Bagalakote: ಮುಸ್ಕಾನ್​ನನ್ನು ಹೊಗಳಿದ ಅಲ್ ಖೈದಾ: ಎಲ್ಲಾ BJP ಅವ್ರೇ ಹುಟ್ಟು ಹಾಕೋದು ಎಂದ್ರು ಸಿದ್ದರಾಮಯ್ಯ

ಇಂಟೆಲಿಜೆನ್ಸಿ ಮಾಹಿತಿ ಕೇಳುತ್ತೇನೆ ಎಂದು ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಇಂಟೆಲಿಜೆನ್ಸ್​ನವರು ರಿಪೋರ್ಟ್ ಮಾಡುತ್ತಾರೆ. ಆದರೂ ಗೊತ್ತಿಲ್ಲ ಅಂದರೆ ಏನಂತ ಹೇಳಬೇಕು ಎಂದು ಕಿಡಿಕಾರಿದ್ರು

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬಾಗಲಕೋಟೆ (ಏ.6): ರಾಜ್ಯದ ಮೇಲೆ ಅಲ್ ಖೈದಾ (Al-Qaeda) ಉಗ್ರ ಆಯ್ಮಾನ್ ಜವಾಹಿರಿ ಕಣ್ಣು ಬಿದ್ದಿದೆ. ಮುಸ್ಕಾನ್​ (Muskaan) ಹೊಗಳಿ ಅಲ್​​ಖೈದಾ ಉಗ್ರನ ವಿಡಿಯೋ ವಿಚಾರವಾಗಿ ಎಸ್.ಕೆ.ಆಲೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ. ಇಂತಹದ್ದನ್ನೆಲ್ಲಾ ಬಿಜೆಪಿಯವರೇ (BJP) ಹುಟ್ಟುಹಾಕುವುದು. ಎಲ್ರೀ ಉಗ್ರ? ಯಾರು ಉಗ್ರ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಆರ್​ಎಸ್​​ಎಸ್​ನವರೇ ಇಂತಹ ವಿಡಿಯೋಗಳನ್ನು(Video) ಕಳುಹಿಸುವುದು. ಈ ಬಗ್ಗೆ ತನಿಖೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಸಿದ್ದರಾಮಯ್ಯ ಹೇಳಿದ್ರು. 

ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಉಗ್ರ ಆಯ್ಮಾನ್ ಜವಾಹಿರಿ ಬಗ್ಗೆ ಇಂಟೆಲಿಜೆನ್ಸಿ ಮಾಹಿತಿ ಕೇಳುತ್ತೇನೆ ಎಂದು ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಇದೆಯಲ್ಲಾ ಸಿಎಂ ಇಂಟೆಲಿಜೆನ್ಸ್ ಬಳಿ ತಿಳಿದುಕೊಂಡ ಏನು ಹೇಳೋದು. ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಇಂಟೆಲಿಜೆನ್ಸ್​ನವರು ರಿಪೋರ್ಟ್ ಮಾಡುತ್ತಾರೆ. ಆದರೂ ಗೊತ್ತಿಲ್ಲ ಅಂದರೆ ಏನಂತ ಹೇಳಬೇಕು. ಈ ಬಗ್ಗೆ ತನಿಖೆ ಆಗಬೇಕು. ಯಾರೆ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ನಾನೇ ಮಾಡಲಿ ಅಥವಾ ಯಾವುದೇ ಧರ್ಮದವರು ಮಾಡಲಿ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಸ್ಕಾನ್​ಗೂ ಅಲ್​ ​ಖೈದಾಗೂ ಯಾವುದೇ ಸಂಬಂಧವಿಲ್ಲ

ಆ ವಿಡಿಯೋಗೂ ಮುಸ್ಕಾನ್​ಗೂ ಯಾವುದೇ ಸಂಬಂಧವಿಲ್ಲ. ಅಲ್​ ​ಖೈದಾಗೂ ಆ ಹುಡುಗಿಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದ ಜನ ಅಲ್​​ಖೈದಾ ಬರುವುದಕ್ಕೂ ಬಿಡುವುದಿಲ್ಲ ಎಂದು ಮೈಸೂರಿನಲ್ಲಿ ಪರಿಷತ್​ ಮಾಜಿ ಸದಸ್ಯ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಮುಸ್ಕಾನ್​​ ಹುಡುಗಿಗೆ ಅಲ್​ ಖೈದಾ ಸಂಘಟನೆಯೆ ಗೊತ್ತಿಲ್ಲ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಅರೆಸ್ಟ್​ ಮಾಡಿ. ಅದನ್ನು ಬಿಟ್ಟು ಸುಮ್ಮನೆ ಏನೇನೋ ಮಾತಾಡಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: BJP ಲಂಚಾವತಾರ, ಪಿಡಿಒ ಆಫೀಸ್​​ ಗೋಡೆ ತಟ್ಟಿದ್ರೆ ಕಾಸು, ಕಾಸು ಅಂತದೆ: ಡಿಕೆಶಿ

ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್ ತಿರುಗೇಟು

ಇವರ ಹೇಳಿಕೆಯ ಬೆನ್ನಲ್ಲೇ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ಸಿ.ಎಂ.ಇಬ್ರಾಹಿಂ ಹಾರಿಕೆ ಉತ್ತರವನ್ನು ಚೆನ್ನಾಗಿ ಕೊಡುತ್ತಾರೆ. ಮೊದಲು ಈ ಕುರಿತು ತನಿಖೆಯಾಗಲಿ. ಅಲ್‌ಖೈದಾ ಪ್ರಮುಖನೇ ಸ್ಪಷ್ಟವಾಗಿ ಮಾತನಾಡಿದ್ದಾನೆ. ಇವರ್ಯರೋ ಹೇಗೆ ವಿಡಿಯೋ ಬಿಡುತ್ತಾರೆ. ಇಂತಹ ಭಯೋತ್ಪಾದನೆ ಕೃತ್ಯಕ್ಕೆ ಬೆಂಬಲ‌ ಕೊಡಬೇಡಿ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಮುಸ್ಕಾನ್ ನನ್ನು ಹಾಡಿ ಹೊಗಳಿದ ಅಲ್​ ಖೈದ​

ಮಂಡ್ಯದಲ್ಲಿ ಮೊಳಗಿದ ಜೈ ಶ್ರೀರಾಮ್ ಎಂಬ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು ಲಕ್ಷ ಲಕ್ಷ ಬಹುಮಾನ ನೀಡಿತ್ತು. ಅದರ ಮುಂದಿನ ಸರದಿಯಾಗಿ ವಿಶ್ವದ ನಂಬರ್ ಒನ್ ಉಗ್ರ ಸಂಘಟನೆ ಅಲ್ ಖೈದಾ ಮುಸ್ಕಾನ್ ಳನ್ನು ಹಾಡಿ ಹೊಗಳಿದೆ.

ಮುಸ್ಕಾನ್ ಮೊಳಗಿಸಿರುವ ಘೋಷಣೆಗೆ ಮೆಚ್ಚುಗೆ

ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾನೆ. 9 ನಿಮಿಷಗಳ ವಿಡಿಯೋದಲ್ಲಿ “ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್ ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: JJ Nagara Murder: ಕನ್ನಡ ಮಾತನಾಡಿದ್ದಕ್ಕೆ ಕೊಲೆ ಅಂತ ಹೇಳಿದ್ದ ಸಚಿವ ಅರಗ ಜ್ಞಾನೇಂದ್ರ ಯು ಟರ್ನ್

ಕೆಲವು ಸಾಲುಗಳ ಕವಿತೆ

“ಆ ಕವನಗಳ ಸಾಲುಗಳನ್ನು ಹೇಳುವ ಮೂಲಕ ಅವಳಿಗೆ ಇದೇ ನನ್ನ ಕೊಡುಗೆಯಾಗಿದೆ. ಸಹೋದರಿ ಇದನ್ನು ಸ್ವೀಕರಿಸುತ್ತಾಳೆ ಎಂದು ನಂಬಿದ್ದೇನೆ” ಎಂದು ಅಮನ್-ಅಲ್-ಜವಾಹರಿ ಹೇಳಿದ್ದಾನೆ.
ಈ ಮೂಲಕ ಮುಸ್ಕಾನ್ ಕರ್ನಾಟಕ, ಭಾರತ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಗಳಿಸಿದ್ದಾಳೆ.
Published by:Pavana HS
First published: