ಇಂದು ಬೆಂಗಳೂರಿನಲ್ಲಿ (Bengaluru) ಅದರಲ್ಲು ಐಟಿ ಸಿಟಿಯಲ್ಲಿ (IT City) ಗಾಳಿಯ ಗುಣಮಟ್ಟವೇ ಪ್ರಮುಖ ಸಮಸ್ಯೆ ಆಗಿದೆ. ಇತ್ತೀಚಿನ ಹಲವಾರು ಅಧ್ಯಯನಗಳ ಪ್ರಕಾರ, ಬೆಂಗಳೂರಿನಲ್ಲಿ ವಾಯು ಮಾಲಿನ್ಯದ (Air Pollution) ಮಟ್ಟವು ಇತ್ತೀಚೆಗೆ ಹೆಚ್ಚಾಗಿದೆ, ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಾಗಿಯೇ ಕಂಡುಬಂದಿದೆ. ಈಗ, ನಗರದ ಮಾಲಿನ್ಯದ ಹಾಟ್‌ಸ್ಪಾಟ್‌ಗಳನ್ನು (Pollution Hotspot) ಕಂಡುಹಿಡಿಯುವ ಹೊಸ ಅಧ್ಯಯನವು 5 ಪ್ರಮುಖ ರಸ್ತೆಗಳು ಮತ್ತು ನಗರದ ಪಶ್ಚಿಮ ಭಾಗವನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಿದೆ.
ಎಜುಕೇಶನ್ ಸೆಂಟರ್ ಫಾರ್ ಸೈನ್ಸ್, ಟೆಕ್ನಾಲಜಿ ಆ್ಯಂಡ್ ಪಾಲಿಸಿ (CSTEP) ನಡೆಸಿದ ಸಂಶೋಧನೆಯ ಪ್ರಕಾರ, ಈ ಪ್ರದೇಶಗಳಲ್ಲಿ ಪಿಎಮ್ 2.5 ಮಟ್ಟಗಳು 60 μg m-3 ನ ಗಾಳಿಯ ಗುಣಮಟ್ಟವನ್ನು ಅನುಮತಿಸುವ ಮಿತಿಯನ್ನು ಮೀರಿದೆ.
5 ಪ್ರಮುಖ ರಸ್ತೆಗಳು ಅತ್ಯಧಿಕ ಮಟ್ಟದ ಮಾಲಿನ್ಯಕಾರಕಗಳನ್ನು ಹೊಂದಿದೆ
ಬೆಂಗಳೂರು-ಮೈಸೂರು ರಸ್ತೆ, ನೈಸ್ ರಸ್ತೆ, ಕನಕಪುರ ರಸ್ತೆ, ಮಾಗಡಿ ಮುಖ್ಯ ರಸ್ತೆ ಮತ್ತು ತುಮಕೂರು ರಸ್ತೆಗಳಂತಹ ಪ್ರಮುಖ ರಸ್ತೆಗಳು ಬೆಳಗಿನ ಸಮಯದಲ್ಲಿ ಪಿಎಮ್ 2.5 ಸಾಂದ್ರತೆಯನ್ನು ಹೊಂದಿವೆ. 88 µg m-3 ಗಿಂತ ಹೆಚ್ಚಿನ ಮಾಲಿನ್ಯವನ್ನು ಹೊಂದಿದೆ.
ಇದನ್ನೂ ಓದಿ: ರಂಗೇರಿದ ಚುನಾವಣಾ ಅಖಾಡ, ಮತದಾರನ ಒಲಿಸಲು ನಾಯಕರ ರಣತಂತ್ರ!
ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮತ್ತು ನಗರದ ಪಶ್ಚಿಮದ ಇತರ ಪ್ರದೇಶಗಳ ಭಾಗಗಳು 72 ರಿಂದ 80 µg m-3 (ಪ್ರತಿ ಘನ ಮೀಟರ್‌ಗೆ ಮೈಕ್ರೋಗ್ರಾಂಗಳು) ವರೆಗಿನ ಹೆಚ್ಚಿನ ಪಿಎಮ್ 2.5 ಸಾಂದ್ರತೆಯನ್ನು ಹೊಂದಿವೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
ಸಂಸ್ಥೆಯು ನಗರ ಮತ್ತು ಉಪನಗರಗಳಲ್ಲಿನ ಸುಮಾರು 10 ಪ್ರತಿಶತದಷ್ಟು ರಸ್ತೆಗಳ ಮಾಲಿನ್ಯದ ಮಟ್ಟವನ್ನು ವಿಶ್ಲೇಷಿಸಿದೆ ಮತ್ತು ಮಾಲಿನ್ಯದ ಮಟ್ಟವು ಅನುಮತಿಸುವ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ಸಿಎಸ್‌ಟಿಇಪಿ ವರದಿಯನಲ್ಲಿ ಪ್ರಕಟಿಸಿದೆ.
ಯಾವ ಪ್ರದೇಶವು ಸ್ವಚ್ಚವಾದ ಗಾಳಿಯನ್ನು ಹೊಂದಿದೆ?
ಇತರ ಪ್ರದೇಶಗಳು HSR ಲೇಔಟ್, ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂಗೆ ಹೋಲಿಸಿದರೆ ಇಂದಿರಾನಗರದಲ್ಲಿ ನೀವು ಶುದ್ಧ ಗಾಳಿಯನ್ನು ನೋಡಬಹುದು ಎಂದು ಗಾಳಿಯ ಗುಣಮಟ್ಟದ ವರದಿಗಳ ಪ್ರಕಾರ ತಿಳಿದುಬಂದಿದೆ.
ಅನುಮತಿಸುವ PM 2.5 ಮಟ್ಟ ಎಂದರೇನು?
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಪಿಎಮ್ 2.5 ಗೆ ಸುರಕ್ಷಿತ ಮಿತಿ 60 µg m-3 ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನ ಅಲ್ಪಾವಧಿಯ ಪ್ರಮಾಣಿತ ಮಿತಿ ಪಿಎಮ್ 2. 5 ಸಾಂದ್ರತೆಯು 35 µgm-3 ಆಗಿದೆ.
"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಾತಿನಿಧಿಕ ನಿಯಂತ್ರಕ ವಾಯು ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲು ಅಧಿಕಾರಿಗಳು ಮುಂದಾಗಬೇಕು ಮತ್ತು ಅಸಂಘಟಿತ ಮಾಲಿನ್ಯಕಾರಕ ಕೈಗಾರಿಕೆಗಳು ಮತ್ತು ಚಟುವಟಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಹಾರ ಕ್ರಮಗಳ ಅಗತ್ಯವನ್ನು ವಿವರಿಸುತ್ತಾ, ಸಿಎಸ್‌ಟಿಇಪಿ ಯ ವಾಯು ಗುಣಮಟ್ಟದ ತಜ್ಞೆ ಡಾ ಪ್ರತಿಮಾ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನ ನಾಗರಿಕ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತ್ತೀಚೆಗೆ ಇದನ್ನು ನಿವಾರಿಸಲು ಹೊಸ ಕ್ರಮಗಳಿಗಾಗಿ 450 ಕೋಟಿ ಅನ್ನು ಸರ್ಕಾರದಿಂದ ಪಡೆದಿದೆ.
ವರದಿಯ ಲೇಖಕರಲ್ಲಿ ಒಬ್ಬರಾದ ಮತ್ತು ಸಿಎಸ್‌ಟಿಇಪಿ ಯ ಹಿರಿಯ ಸಂಶೋಧನಾ ವಿಜ್ಞಾನಿ ಡಾ.ಶ್ರೀಕಾಂತ್ ವಾಕಚೆರ್ಲಾ, ಭಾರತದಲ್ಲಿ ನಿಯಂತ್ರಕ ವಾಯು ಮಾಲಿನ್ಯದ ಮೇಲ್ವಿಚಾರಣೆಯು ಹೆಚ್ಚಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿದೆ ಎಂದು ಹೇಳಿದರು.
“ಮಾನಿಟರ್‌ಗಳು ವಿಸ್ತಾರವಾದ ನೆಟ್‌ವರ್ಕ್ ಇಲ್ಲದೆ ಪಿಎಮ್ 2.5 ನ ಸಂಕೀರ್ಣವಾದ ಪ್ರಾದೇಶಿಕ ವ್ಯತ್ಯಾಸಗಳನ್ನು ಸೆರೆಹಿಡಿಯುವುದು ಕಷ್ಟ" ಎಂದು ವಿಜ್ಞಾನಿ ಡಾ.ಶ್ರೀಕಾಂತ್ ವಾಕಚೆರ್ಲಾ ವಿವರಿಸಿದ್ದಾರೆ.
ಆದರೆ, 2019 ರ ಅಧ್ಯಯನದ ಪ್ರಕಾರ ದೆಹಲಿ-ಎನ್‌ಸಿಆರ್ ಮತ್ತು ಕಾನ್‌ಪುರ್ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ಕರ್ನಾಟಕದ ರಾಜಧಾನಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬೆಂಗಳೂರು ಐಟಿ ನಗರವಾಗಿದೆ, ಆದ್ದರಿಂದ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆಯ ಹೆಚ್ಚಳದಿಂದ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ