ಹುಬ್ಬಳ್ಳಿ (ಡಿ. 07) : ಒಂದು ಕಡೆ ತನ್ನ ಮಗನನ್ನು ಸುಪಾರಿ ಹಂತಕರಿಗೆ (killers) ಒಪ್ಪಿಸಿದ ಸ್ಥಳ ತೋರಿಸ್ತಿರೋ ತಂದೆ. ಮತ್ತೊಂದೆಡೆ ಹೂತು ಹಾಕಿದ ಜಾಗ ಸ್ಥಳ ತೋರಿಸುತ್ತಿರೋ ಸುಪಾರಿ ಕೊಲೆಗಾರ. ಸತ್ತು ಹೆಣವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮಗ. ಇಂಥದ್ದೊಂದು ಮನಕಲುಕುವ ಘಟನೆಗೆ ಧಾರವಾಡ (Dharawada) ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮ ಸಾಕ್ಷಿಯಾಗಿದೆ.
ಯಾರ ಕೊಲೆಗೆ ಯಾರ ಸುಪಾರಿ, ಯಾರೀ ಕೊಲೆಗಡುಕರು
ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಕೊಲೆ. ಹೆತ್ತಪ್ಪನೇ ಮಗನ ಕೊಲೆಗೆ ಸುಪಾರಿ ನೀಡಿ, ಕೊಲೆಗಡುಕರ ಕೈಗೆ ಒಪ್ಪಿಸಿ ಬರ್ತಾನೆ ಅಂದ್ರೆ ಆತನ ಮನಸ್ಥಿತಿ ಹೇಗಿರಬೇಕು. ಕಾಟ ಕೊಡ್ತಿದ್ದ ಮಗನಿಗೆ ಪಾಠ ಕಲಿಸೋಕೆ ಕಲ್ಲು ಹೃದಯದ ಅಪ್ಪ ಮಾಡಿದ ಆ ಒಂದು ಕೆಲಸದಿಂದ ಇಡೀ ಕುಟುಂಬವೇ ತಲ್ಲಣಿಸುವಂತಾಗಿದೆ.
ಮಗ ಅಖಿಲ್ ಕೊಲೆಗೆ ಸುಪಾರಿ ಕೊಟ್ಟ ತಂದೆ
ಆದ್ರೆ ಈತನ ಮಗ ಅಖಿಲ್ ಮಾತ್ರ ದಾರಿತಪ್ಪಿದ ಮಗನಂತಿದ್ದ. ಪೋಷಕರ ಮಾತು ಕೇಳದೆ, ದುಶ್ಚಟಗಳ ದಾಸನಾಗಿ, ತಂದೆಯನ್ನೇ ಹೊಡೆಯುವಷ್ಟು ಬೆಳೆದು ನಿಂತಿದ್ದ. ಮಗನ ಪುಂಡಾಟ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಒಂದು ನಿರ್ಧಾರಕ್ಕೆ ಬಂದ ಭರತ್ ಜೈನ್, ಮಗ ಅಖಿಲ್ ಕೊಲೆಗೆ ತಾನೇ ಸುಪಾರಿ ಕೊಟ್ಟುಬಿಟ್ಟ. ಹಾಗಂತ ಸುಪಾರಿ ಕೊಟ್ಟು ಆತ ಎಲ್ಲಿಯೋ ಕುಳಿತು ಕೊಲೆಗಡುಕರ ಕಾಲ್ ಗಾಗಿ ಕಾಯಲಿಲ್ಲ. ಬದ್ಲಿಗೆ ತಾನೇ ಮಗನನ್ನು ಕರೆದುಕೊಂಡು ಕೊಲೆಗಾರರ ಬೋನ್ ಗೆ ಬಿಟ್ಟುಬಂದಿದ್ದ.
ಮಿಸ್ಸಿಂಗ್ ಕೇಸ್ ದಾಖಲಿಸಿದ್ರು
ಬಿಸಿನೆಸ್ ಹೆಸರಲ್ಲಿ ಹುಬ್ಬಳ್ಳಿಯಿಂದ ಕಲಘಟಗಿಗೆ ಮಗನನ್ನು ಕರೆತಂದಿದ್ದ ಭರತ್ ಜೈನ್, ದೇವಿಕೊಪ್ಪ ಗ್ರಾಮದ ಬಳಿ ಕಬ್ಬಿನ ಹೊಲವೊಂದರ ಬಳಿ ಮಗನನ್ನು ಕೊಲೆಪಾತಕಿಗಳಿಗೆ ಒಪ್ಪಿಸಿದ್ದ. ಮಗನನ್ನು ಕೊಲೆ ಮಾಡಿರೋ ಫೋಟೋ ವಾಟ್ಸ್ ಆ್ಯಪ್ ಗೆ ಬಂದ ನಂತರವೇ ಆತ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಆದರೆ ಭರತ್ ಜೈನ್ ಸಹೋದರ ಅಖಿಲ್ ನಾಪತ್ತೆಯಾದ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಮಿಸ್ಸಿಂಗ್ ಕೇಸ್ ತನಿಖೆ ಕೈಗೊಂಡಾಗ ಅಸಲಿಯತ್ತು ಬಹಿರಂಗಗೊಂಡಿತ್ತು.
10 ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಆಘಾತಕಾರಿ ವಿಷಯವನ್ನು ಭರತ್ ಜೈನ್ ಬಾಯ್ಬಿಟ್ಟಿದ್ದ. ಕೊಲೆಗಾರರ ಸುಳಿವು ಆಧರಿಸಿ ಕೊನೆಗೂ ಅಖಿಲ್ ಜೈನ್ ಶವ ಪತ್ತೆ ಹಚ್ಚಲಾಗಿದೆ. ದೇವಿಕೊಪ್ಪ ಕಬ್ಬಿನ ತೋಟವೊಂದರಲ್ಲಿ ಹೂತು ಹಾಕಿದ್ದ ಶವವನ್ನು ಹೊರತೆಗೆಯಲಾಗಿದೆ.
ಮಗನನ ಶವದ ಮುಂದೆ ಗೋಳಾಟ
ಸಹಾಯಕ ಆಯುಕ್ತ ಅಶೋಕ್ ತೆಲಿ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ನೇತೃತ್ವವನ್ನು ಶವ ಹೊರ ತಗೆದು ಪಂಚನಾಮೆ ಮಾಡಿ, ಕುಟುಂಬದ ಸದಸ್ಯರಿಗೆ ಶವ ಒಪ್ಪಿಸಲಾಗಿದೆ. ತನ್ನ ಮಗನ ಕಾಟ ತಾಳದೆ ಕೊಲೆಗಡುಕರ ಕೈಗೆ ಒಪ್ಪಿಸಿದ್ದ ಭರತ್ ಜೈನ್, ಮಗನ ಶವ ಹೊರತೆಗೆಯುತ್ತಿದ್ದಾಗ ತಾನು ಮಾಡಬಾರದ ತಪ್ಪು ಮಾಡಿಬಿಟ್ಟಿ ಅಂತ ಪಶ್ಚತ್ತಾಪ ಪಟ್ಟಿದ್ದಾನೆ.
ಭರತ್ ಜೈನ್ ಸೇರಿ ಒಟ್ಟು 7 ಜನರ ಬಂಧನ
ಘಟನೆಗೆ ಸಂಬಂಧಿಸಿ ಭರತ್ ಜೈನ್ ಸೇರಿ ಒಟ್ಟು 7 ಜನರನ್ನು ಬಂಧಿಸಿರೋದಾಗಿ ಪೊಲೀಸ್ ಆಯುಕ್ತ ಲಾಭೂ ರಾಮ್ ಮಾಹಿತಿ ನೀಡಿದ್ದಾರೆ. ಭರತ ಜೈನ್, ಮಾಹಾದೇವ್ ನಾಲವಾಡ್, ಸಲೀಂ ಸಲಾವುದ್ದೀನ ಮೌಲ್ವಿ, ರೆಹಮಾನ್ ವಿಜಯಪುರ, ಪ್ರಬಯ್ಯ ಹಿರೇಮಠ, ಮಹಮ್ಮದ್ ಹನೀಫ್ ಎಂಬುವರನ್ನು ಬಂಧಿಸಲಾಗಿದೆ. ನಮ್ಮ ಸಿಬ್ಬಂದಿ ಭರತನನ್ನ ವಿಚಾರಣೆ ನಡೆಸಿದಾಗ ಪ್ರಕರಣವನ್ನ ದಿಕ್ಕು ತಪ್ಪಿಸಲು ನೋಡಿದ್ರು. ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಅನುಮಾನ ಮೂಡಿತ್ತು. ವೈಯಕ್ತಿಕ ಕಾರಣಗಳಿಂದ ತಂದೆಯೇ ಮಗನ ಕೊಲೆ ಮಾಡಿಸಿರೋದು ದೃಢಪಟ್ಟಿದೆ ಎಂದಿರುವ ಲಾಬೂ ರಾಮ್, ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಆರೋಪಿಗಳ ವಿಚಾರಣೆಯ ವೇಳೆ ಬಹಿರಂಗಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: 8 ತಿಂಗಳ ಮಗುವಿನ ಗಂಟಲಿನಲ್ಲಿತ್ತು 2 ಸೆಂ.ಮೀ ಅಗಲದ ಬಾಟಲ್ ಕ್ಯಾಪ್!
ಇಂದು ಬೆಳ್ಳಂಬೆಳಿಗ್ಗೆಯೇ ಎ-1 ಆರೋಪಿ ಭರತ್ ಜೈನ್ ಮತ್ತು ಹೆಣ ಹೂತು ಹಾಕಿದ್ದ ಯುವಕನನ್ನು ಕರಂತೆದ ಪೊಲೀಸರು ಸ್ಥಳ ಮಹಜರು ಮಾಡಿದರು. ವೈದ್ಯರ ತಂದ ಕೂಲಂಕುಷವಾಗಿ ಮರಣೋತ್ತರ ಪರೀಕ್ಷೆ ನಡೆಸಿದೆ. ಯುವಕ ಅಖಿಲ್ ಜೈನ್ ನ ಕೊಲೆಯನ್ನು ಉಸಿರುಗಟ್ಟಿಸಿ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರ ಪೈಕಿ ಮೂವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಗಿದೆ. ಉಳಿದ ನಾಲ್ವರನ್ನೂ ತಮ್ಮ ಕಷ್ಟಡಿಗೆ ತೆಗೆದುಕೊಂಡು ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ