RIP Puneeth Rajkumar; ಬೆಟ್ಟದ ಹೂ ಬಾಡುವ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ; ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು!
ಮೊದಲ ವರ್ಷ ರೆಡ್ ಮೂನ್ ದಿನ ಗದ್ದುಗೆಯಲ್ಲಿ ಉಳಿದು ಪುನೀತ್ ರಾಜ್ ಕುಮಾರ್ ಪೂಜೆ ಸಲ್ಲಿಸಿದ್ದರು. ರೆಡ್ ಮೂನ್ ದಿನ ಪೂಜೆ ಸಲ್ಲಿಸಿದ ಬಳಿಕ ಪುನೀತ್ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿತ್ತು ಎನ್ನಲಾಗಿದೆ. ನಂತರ ಬಳಿಕ ಅಜ್ಜಯ್ಯನ ದಂಡ ಮನೆಯಲ್ಲಿಟ್ಟು ಪೂಜಿಸಿ, ಅಜ್ಜಯ್ಯ ಅವರನ್ನು ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದರು
ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಇನ್ನು ನೆನಪು ಮಾತ್ರ. ಅಮ್ಮನ ಮಡಿಲು ಸೇರಿರುವ ಅಪ್ಪು ಚಿರನಿದ್ರೆಗೆ ಜಾರಿದ್ದಾರೆ. ಇತ್ತ ಪುನೀತ್ ಅಭಿಮಾನಿಗಳ (Puneeth Fans) ಕಣ್ಣೀರು ಮಾತ್ರ ಕಡಿಮೆ ಆಗುತ್ತಿಲ್ಲ. ಒಂದು ವರ್ಷದ ಹಿಂದೆಯೇ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ (Tipturu, Tumakuru) ಕುರುಬರಹಳ್ಳಿ ಸದ್ಗುರು ಗದ್ದಗೆ ಅಜ್ಜಯ್ಯ ಸ್ವಾಮೀಜಿ, ಪುನೀತ್ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರಂತೆ. ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿರುವ ಅಜ್ಜಯ್ಯ ಸ್ವಾಮೀಜಿಗಳು, ಆ ಒಂದು ಪೂಜೆ ಮಾಡಿಸಿದ್ರೆ ಬದುಕುಳಿಯುತ್ತಿದ್ದರೇನೋ ಅಂತ ಹೇಳಿದ್ದಾರೆ.
ಪ್ರತಿ ವರ್ಷ ಪೂಜೆ ಸಲ್ಲಿಸಲು ಅಜ್ಜಯ್ಯ ಹೇಳಿದ್ರು
ಕಳೆದ ವರ್ಷ ಅಜ್ಜಯ್ಯನ ದರ್ಶನಕ್ಕೆ ಪುನೀತ್ ರಾಜ್ ಕುಮಾರ್ ಕುಟುಂಬ ಸಮೇತರಾಗಿ ಬಂದಿದ್ದರು. ಅಂದೇ ಮುಂದೆ ಆರೋಗ್ಯ ಸಮಸ್ಯೆಯಾಗಲಿದೆ ಎಂದು ಪುನೀತ್ ಬಂದ ದಿನವೇ ಶಾಂತಿಕರ್ಮ ಮಾಡಿಸಿದ್ದರು. ನಂತರ ಪ್ರತಿ ವರ್ಷ ಬಂದು ಪೂಜೆ ಸಲ್ಲಿಸಿಕೊಂಡು ಹೋಗುವಂತೆ ಅಜ್ಜಯ್ಯ ನುಡಿದಿದ್ದರು.
ಆರೋಗ್ಯ ಸಮಸ್ಯೆಯ ಭವಿಷ್ಯ
ಮೊದಲ ವರ್ಷ ರೆಡ್ ಮೂನ್ ದಿನ ಗದ್ದುಗೆಯಲ್ಲಿ ಉಳಿದು ಪುನೀತ್ ರಾಜ್ ಕುಮಾರ್ ಪೂಜೆ ಸಲ್ಲಿಸಿದ್ದರು. ರೆಡ್ ಮೂನ್ ದಿನ ಪೂಜೆ ಸಲ್ಲಿಸಿದ ಬಳಿಕ ಪುನೀತ್ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿತ್ತು ಎನ್ನಲಾಗಿದೆ. ನಂತರ ಬಳಿಕ ಅಜ್ಜಯ್ಯನ ದಂಡ ಮನೆಯಲ್ಲಿಟ್ಟು ಪೂಜಿಸಿ, ಅಜ್ಜಯ್ಯ ಅವರನ್ನು ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದರು. ಅಂದು ಸಹ ಆರೋಗ್ಯ ಸಮಸ್ಯೆಯಾಗಲಿದೆ ಎಂದು ಭವಿಷ್ಯ ನುಡಿದದ್ದರಂತೆ.
ಅಜ್ಜಯ್ಯನವರ ಹೇಳಿಕೆ ಬಳಿಕ ಕೆಲಸದ ಒತ್ತಡದಿಂದ ಈ ವರ್ಷ ಪೂಜೆ ಸಲ್ಲಿಸೋದನ್ನು ಮರೆತರಾ? ಪೂಜೆ ಸಲ್ಲಿಸಿದ್ದರೆ ನಾವು ನಮ್ಮ ನೆಚ್ಚಿನ ನಟನನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಅಜ್ಜಯ್ಯನ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ಪುನೀತ್ ಅವರ ಅಂತ್ಯಕ್ರಿಯೆ ನಡೆದಿದೆ.
ಸರಳತೆಗೆ ಮತ್ತೊಂದು ಹೆಸರು ಅಪ್ಪು
ಬದುಕಿನಲ್ಲಿ ಒಮ್ಮೆಯಾದರೂ ಪುನೀತ್ರನ್ನು ಭೇಟಿಯಾದವರ್ಯಾರೂ ಸದಾ ಅವರನ್ನು ನೆನಪಿಸಿಕೊಳ್ಳುವುದು ಅವರ ಸರಳತೆ ಮತ್ತು ಸಭ್ಯತೆಯ ಬಗ್ಗೆಯೇ (Humble and Simple). ತಾನೊಬ್ಬ ದೊಡ್ಡ ಸ್ಟಾರ್, ಡಾ ರಾಜ್ಕುಮಾರ್ ರಂಥಾ ಮೇರುನಟನ ಪುತ್ರ ಎನ್ನುವುದನ್ನು ಎಂದೂ ತೋರಿಸಿಕೊಳ್ಳದ, ಜನರ ಮನೆ ಮಗನಂಥಾ ವ್ಯಕ್ತಿ ಅಪ್ಪು. ಅಪ್ಪು ಅದೆಷ್ಟು ಫಿಟ್ (Fitness Freak) ಆಗಿದ್ರು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ತಮ್ಮ ಫಿಟ್ನೆಸ್ನಿಂದ ಪ್ರೂವ್ ಮಾಡಿದ್ದರು ಅಪ್ಪು.
ಮಲ್ಲೇಶ್ವರಂನ ಖ್ಯಾತ ಫಿಸಿಯೋಥೆರಪಿ ಕ್ಲಿನಿಕ್ ‘ಲಾ ಯಾತ್ರಾ’ ಗೆ ಅಪ್ಪು ಬೆನ್ನು ನೋವಿನ ಚಿಕಿತ್ಸೆಗೆ ಹೋಗುತ್ತಿದ್ದರಂತೆ. ಕೇವಲ 3 ವಾರಗಳ ಹಿಂದಷ್ಟೇ ಬೆನ್ನು ಮತ್ತು ಮೀನಖಂಡದ ಮಸಲ್ ಕ್ಯಾಚ್ ಆಗಿದೆ ಎಂದು ಅಲ್ಲಿನ ವೈದ್ಯ ಡಾ ಪಳನಿವೇಲ್ ರನ್ನು ಭೇಟಿ ಮಾಡಿದ್ದರಂತೆ ಅಪ್ಪು. ಅವರಿಗೆ ಎರಡು ಸೆಶನ್ ಫಿಸಿಯೋ ಮತ್ತು ಮಸಾಜ್ ಮಾಡಿ ನೋವಿನಿಂದ ಮುಕ್ತಿ ನೀಡಿದ್ದರು ಇಲ್ಲಿನ ತಜ್ಞರ ತಂಡ. ಆದ್ರೆ ಯುವರತ್ನ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಖುದ್ದು ಪುನೀತ್ ಡಾ ಪಳನಿವೇಲ್ಗೆ ತಿಳಿಸಿದ್ದರಂತೆ. ಈ ಮಾತನ್ನು ಖುದ್ದು ಡಾ ಪಳನಿವೇಲ್ ನ್ಯೂಸ್ 18 ಕನ್ನಡ ಜೊತೆ ಹಂಚಿಕೊಂಡಿದ್ದಾರೆ.
ಇದೆಲ್ಲದರ ನಡುವೆ ನೋವು ಸರಿಯಾಗುವವರಗೆ ಡ್ಯಾನ್ಸ್ ಮಾಡುವುದನ್ನು ಸ್ವಲ್ಪ ತಡೆದರೆ ಒಳ್ಳೆಯದು ಎಂದು ವೈದ್ಯರು ಹೇಳಿದ್ದರಂತೆ. ಆದರೆ ಪುನೀತ್ ಕೇಳುತ್ತಿರಲಿಲ್ಲ. ಸಿನಿಮಾ ಶೂಟಿಂಗ್ಗೆ ತೆರಳಿದಾಗ ಅಲ್ಲಿ ಅಗತ್ಯ ಇರುವ ಕೆಲಸವನ್ನು ಮಾಡಲೇಬೇಕು ಎನ್ನುವುದು ಅವರ ಅಭಿಪ್ರಾಯ. ಹಾಗಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನೋವಿನ ನಡುವೆಯೂ ಡ್ಯಾನ್ಸ್ ಮಾಡ್ತಿದ್ದರಂತೆ ಅಪ್ಪು. ಇದನ್ನು ಲಾ ಯಂತ್ರ ತಜ್ಞರು ನೆನಪಿಸಿಕೊಳ್ಳುತ್ತಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ