ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ದತೆ; ನನಸಾಗುತ್ತಾ ಬಹುವರ್ಷದ ಕನಸು?

ಈ ಹಿಂದೆ‌ 1956ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ಹೈದ್ರಾಬಾದಿಗೆ ಹೋಗುವಾಗ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ವಿಮಾನವನ್ನು ತುತ್ತು ಭೂ ಸ್ಪರ್ಶ ಮಾಡಿಸಲಾಗಿತ್ತು.  ಇದೇ ಜಾಗದಲ್ಲಿ ವಿಮಾನ ನಿಲ್ದಾಣಕ್ಕಾಗಿ ಅಂದಿನಿಂದಲೇ ಜಾಗವನ್ನು ಬಿಡಲಾಗಿದೆ. ಒಟ್ಟು 404 ಎಕರೆ ಪ್ರದೇಶದ ಭೂಮಿಯನ್ನು ಯರಮರಸ್ ಬಳಿಯಲ್ಲಿ ಗುರುತಿಸಿ ಕಾಯ್ದಿರಿಸಲಾಗಿದೆ.

ವಿಮಾನ ನಿಲ್ದಾಣ ನಿರ್ಮಿಸಲು ಗುರುತಿಸಿರುವ ಜಾಗ

ವಿಮಾನ ನಿಲ್ದಾಣ ನಿರ್ಮಿಸಲು ಗುರುತಿಸಿರುವ ಜಾಗ

  • Share this:
ರಾಯಚೂರು(ಜ.31): ಕೇಂದ್ರ ಸರಕಾರದ ನೀತಿ ಆಯೋಗದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯೆಂಬ ಅಪಖ್ಯಾತಿಯನ್ನು ಹೊಂದಿರುವ ರಾಯಚೂರು ಜಿಲ್ಲೆಯ ಅಭಿವೃದ್ಧಿಗಾಗಿ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ನೀಡಲಾಗುತ್ತಿದೆ. ಹಿಂದುಳಿದ ಈ ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಬೇಕಾಗಿದೆ. ಅದರಲ್ಲಿ ರಾಯಚೂರಿನ ವಿಮಾನ ನಿಲ್ದಾಣ ನಿರ್ಮಾಣವು ಸೇರಿದೆ. ರಾಯಚೂರು ಜಿಲ್ಲೆಗೆ ಈ ಹಿಂದೆ ಐಐಟಿ ಆರಂಭವಾಗಬೇಕೆಂದಾಗ ಇಲ್ಲಿನ ಮೂಲಭೂತ ಸೌಲಭ್ಯಗಳಲ್ಲಿ ವಿಮಾನ ನಿಲ್ದಾಣವು ಸೇರಿತ್ತು. ವಿಮಾನ ನಿಲ್ದಾಣವಿಲ್ಲ ಎಂಬ ಕಾರಣಕ್ಕೆ ಧಾರವಾಡಕ್ಕೆ ಐಐಟಿ ನೀಡಲಾಗಿದೆ ಎನ್ನಲಾಗುತ್ತಿದೆ. 

ಐಐಟಿಯ ನಂತರ ಈ ಏಮ್ಸ್ ಆರಂಭಕ್ಕೆ ಚಿಂತನೆ, ಒತ್ತಡ ಆರಂಭವಾಗಿದೆ. ಇಲ್ಲಿಯೂ ವಿಮಾನ ನಿಲ್ದಾಣ, ಮಹಾನಗರ ಪಾಲಿಕೆ‌ ಎಂಬ ಮಾನದಂಡಗಳನ್ನು ಕೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಏಮ್ಸ್ ತಪ್ಪುಬಹುದು ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ರಾಯಚೂರಿನಲ್ಲಿ ಇದೇ ವರ್ಷ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆ.ಈ  ಹಿಂದೆಯೇ ರಾಯಚೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಸಿದ್ದತೆ ನಡೆದಿತ್ತು.

ಆಗ ಈ ಹಿಂದೆ‌ 1956ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ಹೈದ್ರಾಬಾದಿಗೆ ಹೋಗುವಾಗ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ವಿಮಾನವನ್ನು ತುತ್ತು ಭೂ ಸ್ಪರ್ಶ ಮಾಡಿಸಲಾಗಿತ್ತು.  ಇದೇ ಜಾಗದಲ್ಲಿ ವಿಮಾನ ನಿಲ್ದಾಣಕ್ಕಾಗಿ ಅಂದಿನಿಂದಲೇ ಜಾಗವನ್ನು ಬಿಡಲಾಗಿದೆ. ಒಟ್ಟು 404 ಎಕರೆ ಪ್ರದೇಶದ ಭೂಮಿಯನ್ನು ಯರಮರಸ್ ಬಳಿಯಲ್ಲಿ ಗುರುತಿಸಿ ಕಾಯ್ದಿರಿಸಲಾಗಿದೆ.

ಈ ಮಧ್ಯೆ ಈ ಸ್ಥಳದ ಪಕ್ಕ ಯರಮರಸ್ ಶಾಖೋತ್ಪನ್ನ ಸ್ಥಾವರ ನಿರ್ಮಾಣವಾಗಿದೆ. ವೈಟಿಪಿಎಸ್ ಆರಂಭವಾದ ನಂತರ ವಿಮಾನ ನಿಲ್ದಾಣಕ್ಕೆ ಹಿನ್ನೆಡೆಯಾಗಿತ್ತು. ಇಲ್ಲಿ ವಿಮಾನ ನಿಲ್ದಾಣಕ್ಕೆ ಚಿಮಣಿ ಅಡ್ಡಿಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾಯಿತು. ನಂತರ ಕೇಂದ್ರ ಸರಕಾರವು ತಜ್ಞರ ಸಮಿತಿಯನ್ನು ಪರಿಶೀಲನೆಗಾಗಿ ಕಳುಹಿಸಿತ್ತು. ಸಮಿತಿಯು ಯರಮರಸ್ ಹಾಗು ಸಿಂಗನೋಡಿ ಬಳಿ ಭೂಮಿಯನ್ನು ಪರಿಶೀಲಿಸಿತ್ತು.

ಭಾರತಕ್ಕೆ ಯಾವ ಕಂಪನಿ ಬಂದರೂ ಈ ನೆಲದ ಕಾನೂನು ಪಾಲಿಸಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ನಂತರದಲ್ಲಿ ಸಮಿತಿಯು ವೈಟಿಪಿಎಸ್ ಬಳಿ ವಿಮಾನ ನಿಲ್ದಾಣಕ್ಕೆ ಚಿಮಣಿ ಅಡ್ಡಿಯಾಗಿಲ್ಲ ಎಂದು ವರದಿ ನೀಡಿತ್ತು. ಈ ವರದಿಯ ನಂತರ ಈಗ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಗಲಿದೆ, ಇಲ್ಲಿ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಇಲಾಖೆಯು ಒಪ್ಪಿಗೆ ನೀಡಿದ ನಂತರ ಕೇಂದ್ರ ಸರಕಾರದ ಐಡಿಡಿ( ಮೂಲಭೂತ ಅಭಿವೃದ್ಧಿ ಇಲಾಖೆ) ಯು ಯೋಜನಾ ವರದಿ ತಯಾರಿಸಲು ಸಿದ್ದತೆ ನಡೆಸಿದೆ.

ಇಷ್ಟರಲ್ಲಿಯೇ ಐಡಿಡಿಯು ಯೋಜನಾ ವರದಿ ನೀಡಲಿದೆ. ಈ ಮಧ್ಯೆ ಇದೇ ವರ್ಷ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರದಿಂದ ಪರವಾನಿಗೆ ಪಡೆಯಲು ಯತ್ನ ನಡೆದಿದೆ. ಈ ಮಧ್ಯೆ ಜಿಲ್ಲೆಯ ಎಲ್ಲಾ ಶಾಸಕರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ‌ ಶಾಸಕರ ಅಭಿವೃದ್ಧಿ ನಿಧಿಯಿಂದ 40 ಕೋಟಿ ರೂಪಾಯಿಯನ್ನು ನೀಡಲು ಒಪ್ಪಿಕೊಂಡಿದ್ದಾರೆ. 10 ಕೋಟಿ ರೂಪಾಯಿಯನ್ನು ಜಿಲ್ಲೆಯ ಗಣಿಗಳಿಂದ ಸಂಗ್ರಹವಾಗಿರುವ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಇದೇ ತಿಂಗಳನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗುವುದು ಎಂಬ ಭರವಸೆ ಹೊಂದಲಾಗಿದೆ.

ಈ‌ ಮಧ್ಯೆ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ರಸ್ತೆ, ಕುಡಿವ ನೀರು ಸೇರಿದಂತೆ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆ ಇರುವಾಗ ಶಾಸಕರು ತಮ್ಮ ಅನುದಾನವನ್ನು ವಿಮಾನ ನಿಲ್ದಾಣಕ್ಕೆ ನೀಡಿದ್ದು ಎಷ್ಟು ಸರಿ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ, ರಾಜ್ಯ ಸರಕಾರವು ವಿಮಾನ ನಿಲ್ದಾಣಕ್ಕೆ ನೇರವಾಗಿ ಹಣ ನೀಡಬೇಕಾಗಿತ್ತು. ಆದರೆ ಹಿಂದುಳಿದ ಪ್ರದೇಶಕ್ಕೆ ಮೀಸಲಾಗಿಟ್ಟ ಅನುದಾನ ಬಳಕೆ‌ ಮಾಡಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
Published by:Latha CG
First published: