HOME » NEWS » State » AISHWARYA AMARTHYA HEGDE ENGAGEMENT DK SHIVAKUMARS DAUGHTER AND CCD FOUNDER VG SIDDHARTHAS SON ENGAGEMENT SESR NKCKB

Aishwarya Amarthya Hegde Engagement: ಡಿಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥಕ್ಕೆ ಬಂದ ಗಣ್ಯರಿಗೆ ಟ್ರಾಫಿಕ್​ ಕಿರಿಕಿರಿ

ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ವಿನಯ್​ ಗುರೂಜಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿದೆ

news18-kannada
Updated:November 19, 2020, 4:26 PM IST
Aishwarya Amarthya Hegde Engagement: ಡಿಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥಕ್ಕೆ ಬಂದ ಗಣ್ಯರಿಗೆ ಟ್ರಾಫಿಕ್​ ಕಿರಿಕಿರಿ
ಐಶ್ವರ್ಯ, ಅಮರ್ತ್ಯ ಹೆಗ್ಡೆ
  • Share this:
ದೇವನಹಳ್ಳಿ (ನ.19) : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯಾ ಹಾಗೂ ಎಸ್​ಎಂ ಕೃಷ್ಣ ಮೊಮ್ಮಗ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥ ಇಂದು ನೆರವೇರಿದೆ.  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತಾಜ್​ ಹೊಟೇಲ್​ನಲ್ಲಿ ಇಬ್ಬರು ಉಂಗುರ ಬದಲಾಯಿಸಿದ್ದಾರೆ. ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ  ಈ ಅದ್ಧೂರಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಹಾಜರಾದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಕೇವಲ 250 ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಿಂದ ಸಾರ್ವಜನಿಕರು ಹಾಗೂ ಗಣ್ಯರು ಟ್ರಾಫಿಕ್​ ಕಿರಿಕಿರಿ ಅನುಭವಿಸುವಂತೆ ಆಗಿದೆ. ವಿಮಾನ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರ ಜೊತೆ ಡಿ.ಕೆ. ಶಿವಕುಮಾರ್ ಮಗಳ ನಿಶ್ಚಿತಾರ್ಥಕ್ಕೆ ಗಣ್ಯರ ವಾಹನಗಳು ವಿಮಾನ ನಿಲ್ದಾಣದ ಬಳಿ ಸಾಲುಗಟ್ಟಿ ನಿಂತ ಪರಿಣಾಮ ಸಾಕಷ್ಟು ಕಿರಿಕಿರಿ ಉಂಟಾಯಿತು. ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ ಪಂಚತಾರ ಹೊಟೇಲ್​ನಲ್ಲಿ ಸೆಕ್ಯೂರಿಟಿ ಚೆಕ್​ನಿಂದಾಗಿ ವಾಹನಗಳ ಮಂದಗತಿ ಪ್ರಯಾಣದಿಂದ ವಿಮಾನ ಪ್ರಯಾಣಿಕರು ಕೂಡ ಕಿರಿ ಕಿರಿ ಅನುಭವಿಸಿದರು. ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ವಿನಯ್​ ಗುರೂಜಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿದೆ. ಆಮಂತ್ರಣ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ.

Aishwarya Amarthya Hegde Engagement DK Shivakumars daughter and CCD Founder VG Siddharthas son to get engaged today
ಎಸ್​ಎಂ ಕೃಷ್ಣ ಹಾಗೂ ಡಿಕೆ ಶಿವಕುಮಾರ್​ ಕುಟುಂಬಸ್ಥರ ಸಮ್ಮುಖದಲ್ಲಿ ಐಶ್ವರ್ಯಾ-ಅಮರ್ತ್ಯರವರ ನಿಶ್ಚಿತಾರ್ಥ ಕಾರ್ಯ ನಡೆದಿದೆ.


ಈ ಹಿಂದೆ ಡಿಕೆ ಶಿವಕುಮಾರ್  ಮನೆಯಲ್ಲಿ ಹಾರಾ ಬದಲಾಯಿಸಿಕೊಂಡಿದ್ದ ಈ ಜೋಡಿಗಳ ನಿಶ್ಚಿತಾರ್ಥ ಕಾರ್ಯ ಇಂದು ನಡೆದಿದೆ. ಮಧ್ಯಾಹ್ನ 12ಗಂಟೆಗೆ ಎರಡು ಕುಟುಂಬದ ಹಿರಿಯರು ಪರಸ್ಪರ ತಾಂಬೂಲ ಬದಲಾಯಿಸಿಕೊಂಡರು.

ನಿಶ್ಚಿತಾರ್ಥದ ವೇದಿಕೆಯನ್ನು ತಿಳಿಗುಲಾಬಿ ಬಣ್ಣದ ಥೀಮ್​ನಲ್ಲಿ ಅಲಂಕರಿಸಲಾಗಿತ್ತು. ಐಶ್ವರ್ಯಾ ಕೂಡ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದರೆ, ಅಮರ್ತ್ಯ ಕೂಡ ಅದೇ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದರು.

(ವರದಿ: ನವೀನ್​ ಕುಮಾರ್​)
Published by: Seema R
First published: November 19, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories