ಬೆಂಗಳೂರು: ಅಕ್ಷಯ ತೃತೀಯ (Akshaya Tritiya) ಅಂದರೆ ಶುಭದಿನ. ಈ ದಿನ ಮನೆಗೆ ಚಿನ್ನ (Gold) ತೆಗೆದುಕೊಂಡು ಬಂದರೆ ಧನಲಕ್ಷ್ಮಿ ಮನೆಗೆ ಬರುತ್ತಾಳೆ ಅನ್ನೋ ಪ್ರತೀತಿ ಇದೆ. ಇದಕ್ಕಾಗಿಯೇ ಅಕ್ಷಯ ತೃತೀಯ ದಿನ ಜನ ಬಂಗಾರ ಖರೀಸಿದ್ತಾರೆ. ಆದರೆ ಈ ಬಾರಿ ಸಂಭ್ರಮ (Celebration) ಕಳೆದು ಹೋಗಿತ್ತು. ಹೌದು, ಇವತ್ತು ಅಕ್ಷಯ ತೃತೀಯ, ಇಂದು ಚಿನ್ನ ಖರೀದಿ ಮಾಡಿದರೆ ನಮ್ಮಲ್ಲಿರುವ ಐಶ್ವರ್ಯಾ ವೃದ್ಧಿಯಾಗುತ್ತೆ ಅನ್ನೋ ಪ್ರತೀತಿ ಇದೆ. ಹೀಗಾಗಿ ಪ್ರತಿ ವರ್ಷವೂ ಹಬ್ಬದ (Festival) ಸಂದರ್ಭದಲ್ಲಿ ಬಹುತೇಕ ಮಂದಿ ಚಿನ್ನ ಖರೀದಿ (Purchase) ಮಾಡ್ತಾರೆ. ಆದರೆ ಈ ಬಾರಿ ಖರೀದಿ ಭರಾಟೆ ಕುಂಠಿತ ಆಗಿತ್ತು.
ಈ ಬಾರಿ ಅಕ್ಷಯ ತೃತೀಯ ಸಂಭ್ರಮಕ್ಕೆ ಅಡ್ಡಿಯಾಗಿದ್ದು ಚಿನ್ನದ ಬೆಲೆ ಏರಿಕೆ. ಚಿನ್ನದ ರೇಟ್ ಏಕಾಏಕಿ ಗಗನಕ್ಕೆ ಏರಿದ ಹಿನ್ನೆಲೆಯಲ್ಲಿ, ಮಧ್ಯಮ ವರ್ಗದವರು ಚಿನ್ನ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕಿದ್ದಾರೆ. ಒಂದು ಗ್ರಾಂ ಚಿನ್ನ ಖರೀದಿ ಮಾಡಬೇಕು ಎಂದರೆ 5-6 ಸಾವಿರ ರೂಪಾಯಿ ಬೇಕಿದ್ದು, ಜನರು ಚಿನ್ನದ ಅಂಗಡಿ ಕಡೆಗೆ ಸುಳಿಯಲಿಲ್ಲ. ಅನೇಕ ಚಿನ್ನದ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಅಂತಿದ್ದವು. ಕಳೆದ 2 ತಿಂಗಳಿನಿಂದ ಚಿನ್ನದ ಬೆಲೆ ಏರಿಕೆ ಆಗುತ್ತಾನೆ ಇದ್ದು, ಇದೀಗ ಎರಡು ದಿನಗಳ ಹಿಂದೆ 50 ರೂಪಾಯಿ ಏರಿಕೆ ಕಂಡಿತ್ತು.
ಇದನ್ನೂ ಓದಿ: Siddaganga Mutt: ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರಿಗೆ ಪಟ್ಟಾಭಿಷೇಕ; ಫೋಟೋಗಳಲ್ಲಿ ನೋಡಿ!
ಇನ್ನು ಅಂಗಡಿಗೆ ಬರುತ್ತಿದ್ದ ಕೆಲವರು, ಸಣ್ಣ ಆಭರಣಗಳನ್ನು ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಕೆಲ ಶಾಪ್‌ಗಳಲ್ಲಿ ರಿಯಾಯಿತಿ ಕೊಡುವುದಾಗಿ ಹೇಳಿದ್ದರಿಂದ ಬಂದು ಚಿನ್ನವನ್ನು ಖರೀದಿ ಮಾಡಿದ್ದರು.
ಅಕ್ಷಯ ತೃತೀಯಗೆ ವರ್ಷ ಚಿನ್ನ ಖರೀದಿ ಮಾಡಬೇಕು ಅಂತ ಬಂದಿದ್ದೇವು. ಸಾಮಾನ್ಯ ನೀಡುತ್ತಿದ್ದ ರಿಯಾಯಿತಿಗಿಂತಲೂ ಈ ಬಾರಿ ಹೆಚ್ಚಿನ ರಿಯಾಯಿತಿ ಕೊಡ್ತೀವಿ ಅಂತ ಹೇಳಿದ್ದಾರೆ. ಆದ್ದರಿಂದ ಸಹಜವಾಗಿಯೇ ಖುಷಿಯಾಗಿದೆ ಎಂದು ಚಿನ್ನದ ಖರೀದಿ ಮಾಡಲು ಬಂದ ಗ್ರಾಹಕಿಯೊಬ್ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರತಿ ವರ್ಷದ ಹಬ್ಬದ ಸಂಭ್ರಮ ಈ ಬಾರಿ ಕಂಡು ಬಂದಿಲ್ಲ. ಹೀಗಾಗಿ ಈ ವರ್ಷ ಶೇ. 30% ರಷ್ಟು ವ್ಯಾಪಾರದಲ್ಲಿ ಇಳಿಕೆಯಾಗಿದೆ ಅನ್ನೋದನ್ನ ಅಂದಾಜಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ