• Home
 • »
 • News
 • »
 • state
 • »
 • Puncture Controversy: ಸಂಸದ ತೇಜಸ್ವಿ ಸೂರ್ಯಗೆ ದಿವಂಗತ ಅನಂತಕುಮಾರ್​​​ ಮಗಳಿಂದ 'ಪಂಕ್ಚರ್'

Puncture Controversy: ಸಂಸದ ತೇಜಸ್ವಿ ಸೂರ್ಯಗೆ ದಿವಂಗತ ಅನಂತಕುಮಾರ್​​​ ಮಗಳಿಂದ 'ಪಂಕ್ಚರ್'

ತೇಜಸ್ವಿ ಸೂರ್ಯ, ಐಶ್ವರ್ಯ ಅನಂತಕುಮಾರ್​​

ತೇಜಸ್ವಿ ಸೂರ್ಯ, ಐಶ್ವರ್ಯ ಅನಂತಕುಮಾರ್​​

ಸಂಸದರಾಗಿ ತೇಜಸ್ವಿ ಸೂರ್ಯ ಇಂಥ ಅಪ್ರಬುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜಕೀಯ ವಲಯದ ಪ್ರಮುಖರೂ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದ್ದರು.

ಮುಂದೆ ಓದಿ ...
 • Share this:

  ಬೆಂಗಳೂರು(ಡಿ.25): 'ಎದೆ ಸೀಳಿದರೆ ಒಂದಕ್ಷರ ಇಲ್ಲದವರು. ಪಂಕ್ಚರ್‌ ಹಾಕುವವರಿಂದ ಗಲಭೆಗಳು ನಡೆಯುತ್ತಿವೆ,' ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ದಿವಗಂತ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಮಗಳು ತಪರಾಕಿ ಬಾರಿಸಿದ್ದಾರೆ. ಕಳೆದ ಎರಡು ದಿನಗಳಿಂದ ತೇಜಸ್ವಿ ಸೂರ್ಯ  ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಯಾರೋ ಟ್ವಿಟ್ಟಿಗರು ತೇಜಸ್ವಿ ಸೂರ್ಯ ಬದಲಿಗೆ ತೇಜಸ್ವಿನಿ ಅನಂತಕುಮಾರ್ ಎಂದು ತಪ್ಪಾಗಿ ಅರ್ಥೈಸಿಕೊಂಡು ಬೈದು ಟ್ವೀಟ್​​ ಮಾಡಿದ್ದರು. ಈ ವೇಳೆ ಮಧ್ಯಪ್ರವೇಶಿಸಿ ಟ್ವಿಟ್ಟಿಗರ ಟ್ವೀಟ್​ಗೆ ಪ್ರತಿಕ್ರಿಸಿದ ಅನಂತಕುಮಾರ್ ಮಗಳು ಐಶ್ವರ್ಯ ಅನಂತಕುಮಾರ್, "ಸಾರ್​​​ ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ತೇಜ್ವಸಿ ಸೂರ್ಯ ಹೊರತು ತೇಜಸ್ವಿನಿ ಅನಂತಕುಮಾರ್​​​ ಅವರಲ್ಲ. ತೇಜಸ್ವಿನಿ ಅನಂತಕುಮಾರ್​​ ಅದಮ್ಯ ಚೇತನ ಸಂಸ್ಥೆ ಮೂಲಕ ಸಾವಿರಾರು ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡುತ್ತಾರೆ. ಬಡವರ ನೋವಿನ ಬಗ್ಗೆ ತೇಜಸ್ವಿನಿ ಅನಂತಕುಮಾರ್​​ಗೆ ಗೊತ್ತಿದೆ. ಎಂದೂ ಈ ರೀತಿಯ ಹೇಳಿಕೆ ತೇಜಸ್ವಿನಿ ಅನಂತಕುಮಾರ್​​ ನೀಡುವುದಿಲ್ಲ" ಎನ್ನುವ ಮೂಲಕ ತೇಜ್ವಸಿ ಸೂರ್ಯಗೆ ಪಂಕ್ಚರ್​​ ಮಾಡಿದ್ದಾರೆ.  ಇನ್ನು ತೇಜಸ್ವಿ ಸೂರ್ಯಗೆ ಅನಂತಕುಮಾರ್​ ಮಗಳಿಂದ ಪಂಕ್ಚರ್​​ ಎಂದು ಕಾಂಗ್ರೆಸ್​​ನ ಸೋಷಿಯಲ್​​ ಮೀಡಿಯಾ ರಾಷ್ಟ್ರೀಯ ಉಸ್ತುವಾರಿ ರಕ್ಷಾ ರಾಮಯ್ಯ ಟ್ವೀಟ್​ ಮಾಡಿದ್ದಾರೆ. ಹಾಗೆಯೇ ಇನ್ನು ಹಲವರು ಅನಂತಕುಮಾರ್ ಮಗಳು ಐಶ್ವರ್ಯ ಅನಂತಕುಮಾರ್ ಟ್ವೀಟ್​ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


  ಈ ಹಿಂದೆ ಪೌರತ್ವ ತಿದ್ದುಪಡಿ ಕಾಯಿದೆ ಪರವಾಗಿ ಬೆಂಗಳೂರಿನಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಎದೆ ಸೀಳಿದರೆ ಒಂದಕ್ಷರ ಇಲ್ಲದವರು. ಪಂಕ್ಚರ್‌ ಹಾಕುವವರಿಂದ ಗಲಭೆಗಳು ನಡೆಯುತ್ತಿವೆ,'' ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಸಂಸದರಾಗಿ ತೇಜಸ್ವಿ ಸೂರ್ಯ ಇಂಥ ಅಪ್ರಬುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜಕೀಯ ವಲಯದ ಪ್ರಮುಖರೂ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದ್ದರು.

  ಇದನ್ನೂ ಓದಿ: ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರೂ ಬಂದು ಪ್ರತಿಭಟನೆ ಮಾಡ್ತಾರೆ; ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸುತ್ತಿರುವವರು ಪಕ್ಚಂರ್ ಹಾಕುವವರು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ಧಾರೆ. ಇದು ಆರ್‌ಎಸ್‌ಎಸ್ ಮನಸ್ಥಿತಿಗೆ ಸಾಕ್ಷಿ. ಬಡವರು, ದಲಿತರು, ಶೂದ್ರರ ವಿರುದ್ಧ ಇರುವ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ಪ್ರತಿನಿಧಿಸುತ್ತದೆ. ತೇಜಸ್ವಿಸೂರ್ಯ ಅಂತಹ ವ್ಯವಸ್ಥೆಯ ಪ್ರತಿನಿಧಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.

  ತೇಜಸ್ವಿ ಸೂರ್ಯಗೆ ದಲಿತರು , ಬಡವರ ಬಗ್ಗೆ ಕಾಳಜಿ ಇಲ್ಲ. ಬಡವ ಪಂಚರ್ ಹಾಕುತ್ತಾನೆ. ಕಸ ಗುಡಿಸುತ್ತಾನೆ. ಕ್ಲೀನಿಂಗ್ ಮಾಡುತ್ತಾನೆ. ಆದರೆ ಕಳ್ಳತನ ಮಾಡಿಲ್ಲ. ದೇಶದ್ರೋಹವನ್ನೂ ಮಾಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು.

  Published by:Ganesh Nachikethu
  First published: