ಸಾವಿರಾರು ಕೋಟಿ ಐಎಂಎ ಹಗರಣ ಆರೋಪಿ, ಐಪಿಎಸ್ ಅಧಿಕಾರಿ ಹಿಲೊರಿ ಹೆಂಡತಿಯ ಗೂಂಡಾಗಿರಿ: ಫೇಸ್​ಬುಕ್​ನಲ್ಲಿ ಆರೋಪ

ವಂದನಾ ಸುಧಾ ವೆಂಕಟೇಶ್​ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

news18-kannada
Updated:June 30, 2020, 10:12 AM IST
ಸಾವಿರಾರು ಕೋಟಿ ಐಎಂಎ ಹಗರಣ ಆರೋಪಿ, ಐಪಿಎಸ್ ಅಧಿಕಾರಿ ಹಿಲೊರಿ ಹೆಂಡತಿಯ ಗೂಂಡಾಗಿರಿ: ಫೇಸ್​ಬುಕ್​ನಲ್ಲಿ ಆರೋಪ
ಅಜಯ್​ ಹಿಲೊರಿ
  • Share this:
ಐಎಂಎ ಜ್ಯುವೆಲ್ಸ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್​ಐಟಿ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಅಜಯ್ ಹಿಲೊರಿ ಅವರನ್ನು ಎಸ್​ಐಟಿ ವಿಚಾರಣೆ ಕೂಡ ನಡೆಸಿತ್ತು. ಈ ಮಧ್ಯೆ ಅಜಯ್ ಹಿಲೊರಿ ಹೆಂಡರಿ ವಿರುದ್ಧ ಗೂಂಡಾಗಿರಿ ಆರೋಪ ಕೇಳಿ ಬಂದಿದೆ.

ವೃತ್ತಿಯಲ್ಲಿ ವಕೀಲೆ ಆಗಿರುವ ವಂದನಾ ಸುಧಾ ವೆಂಕಟೇಶ್​ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ಸವಿಸ್ತಾರವಾಗಿ ಬರೆದುಕೊಂಡಿರುವ ಅವರು, “ಅಜಯ್​ ಹಿಲೊರಿ ನಾವು ಉಳಿದುಕೊಳ್ಳುವ ಅಪಾರ್ಟ್​ಮೆಂಟ್​ನಲ್ಲಿಯೇ ಉಳಿದುಕೊಳ್ಳುತ್ತಾರೆ. ಅವರ ಮಕ್ಕಳು (ಸುಮಾರು 8 ಮಕ್ಕಳು) ಆಡುವಾಗ ದೊಡ್ಡಾದಾಗಿ ಕೂಗುತ್ತಾರೆ. ಈ ವಿಚಾರವಾಗಿ ನಾನು ಅವರ ತಾಯಿಗೆ ತಿಳಿಸಿದ್ದೆ,” ಎಂದು ಪತ್ರದ ಆರಂಭದಲ್ಲಿ ಹೇಳಿಕೊಂಡಿದ್ದಾರೆ."ಈ ಘಟನೆ ನಂತರ 8 ಪೊಲೀಸ್​ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದರು. ಅಲ್ಲದೆ, ನೀವು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದೀರಿ ಎಂದು ಕೂಗಾಟ ನಡೆಸಿದ್ದರು. ನನ್ನ ಒಪ್ಪಿಗೆ ಇಲ್ಲದೆ ವಿಡಿಯೋ ಶೂಟ್​ ಕೂಡ ಮಾಡಿದ್ದರು. ನಾನು ನೇರವಾಗಿ ಹಿಲೊರಿ ಮನೆಗೆ ತೆರಳಿ ‘ಈ ರೀತಿಯ ಬೆದರಿಕೆ ತಂತ್ರಗಳನ್ನು ಉಪಯೋಗಿಸಬೇಡಿ’ ಎಂದಿದ್ದೆ. ಈ ವೇಳೆ ಹಿಲೊರಿ ಹೆಂಡತಿ ನನ್ನ ಮೇಲೆ ಉಗುಳಿ ಕೆಟ್ಟ ಪದಗಳಿಂದ ಬೈದಿದ್ದರು.  ಹಿಲೊರಿಗೆ ಕೊರೋನಾ ಪಾಸಿಟಿವ್​ ಇದೆ! ಅವರ ಹೆಂಡತಿ ನನ್ನ ಮೇಲೆ ಉಗುಳುತ್ತಾರೆ. ಎಷ್ಟೊಂದು ವಿಚಿತ್ರ! ಈ ಬಗ್ಗೆ ಯಾರು ಕೂಡ ಕ್ರಮ ಕೈಗೊಳ್ಳುವುದಿಲ್ಲ,” ಎಂದು ಬೇಸರ ಹೊರಹಾಕಿದ್ದಾರೆ.

2018ರಲ್ಲಿ ಬೆಂಗಳೂರು ಪೂರ್ವ ವಿಭಾಗ ಡಿಸಿಪಿಯಾಗಿ ಅಜಯ್ ಹಿಲೊರಿ ಕಾರ್ಯ ನಿರ್ವಹಿಸಿದ್ದರು. ಐಎಂಎ ಜ್ಯುವೆಲ್ಸ್​ ಇರುವ ಶಿವಾಜಿನಗರ ಕೂಡ ಇವರ ಪೊಲೀಸ್​ ಠಾಣೆಯ ಅಡಿಯಲ್ಲೇ ಇತ್ತು. ಐಎಂಎ ವಂಚನೆ ಬಗ್ಗೆ ಮೊದಲ ಬಾರಿಗೆ ದೂರು ಬಂದರೂ ಅಜಯ್ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಅವರನ್ನು ಆರೋಪಿ ಪಟ್ಟಿಯಲ್ಲಿಸ ಸೇರಿಸಲಾಗಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading