ಸೂಕ್ತ ದಾಖಲೆ ಸಲ್ಲಿಸುವ ಎಲ್ಲಾ ರೈತರ ಸಾಲ ಮನ್ನಾ ಆಗಲಿದೆ, ಊಹಾಪೋಹಗಳಿಗೆ ಕಿವಿಗೊಡಬೇಡಿ; ಬಿಎಸ್​ವೈ ಮನವಿ

ರಾಜ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಸರಿಯಾದ ದಾಖಲೆ ಸಲ್ಲಿಸದ 1.10 ಲಕ್ಷ ರೈತರು ಸಾಲಮನ್ನಾ ಯೋಜನೆಯಿಂದ ಹೊರಗುಳಿಯಲಿದ್ದಾರೆ ಮತ್ತು 2019-20 ಆರ್ಥಿಕ ವರ್ಷದಿಂದ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲಿದೆ ಎಂದು ಇಂದು ಸಂಜೆಯಿಂದ ವರದಿಯಾಗುತ್ತಿತ್ತು. ಆರ್ಥಿಕ ಸಚಿವಾಲಯದ ಸಿಬ್ಬಂದಿಗಳೇ ಈ ಕುರಿತು ಮಾಹಿತಿ ನೀಡಿದ್ದರು.

MAshok Kumar | news18-kannada
Updated:February 29, 2020, 7:24 AM IST
ಸೂಕ್ತ ದಾಖಲೆ ಸಲ್ಲಿಸುವ ಎಲ್ಲಾ ರೈತರ ಸಾಲ ಮನ್ನಾ ಆಗಲಿದೆ, ಊಹಾಪೋಹಗಳಿಗೆ ಕಿವಿಗೊಡಬೇಡಿ; ಬಿಎಸ್​ವೈ ಮನವಿ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಫೆಬ್ರವರಿ 28); ಸಾಲಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಲಿದೆ ಎಂಬ ಊಹಾಪೋಹ ಹರಿದಾಡುತ್ತಿದ್ದು, ಇಂತಹ ವಿಚಾರಗಳಿಗೆ ರೈತರು ಕಿವಿಗೊಡಬೇಡಿ ಸೂಕ್ತ ದಾಖಲೆ ನೀಡುವ ಎಲ್ಲಾ ರೈತರ ಸಾಲಮನ್ನಾ ಆಗಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಸರಿಯಾದ ದಾಖಲೆ ಸಲ್ಲಿಸದ 1.10 ಲಕ್ಷ ರೈತರು ಸಾಲಮನ್ನಾ ಯೋಜನೆಯಿಂದ ಹೊರಗುಳಿಯಲಿದ್ದಾರೆ ಮತ್ತು 2019-20 ಆರ್ಥಿಕ ವರ್ಷದಿಂದ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲಿದೆ ಎಂದು ಇಂದು ಸಂಜೆಯಿಂದ ವರದಿಯಾಗುತ್ತಿತ್ತು. ಆರ್ಥಿಕ ಸಚಿವಾಲಯದ ಸಿಬ್ಬಂದಿಗಳೇ ಈ ಕುರಿತು ಮಾಹಿತಿ ನೀಡಿದ್ದರು.

ಈ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸರಣಿ ಟ್ವಿಟ್ ಮಾಡುವ​ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಈ ಕುರಿತು ಟ್ವಿಟ್​ ಮೂಲಕ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, "ರೈತರ ಸಾಲ ಮನ್ನಾ ವಿಷಯವಾಗಿ ಕೆಲವು ಊಹಾಪೋಹಗಳು ಹರಿದಾಡುತ್ತಿದ್ದು, ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬಿಡುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವ ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.  ಸರ್ಕಾರ ರೈತರ ಪರವಾಗಿದ್ದು, ದಾರಿ ತಪ್ಪಿಸುವ ಹೇಳಿಕೆಗಳಿಗೆ ರೈತರು ಕಿವಿಗೊಡಬಾರದು" ರೈತರಲ್ಲಿ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ : ರೈತರ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾಗಿರುವ ಸರ್ಕಾರ; ಟ್ವಿಟ್​ನಲ್ಲಿ ಚಾಟಿ ಬೀಸಿದ ಹೆಚ್​ಡಿಕೆ
First published: February 29, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading