• Home
  • »
  • News
  • »
  • state
  • »
  • Bengaluru Pollution: ಬೆಂಗಳೂರಲ್ಲಿ ಇನ್ನು ಉಸಿರಾಡುವುದೂ ಕಷ್ಟ, ಒಂದೇ ವರ್ಷದಲ್ಲಿ ಏರಿಕೆಯಾಯ್ತು ವಾಯುಮಾಲಿನ್ಯ!

Bengaluru Pollution: ಬೆಂಗಳೂರಲ್ಲಿ ಇನ್ನು ಉಸಿರಾಡುವುದೂ ಕಷ್ಟ, ಒಂದೇ ವರ್ಷದಲ್ಲಿ ಏರಿಕೆಯಾಯ್ತು ವಾಯುಮಾಲಿನ್ಯ!

ಬೆಂಗಳೂರಿನಲ್ಲಿ ವಾಹನಗಳಿಂದ ಹೊರಸೂಸುವ ಹೊಗೆ

ಬೆಂಗಳೂರಿನಲ್ಲಿ ವಾಹನಗಳಿಂದ ಹೊರಸೂಸುವ ಹೊಗೆ

ಕೋವಿಡ್​ನಿಂದ (Covid) ತಗ್ಗಿದ್ದ ವಾಯು ಮಾಲಿನ್ಯ (Air Pollution) ಇದೀಗ ರಾಜಧಾನಿಯಲ್ಲಿ ಏಕಾಏಕಿ ಏರಿಕೆಯಾಗಿದೆ. ನಾರ್ಮಲ್​ ಲೈಫ್​ ಕಾರಣ ಮತ್ತೆ ವಾಯು ಮಾಲಿನ್ಯ ಅಧಿಕವಾಗಿದೆ ಅಂತಿದೆ ಹೊಸ ಅಧ್ಯಯನ. ಬೆಂಗಳೂರಲ್ಲಿ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಒಂದೇ ವರ್ಷದಲ್ಲಿ ಶೇಕಡಾ 40ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ವರದಿ ಇದೀಗ ಹೊರಬಿದ್ದಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಉದ್ಯಾನನಗರಿ (Garden City) ಎಂಬ ಪಟ್ಟವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದೆ. ಇದೀಗ ಗಾರ್ಡನ್ ಸಿಟಿ, ಗ್ರೀನ್ ಸಿಟಿ (Green City) ಬೆಂಗಳೂರಿಗೆ ಪೊಲ್ಯೂಶನ್ ಸಿಟಿ (Pollution City) ಎಂಬ ಕಳಂಕ ಅಂಟಿಕೊಂಡಿದೆ. ಕೋವಿಡ್​ನಿಂದ (Covid) ತಗ್ಗಿದ್ದ ವಾಯು ಮಾಲಿನ್ಯ (Air Pollution) ಇದೀಗ ರಾಜಧಾನಿಯಲ್ಲಿ ಏಕಾಏಕಿ ಏರಿಕೆಯಾಗಿದೆ. ನಾರ್ಮಲ್​ ಲೈಫ್​ ಕಾರಣ ಮತ್ತೆ ವಾಯು ಮಾಲಿನ್ಯ ಅಧಿಕವಾಗಿದೆ ಅಂತಿದೆ ಹೊಸ ಅಧ್ಯಯನ. ಬೆಂಗಳೂರಲ್ಲಿ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಒಂದೇ ವರ್ಷದಲ್ಲಿ ಶೇಕಡಾ 40ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ವರದಿ ಇದೀಗ ಹೊರಬಿದ್ದಿದೆ.


ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ವಾಯು ಮಾಲಿನ್ಯ


ಬೆಂಗಳೂರು ನಗರದ ವಾತಾವರಣ ತಣ್ಣಗಿದ್ದಷ್ಟೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾತಾವರಣದಲ್ಲಿ ಚಳಿಗಾಲದ ಲಕ್ಷಣಗಳು ಆರಂಭವಾಗುತ್ತಿದ್ದಂತೆಯೇ ವಾಯು ಮಾಲಿನ್ಯ ಪ್ರಮಾಣ ಕೂಡಾ ಏರಿಕೆ ಕಾಣಲಾರಂಭಿಸಿತು. ವಾಯು ಗುಣಮಟ್ಟ ಸೂಚ್ಯಂಕದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗಾ ವಹಿಸುತ್ತದೆ.


ವಾಹನಗಳು ಹೊರಸೂಸುವ ಹೊಗೆ


ಒಂದೇ ವರ್ಷದಲ್ಲಿ ಶೇ. 40ರಷ್ಟು ಮಾಲಿನ್ಯ ಹೆಚ್ಚಳ


ನವೆಂಬರ್ 2022 ರ 30-ದಿನಗಳ ಸರಾಸರಿ AQI (Air Quality Index ಅಥವಾ ವಾಯು ಗುಣಮಟ್ಟ ಸೂಚ್ಯಂಕ) 93 ಆಗಿದ್ದರೆ, ಹಿಂದಿನ ವರ್ಷಕ್ಕೆ ಇದು 66 ಆಗಿತ್ತು. ಈ ಒಂದೇ ವರ್ಷದಲ್ಲಿ ಮಾಲಿನ್ಯಕಾರಕಗಳಲ್ಲಿ 40% ಹೆಚ್ಚಳವಾಗಿದೆ.


ಕಾರ್ಖಾನೆಗಳು ಹೊರಸೂಸುವ ಹೊಗೆ


ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?


ಎಲ್ಲೆಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳ?
ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ, ಮೈಸೂರು ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿರುವ ಏಳು ಮಾನಿಟರಿಂಗ್ ಸ್ಟೇಷನ್‌ಗಳ ಸಹಾಯದಿಂದ AQI ಅನ್ನು ಅಳೆಯಲಾಗುತ್ತದೆ. "ಅಕ್ಟೋಬರ್ ಮತ್ತು ಜನವರಿ ತಿಂಗಳ ನಡುವೆ ಕಳಪೆ ಗಾಳಿಯ ಗುಣಮಟ್ಟ ಸಾಮಾನ್ಯವಾಗಿದೆ, ಆದರೆ ಪ್ರತಿ ವರ್ಷ ಮಾಲಿನ್ಯಕಾರಕಗಳ ಹೆಚ್ಚಳವನ್ನು ನಾವು ಗಮನಿಸುತ್ತಿದ್ದೇವೆ" ಎಂದು ಕೆಎಸ್‌ಪಿಸಿಬಿಯಲ್ಲಿ ಗಾಳಿಯ ಗುಣಮಟ್ಟದ ಮಾನಿಟರಿಂಗ್ ಡೇಟಾದ ಉಸ್ತುವಾರಿ ವಹಿಸಿರುವ ಜಯಪ್ರಕಾಶ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.


ಉಸಿರಾಟವೂ ಕಷ್ಟ! (ಸಾಂದರ್ಭಿಕ ಚಿತ್ರ)


ದೀಪಾವಳಿ ಬಳಿಕ ಹೆಚ್ಚಳ


ಈ ವರ್ಷದ ದೀಪಾವಳಿಯ ದಿನಗಳು ಅಂದರೆ ಅಕ್ಟೋಬರ್ 24 ರಿಂದ 26ರವರೆಗೆ ಕಳಪೆ ಗಾಳಿಯ ಗುಣಮಟ್ಟ ಇತ್ತು. ಆದರೆ ನಂತರದ ದಿನಗಳು ಮಧ್ಯಮದಿಂದ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿದ್ದವು, ಜೊತೆಗೆ ಚಳಿಗಾಲದ ವಿಲೋಮ ಮತ್ತು ವಾಹನ ಚಲನೆಯೊಂದಿಗೆ ಮಾಲಿನ್ಯ ಅಂಶ ಹೆಚ್ಚಾಗಿದೆ ಎನ್ನಲಾಗಿದೆ.


ವಾಹನಗಳು, ಕಾರ್ಖಾನೆಗಳಿಂದ ವಾಯು ಮಾಲಿನ್ಯ


ಅಕ್ಟೋಬರ್‌ನ ಕೊನೆಯ ವಾರದಿಂದ, ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಮೇಲ್ವಿಚಾರಣೆ ಮಾಡಲ್ಪಟ್ಟಿದೆ ಮತ್ತು KSPCB ವರದಿ ಮಾಡಿದೆ. ಈ ವೇಳೆ ನಗರದಲ್ಲಿ ಗಾಳಿ ಗುಣಮಟ್ಟ ಮಧ್ಯಮ ಮತ್ತು ಅತ್ಯಂತ ಕಳಪೆ ನಡುವೆ ಇದೆ. "ಚಳಿಗಾಲಕ್ಕೆ ಸಂಬಂಧಿಸಿದ ನೈಸರ್ಗಿಕ ಪರಿಸ್ಥಿತಿಗಳ ಹೊರತಾಗಿ, ಇಂದಿನ ಟ್ರಾಫಿಕ್‌ನಲ್ಲಿ ವಾಹನಗಗಳು ಹೊರಸೂಸುವಿಕೆಗಳು ನಾವು ಉಸಿರಾಡುವ ಗಾಳಿಯನ್ನು ಇನ್ನಷ್ಟು ಕೆಡಿಸುತ್ತಿವೆ" ಎಂದು ಕೆಎಸ್‌ಪಿಸಿಬಿಯಲ್ಲಿ ಕೆಲಸ ಮಾಡುವ ವಿಜ್ಞಾನಿ ಜಯಪ್ರಕಾಶ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ಹೇಳಿದೆ.


ಇದನ್ನೂ ಓದಿ: Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?


ವಾಯುಮಾಲಿನ್ಯದಿಂದ ಗಂಭೀರ ಪರಿಣಾಮ


‘ಭಾರತದಲ್ಲಿ ವಾಯು ಮಾಲಿನ್ಯ ಜನರ ಆರೋಗ್ಯಕ್ಕೆ ಭಾರಿ ಅಪಾಯವನ್ನೊಡ್ಡಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯನ ಆಯಸ್ಸಿನಲ್ಲಿ ಸರಾಸರಿ ಐದು ವರ್ಷ ಕಡಿಮೆಯಾಗಲಿದೆ’ ಎಂದು ಅಧ್ಯಯನ ವರದಿಯೊಂದು ಹೇಳಿದೆ.

Published by:Annappa Achari
First published: