ಮಂಡ್ಯದ ಕಿಕ್ಕೇರಿ ಈಗ ಲಕಲಕ… ಬಾಲಿವುಡ್ ಸುಂದರಿ ಆಲಿಯಾ ಭಟ್​ಳ ಸಹೃದಯಕ್ಕೆ ಗ್ರಾಮಸ್ಥರು ಫುಲ್ ಖುಷ್


Updated:July 15, 2018, 12:47 PM IST
ಮಂಡ್ಯದ ಕಿಕ್ಕೇರಿ ಈಗ ಲಕಲಕ… ಬಾಲಿವುಡ್ ಸುಂದರಿ ಆಲಿಯಾ ಭಟ್​ಳ ಸಹೃದಯಕ್ಕೆ ಗ್ರಾಮಸ್ಥರು ಫುಲ್ ಖುಷ್
ಆಲಿಯಾ ಭಟ್

Updated: July 15, 2018, 12:47 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜು. 15): ಕಾಶ್ಮೀರದ ಸುಂದರಿ ಹಾಗೂ ಬಾಲಿವುಡ್ ನಟಿ ಆಲಿಯಾ ಭಟ್ ಕೇವಲ ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯ ಮಾಡೊದ್ರಲ್ಲೂ ಎತ್ತಿದ್ದ ಕೈ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮಕ್ಕೆ ಆಲಿಯಾ ಭಟ್ ಬೆಳಕಾಗಿದ್ದಾರೆ. ಕಿಕ್ಕೇರಿಯ 40 ಮನೆಗಳಿಗೆ ಆಲಯಾ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಸೋಲಾರ್ ಲೈಟ್ ಸೌಲಭ್ಯ ಒದಗಿಸುತ್ತಿರುವ ಆಲಿಯಾ ಭಟ್ ಅವರ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ತಮ್ಮ ಉಡುಪುಗಳನ್ನ ಮಾರಾಟಕ್ಕೆ ಇಟ್ಟಿದ್ದ ಆಲಿಯಾ, ಬಂದ ಹಣವನ್ನು ಬೆಂಗಳೂರಿನ "ಲೀಟರ್ ದಿ ವೈಟರ್" ಎಂಬ ಸಂಸ್ಥೆಗೆ ಕೊಟ್ಟಿದ್ದಾರೆ. ಈ ಸಂಸ್ಥೆಯವರು ಆಲಿಯಾ ಅವರನ್ನ ತಮ್ಮ ಸಂಸ್ಥೆಗೆ ಚಾರಿಟಿ ಆಗುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿರೋ ಆಲಿಯಾ ಮೊದಲ ಕೆಲಸವಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮಕ್ಕೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

ಈ ವಿಚಾರವನ್ನು ಟ್ವೀಟ್ ಮಾಡಿರೋ ಆಲಿಯಾ ಖುಷಿ ವ್ಯಕ್ತಪಡಿಸಿದ್ದಾರೆ. ಇಂಥಾ ಸಮಾಜಮುಖಿ ಕೆಲಸಕ್ಕೆ ಯಾರೇ ಮುಂದಾದರೂ ಸ್ವಾಗತ ಅಂದಿದ್ದಾರೆ.


Loading...ಇನ್ನು, ಕಿಕ್ಕೇರಿ ಗ್ರಾಮಸ್ಥರೂ ಕೂಡ ಆಲಿಯಾ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದಶಕಗಳಿಂದ ಇಲ್ಲಿಯ ಜನಪ್ರತಿನಿಧಿಗಳು ತಮ್ಮತ್ತ ದೃಷ್ಟಿಯೇ ಹರಿಸಿರಲಿಲ್ಲ. ಅವರು ಮಾಡಬೇಕಾದ ಕೆಲಸವನ್ನು ಈ ಮೇಡಂ ಮಾಡಿದ್ದಾರೆ. ಊರಿಗೆ ದೀಪ ಕೊಟ್ಟು ಹೋಗಿದ್ಧಾರೆ ಎಂದು ಊರಿನ ಗ್ರಾಮಸ್ಥ ಅಕ್ಮಲ್ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ