• Home
  • »
  • News
  • »
  • state
  • »
  • Siddaramaiah Song: ಸಿದ್ದರಾಮಯ್ಯ ಬರ್ತ್ ಡೇಗೆ ಸಾಂಗ್ ರಿಲೀಸ್: ‘ಮುಂದಿನ ಸಿಎಂ’ ಬೆಂಕಿಗೆ ಬಿತ್ತು ತುಪ್ಪ!

Siddaramaiah Song: ಸಿದ್ದರಾಮಯ್ಯ ಬರ್ತ್ ಡೇಗೆ ಸಾಂಗ್ ರಿಲೀಸ್: ‘ಮುಂದಿನ ಸಿಎಂ’ ಬೆಂಕಿಗೆ ಬಿತ್ತು ತುಪ್ಪ!

ಸದ್ದು ಮಾಡ್ತಿದೆ ಸಿದ್ದರಾಮಯ್ಯ ಸಾಂಗ್​

ಸದ್ದು ಮಾಡ್ತಿದೆ ಸಿದ್ದರಾಮಯ್ಯ ಸಾಂಗ್​

ಸಿದ್ಧರಾಮೋತ್ಸವಕ್ಕೆ ಅದ್ಧೂರಿ ತಯಾರಿ ನಡೆದಿರುವಾಗಲೇ, ಮುಂದಿನ ಸಿಎಂ ವಿಚಾರವೂ ಮತ್ತೆ ಮುನ್ನಲೆಗೆ ಬಂದಿದೆ. ಸಿದ್ಧರಾಮಯ್ಯ ಅವರೇ ಮುಂದಿನ ಸಿಎಂ ಅಂತ ಅಭಿಮಾನಿಗಳು ಬಿಡುಗಡೆ ಮಾಡಿರೋ ಆಲ್ಬಂ ಸಾಂಗ್ ದೊಡ್ಡ ಸದ್ದು ಮಾಡಲಾರಂಭಿಸಿದೆ.

  • Share this:

ಹುಬ್ಬಳ್ಳಿ: ಮುಂದಿನ ಸಿಎಂ (Next CM) ವಿಚಾರ ಕಾಂಗ್ರೆಸ್ ನಲ್ಲಿ (Congress) ಕೊತ ಕೊತ ಕುದಿಯುವಂತೆ ಮಾಡಿದೆ. ಹೈಕಮಾಂಡ್ (Congress High Command) ಸೂಚನೆ ನೀಡಿದ ನಂತರವೂ ನಾಯಕರು ಮಾತ್ರ ಮುಂದಿನ ಸಿಎಂ ಚರ್ಚೆಯನ್ನು ಕೈಬಿಟ್ಟಿಲ್ಲ. ಜಮೀರ್ ಅಹ್ಮದ್ ರಿಂದ ಹಿಡಿದು ಹಲವಾರು ನಾಯಕರು ಮುಂದಿನ ಸಿಎಂ ಸಿದ್ಧರಾಮಯ್ಯ ಅಂತ ಬಿಂಬಿಸುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಸ್ಥಾನಕ್ಕೆ ಎಸ್.ಆರ್.ಪಾಟೀಲರು ಸೂಕ್ತ ಅಭ್ಯರ್ಥಿ ಅಂತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಬಾಗಲಕೋಟೆಯಲ್ಲಿ ಹೇಳಿದ್ದರು. ಇದೆಲ್ಲದರ ವಿರುದ್ಧ ಕಿಡಿಕಾರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್, ಎಐಸಿಸಿ ಅಧ್ಯಕ್ಷರ ನಿರ್ಣಯವೇ ಅಂತಿಮ ಅಂತ ಹೇಳಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಹೋಗೋದಾಗಿ ತಿಳಿಸಿದ್ದರು. ಇದರ ಬೆನ್ನ ಹಿಂದೆಯೇ ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿರೋ ಸಿದ್ಧರಾಮಯ್ಯ ಆಲ್ಬಂ ಸಾಂಗ್ ದೊಡ್ಡ ಸದ್ದು ಮಾಡಲಾರಂಭಿಸಿದೆ.
ಸಿದ್ದರಾಮಯ್ಯ ಮುಂದಿನ ಸಿಎಂ ಸಾಂಗ್​ 


ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿ ಮಾರ್ಪಟ್ಟಿದೆ. ಬಣಗಳ ಗುದ್ದಾಟಗಳ ನಡುವೆ  ಕೈ ಪಾಳಯ ಹೊತ್ತಿ ಉರಿಯುವಂತಾಗಿದೆ. ಆ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯೋ ಕೆಲಸವನ್ನು ಸಿದ್ದರಾಮಯ್ಯ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡ ಮತ್ತು ಮಾಜಿ ಸಚಿವ ಸಂತೋಷ ಲಾಡ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಅಲ್ಬಮ್ ಸಾಂಗ್ ನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
75ನೇ ಜನ್ಮದಿನದ ಅಂಗವಾಗಿ ಆಲ್ಬಂ ಸಾಂಗ್


ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ, ಕರುನಾಡಿನ ಜನತೆಯಿಂದ ಇದು ಖಾಯಂ ಎಂಬ ಸಾಂಗ್ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಆಲ್ಬಂ ಸಾಂಗ್ ಲೋಕಾರ್ಪಣೆ ಮಾಡಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಕುರಿತ ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ. ಸಿದ್ಧರಾಮಯ್ಯ ಅವರ ಬಲಗೈ ಬಂಟ ಮತ್ತು ಮಾಜಿ ಸಚಿವ ಸಂತೋಷ ಲಾಡ್ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.


ಇದನ್ನೂ ಓದಿ: Puneeth Rajkumar: ಚಕ್ರವರ್ತಿ ಸೂಲಿಬೆಲೆ ವಿರುದ್ಧ ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್​! ಬೆಂಕಿ ಹೊತ್ತಿಸಿದೆ ಆ ಒಂದು ಟ್ವೀಟ್​


ವಿಚಿತ್ರವೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್ ಅವರು ಹುಬ್ಬಳ್ಳಿಯಲ್ಲಿದ್ದ ವೇಳೆಯಲ್ಲಿಯೇ ಈ ಆಲ್ಬಂ ಸಾಂಗ್ ಬಿಡುಗಡೆ ಮಾಡಿ ಪರೋಕ್ಷವಾಗಿ ಸೆಡ್ಡು ಹೊಡೆಯಲಾಗಿದೆ. ಸಿದ್ಧರಾಮಯ್ಯ ಅವರ ಹೆಸರನ್ನೂ ಬಾಯಲ್ಲಿ ಹೇಳೋಕೆ ಹಿಂದೇಟು ಹಾಕಿ, ನಮ್ಮ ಮಾಜಿ ಸಿಎಂ ಅವರ ಜನುಮ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗೋದಾಗಿ ಡಿಕೆಶಿ ಹೇಳಿ ಪರೋಕ್ಷವಾಗಿ ಸಿದ್ಧರಾಮೋತ್ಸವಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಸಿದ್ಧರಾಮೋತ್ಸವದ ಹೆಸರಲ್ಲಿ ಮುಂದಿನ ಸಿಎಂ ಸಿದ್ಧರಾಮಯ್ಯ ಅನ್ನೋದನ್ನು ಬಿಂಬಿಸಲು ಅವರ ಅಭಿಮಾನಿಗಳು ಯತ್ನಿಸಿದ್ದಾರೆ. ಹೊತ್ತಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯೋ ಯತ್ನ ಎಂಬ ಮಾತು ಕೇಳಿ ಬಂದಿದೆ.


ಪಾಲಿಕೆ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರ ಆಕ್ರೋಶ...


ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿರುವುದರಿಂದ  ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗದೆ, ಕಾಮಗಾರಿಯನ್ನೂ ನಡೆಸದೆ ಹೋರಾಟಕ್ಕಿಳಿಯಲು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ತೀರ್ಮಾನಿಸಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಶರದ ದೊಡ್ಡಮನಿ, ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಪಾಲಿಕೆಯಲ್ಲಿ ಆರ್ಥಿಕ ಅಶಿಸ್ತಿನಿಂದ ಗುತ್ತಿಗೆದಾರರಗೆ ತೊಂದರೆಯಾಗಿದೆ. 60 ಕೋಟಿ ರೂಪಾಯಿವರೆಗೂ ಗುತ್ತಿಗೆದಾರರಿಗೆ ಹಣ ನೀಡಬೇಕಿದೆ. ಆದರೆ ಹಣಕಾಸಿನ ಕೊರತೆಯಿದೆ ಅಂತ ಬಾಕಿ ಹಣವನ್ನೇ ಪಾವತಿಸುತ್ತಿಲ್ಲ. ಕಾಮಗಾರಿ ಪೂರೈಸಿ ಹಣಕ್ಕಾಗಿ ತಿಂಗಳಾನುಗಟ್ಟಲೇ ಕಾಯುವಂತಾಗಿದೆ. ಇದೀಗ ಮತ್ತೆ ಬೇರೆ ಬೇರೆ ಟೆಂಡರ್ ಗಳನ್ನು ಕರೆಯುತ್ತಿದ್ದಾರೆ.


ಟೆಂಡರ್ ಕರೆಯೋದು, ಕಾಮಗಾರಿ ಮಾಡಿಸೋದನ್ನು ಮಾಡ್ತಿದಾರೆ.
ಆದರೆ ಹಣ ಕೊಡದೇ ಇದ್ದರೆ ಗುತ್ತಿಗೆದಾರ ಏನು ಮಾಡಬೇಕೆಂದು ಪ್ರಶ್ನಿಸಿದ್ದಾರೆ. 130 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 123 ಕೋಟಿ ವಾರ್ಷಿಕ ನಿರ್ವಹಣೆ ವೆಚ್ಚ ಕಳೆದರೆ, ಉಳಿಯೋದು 7 ಕೋಟಿ ರೂಪಾಯಿ ಮಾತ್ರ. ಆದರೆ ಪಾಲಿಕೆ 360 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಕೆ ಟೆಂಡರ್ ಕರೆಯಲಾಗಿದೆ. ಹೀಗಾಗಿ ಅಧಿಕಾರಿಗಳ ಧೋರಣೆ ವಿರೋಧಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗದಿರೋಕೆ ತೀರ್ಮಾನಿಸಲಾಗಿದೆ. ಕಾಮಗಾರಿಯನ್ನೂ ಬಂದ್ ಮಾಡಿ ಆಗಷ್ಟ್ 08 ರಿಂದ ಪಾಲಿಕೆ ಎದುರು ಹೋರಾಟ ಮಾಡುವುದಾಗಿ ಶರದ ದೊಡ್ಡಮನಿ ತಿಳಿಸಿದ್ದಾರೆ.

Published by:Kavya V
First published: