವಿದ್ಯಾನಗರ
ಕನ್ನಡ ಧ್ವಜ
Ganesh Nachikethu
Updated: January 4, 2019, 5:47 PM IST
ಬೆಂಗಳೂರು(ಜ.04): ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅಧಿಕೃತ ಚಾಲನೆ ನೀಡಿದ್ದಾರೆ. ನಿನ್ನೆಯಿಂದಲೇ ಕನ್ನಡ ಜಾತ್ರೆಗೆ ಧಾರವಾಡ ಸಿದ್ಧವಾಗಿತ್ತು. ನಗರದ ತುಂಬೆಲ್ಲಾ ಕನ್ನಡ ಬಾವುಟಗಳು ರಾರಾಜಿಸುತ್ತಿತ್ತು. ಸಾಹಿತ್ಯ ಅಭಿಮಾನಿಗಳನ್ನು ಪೇಡಾ ನಗರಿ ಕೈ ಬೀಸಿ ಕರೆಯುತ್ತಿದೆ.

ಕನ್ನಡ ಸಾಹಿತ್ಯ  ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ್​ ಕಂಬಾರ ಸಾರೋಟು ಮೆರವಣಿಗೆ ಮಾಡಿದರು. ಕೆಸಿಡಿ ಕಾಲೇಜು ವೃತ್ತದಿಂದ ಆರಂಭವಾಗಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ನಡೆಯುತ್ತಿದೆ. ಚಂದ್ರಶೇಖರ ಕಂಬಾರರ ಮೆರವಣಿಗೆಗೆ  ಸಚಿವ ಆರ್​.ವಿ ದೇಶಪಾಂಡೆಯವರು ಚಾಲನೆ ನೀಡಿದ್ದರು. ಕಾಲೇಜು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ರಸ್ತೆಯ ಎರಡು ಬದಿಯಲ್ಲಿ ನಿಂತು ಸಮ್ಮೇಳನಾಧ್ಯಕ್ಷರಿಗೆ ಸ್ವಾಗತಿಸಿದರು. ಅಲ್ಲದೇ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗಿಯಾಗಿವೆ.

ಹಿಂದಿನಿಂದಲೂ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಮಸ್ತ ಕನ್ನಡಿಗರ ಹೆಮ್ಮೆಯ ನುಡಿ ಜಾತ್ರೆಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಯಿತು. ಬಳಿಕ ಅಂದಿನಿಂದ ಇಲ್ಲಿಯವರೆಗೂ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿಕೊಂಡು ಬಂದಿದೆ. ಇಲ್ಲಿಯವರೆಗೆ ಒಟ್ಟು 83 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ ಎನ್ನುತ್ತದೆ ಇತಿಹಾಸ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಬಿಸಿ: ಮುಂದುವರೆದ ಶೋಧಕಾರ್ಯ; ಬಂಧನ ಭೀತಿಯಲ್ಲಿ ನಟ-ನಿರ್ಮಾಪಕರು?

ಧಾರವಾಡದಲ್ಲಿ ಇದು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ. ಇಲ್ಲಿನ ಸಮ್ಮೇಳನಕ್ಕೆ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನ ಸಾಹಿತಿಗಳು, ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ. ಇನ್ನು ಪೇಡಾ ನಗರಿಯಲ್ಲಿ ಮೊದಲ ಬಾರಿಗೆ 1918ರ ಮೇ 11, 12, 13 ರಂದು 4ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರ್.ನರಸಿಂಹಚಾರ್ ಅಧ್ಯಕ್ಷತೆಯಲ್ಲಿ ನಡೆಸಿದತ್ತು. ನಂತರದಲ್ಲಿ 1933ರ ಡಿ.29, 30 ಹಾಗೂ 31 ರಂದು 19ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹುಬ್ಬಳ್ಳಿಯಲ್ಲಿ ವೈ.ನಾಗೇಶ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಗಿತ್ತು.

ಹೀಗೆಯೇ 1940 ಡಿಸೆಂಬರ್​​. 27, 28, 29ರಂದು 25ನೇ ಸಾಹಿತ್ಯ ಸಮ್ಮೇಳನ ವೈ. ಚಂದ್ರಶೇಖರ್ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ, 1957ರ ಮೇ 7, 8 ಹಾಗೂ 9 ರಂದು 39ನೇ ಸಾಹಿತ್ಯ ಸಮ್ಮೇಳನ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಇನ್ನು ಹುಬ್ಬಳಿಯಲ್ಲಿ 1990ರ ಫೆಬ್ರವರಿ 16, 17 ಹಾಗೂ 18ರಂದು ನಡೆದ 59ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಆರ್.ಸಿ ಹಿರೇಮಠರು ವಹಿಸಿಕೊಂಡಿದ್ದರು.

ಇದೀಗ 61 ವರ್ಷಗಳ ಬಳಿಕ ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 4, 5, 6 ಜನವರಿ 2019ರಂದು ಮೂರು ದಿನಗಳ ಕಾಲ ನಡೆಯುತ್ತಿದೆ. ಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ್ ಕಂಬಾರ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ವಿದ್ಯಾನಗರಿ ಧಾರವಾಡವನ್ನು ಸುಂದರವಾಗಿ ಅಲಂಕರಿಸಲಾಗಿದೆ. ನಗರದ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಎಲ್ಲಾ ಕಚೇರಿ, ಕಟ್ಟಡಗಳ ಕಂಪೌಂಡ್‍ಗಳಲ್ಲಿ ಕನ್ನಡ ನಾಡಿನ ಕೆಂಪು, ಹಳದಿ ಬಣ್ಣದ ಧ್ವಜ ರಾರಾಜಿಸುತ್ತಿವೆ.
Loading...

ಇದನ್ನೂ ಓದಿ: ಕಾಂಗ್ರೆಸ್-ಆಪ್​ ಮೈತ್ರಿಗೆ ಆಕ್ಷೇಪ: ಎಎಪಿ ತೊರೆದ ಪೋಲ್ಕ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಅಜಯ್​ ರಾಜೀನಾಮೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿದ್ಯಾಲಯ ಗೋಪುರ, ಹಂಪಿಯ ಶಿಲ್ಪ ಕಲಾಕೃತಿಗಳ ಪ್ರತಿಬಿಂಬಗಳನ್ನು ಒಳಗೊಂಡ ವೇದಿಕೆಯ ಮುಖ್ಯ ಸಭಾಮಂಟಪ ನಿರ್ಮಾಣವಾಗಿದೆ. ಕೃಷಿ ವಿಶ್ವವಿದ್ಯಾಲಯದ ಫುಟ್‍ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದಲ್ಲಿ ಮಾಧ್ಯಮ ಕೇಂದ್ರ ನಿರ್ಮಿಸಲಾಗಿದೆ. ಸುಮಾರು 500 ಪುಸ್ತಕ ಮಳಿಗೆಗಳು 250 ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ, ನೋಂದಾಯಿತ ಸದಸ್ಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

-----------------
ಧಾರವಾಡ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

First published:January 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ