ಮಂಗಳೂರು (ಜನವರಿ 20); ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಂದು ಒಂದರ ಹಿಂದೊಂದರಂತೆ ಪತ್ತೆಯಾದ ಸಜೀವ ಬಾಂಬ್ ಇಡೀ ರಾಜ್ಯವನ್ನು ತಲ್ಲಣಕ್ಕೆ ದೂಡಿತ್ತು. ಹೀಗೆ ಪತ್ತೆಯಾದ ಸ್ಪೋಟಕವನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಕರಾವಳಿಗೆ ತೆರಳಿದ್ದರು. ಆದರೆ, ಪೊಲೀಸರು ಇದೀಗ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಬದಲು ಸ್ಪೋಟಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.
ಬೆಳಗ್ಗೆ ವಿಮಾನ ನಿಲ್ದಾಣದ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಲ್ಯಾಪ್ಟಾಪ್ ಬ್ಯಾಗ್ನಲ್ಲಿ ಒಂದು ಸಜೀವ ಬಾಂಬ್ ಪತ್ತೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಹೈದರಾಬಾದ್ಗೆ ತೆರಳಲು ಸಿದ್ಧವಾಗಿದ್ದ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಇನ್ನೊಂದು ಕಡೆಯೂ ಬಾಂಬ್ ಇಡಲಾಗಿದ್ದು ಅದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಈ ಸ್ಪೋಟಕವನ್ನು ಆರ್ಡಿಎಕ್ ನಿಂದ ಸಿದ್ಧಪಡಿಸಿರುವ ಸುಧಾರಿತ ಸ್ಪೋಟಕ ಎಂದು ಊಹಿಸಲಾಗಿದ್ದು, ಇದನ್ನು ನಿಷ್ಕ್ರಿಯಗೊಳಿಸಲು ಮಂಗಳೂರಿನ ಕೆಂಜಾರ್ ಮೈದಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ನಿಷ್ಕ್ರಿಯಗೊಳಿಸುವ ಸಂದರ್ಭದಲ್ಲಿ ಬಾಂಬ್ ಸ್ಫೋಟಕ್ಕೊಳಗಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಅದನ್ನು ಸ್ಪೋಟಿಸಲು ಮುಂದಾಗಿದೆ.
ಸ್ಪೋಟಿಸಲು ಅಗತ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಬಾಂಬ್ ಸ್ಪೋಟಿಸುವ ಕುರಿತು ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಮಂಗಳೂರಿನ ಇಂಡಿಗೋ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆ; ಕರಾವಳಿ ತಲ್ಲಣ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ