ಬೆಂಗಳೂರು: ಇನಿಯನ (Boyfriend( ಭೇಟಿಗಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ (Air hostess Death) ನಿಗೂಢವಾಗಿ ಸಾವನ್ನಪ್ಪಿದ್ದರು. ಇದೀಗ ಗಗನಸಖಿ ಸಾವಿನ ರಹಸ್ಯವನ್ನು ಕೋರಮಂಗಲ ಠಾಣೆಯ ಪೊಲೀಸರು (Koramangala Police) ಬೇಧಿಸಿದ್ದಾರೆ. ಮಾರ್ಚ್ 10ರಂದು ದುಬೈನ ಖಾಸಗಿ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದ ಅರ್ಚನಾ ಧೀಮನ್ ಗೆಳೆಯ ಆದೀಶ್ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದರು. ಮೃತ ಅರ್ಚನಾ ಧೀಮನ್ ಹಿಮಾಚಲ ಪ್ರದೇಶ (Himachala Pradesh) ಮೂಲದವರು. ಆದೀಶ್ ಕೇರಳ (Kerala) ಮೂಲದವನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದನು. ಕೋರಮಂಗಲದ (Koramanagal, Bengaluru) ಎಂಟನೇ ಬ್ಲಾಕ್ನಲ್ಲಿರುವ ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿ ಫ್ಲ್ಯಾಟ್ನಲ್ಲಿ ವಾಸವಾಗಿದ್ದನು. ಇದೇ ಫ್ಲ್ಯಾಟ್ನಿಂದ ಕೆಳಗೆ ಬಿದ್ದು ಅರ್ಚನಾ ಧೀಮನ್ ಸಾವನ್ನಪ್ಪಿದ್ದರು.
ಆರಂಭದಲ್ಲಿ ಅರ್ಚನಾ ಸಾವಿನ ಬಳಿಕ ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಗೆಳೆಯ ಆದೀಶ್ ಸಹ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದನು. ಆದ್ರೆ ಅರ್ಚನಾ ತಂದೆ ದೇವರಾಜ್ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಹಾಗಾದ್ರೆ ಅಂದು ರಾತ್ರಿ ಆಗಿದ್ದೇನು?
ಬೆಂಗಳೂರಿಗೆ ಬಂದಿದ್ದ ಅರ್ಚನಾ ಗೆಳೆಯ ಅದೀಶ್ ಜೊತೆ ಪಬ್ನಲ್ಲಿ ನೈಟ್ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಮದ್ಯ ಸೇವಿಸಿದ ಇಬ್ಬರು ರಾತ್ರಿ ಕೋರಮಂಗಲದ ಮನೆಗೆ ಬಂದಿದ್ದಾರೆ. ಮನೆಗೆ ಬಂದ್ಮೇಲೆ ಇಬ್ಬರ ನಡುವೆ ಜಗಳ ಉಂಟಾಗಿದೆ.
ಜಗಳದಲ್ಲಿ ಗೆಳತಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಅದೀಶ್ ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಗೆಳೆಯ ಆದೀಶ್ನನ್ನು ಬಂಧಿಸಿದ್ದಾರೆ.
700 ಕೆಜಿ ಗೋಮಾಂಸ ವಶ
ಒಂದು ಲಕ್ಷ ನಲವತ್ತು ಸಾವಿರ ಮೌಲ್ಯದ 700 ಕೆಜಿ ಗೋಮಾಂಸವನ್ನ ವಶಪಡಿಸಿಕೊಂಡಿರೋ ಘಟನೆ ಭಟ್ಕಳದ ಡೊಂಗರಪಟ್ಟಿ ಕ್ರಾಸ್ ಬಳಿ ನಡೆದಿದೆ. ಗೋಮಾಂಸ ಸಾಗಾಟಕ್ಕೆ ಬಳಿಸಿದ್ದ ವಾಹನವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್ ಅಂದರ್
ಯುವತಿಯರನ್ನು (Women) ಮುಂದಿಟ್ಟುಕೊಂಡು ಅಮಾಯಕರನ್ನು ಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು (Gang) ಪೊಲೀಸರು (Police) ಬಲೆಗೆ ಕೆಡವಿದ್ದಾರೆ. ಯುವತಿಯರ ಅರೆ ನಗ್ನ ಫೋಟೋ (Photo) ಕಳಿಸಿ ಅಮಾಯಕರನ್ನು ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ಅನ್ನು ಬೇಗೂರು ಪೊಲೀಸರು (Begur Police) ಕಾರ್ಯಚರಣೆ ನಡೆಸಿ ಬಂಧನ ಮಾಡಿದ್ದಾರೆ.
ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಬಡೋ ಅಂಡ್ ಟ್ಯಾಗಡ್ ವೆಬ್ ಸೈಟ್ ಮೂಲಕ ಗಿರಾಕಿಗಳನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.
ರೈಲ್ವೇ ನಿಲ್ದಾಣದ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ
ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಸ್ಟೇಷನ್ನ ಡ್ರಮ್ನಲ್ಲಿ ಮಹಿಳೆಯ ಶವ ಪತ್ತೆ ಆಗಿದೆ. ರೈಲ್ವೆ ನಿಲ್ದಾಣಕ್ಕೆ ಶವ ತಂದಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸುಮಾರು 31-35 ಆಸುಪಾಸಿನ ವಯಸ್ಸಿನ ಮಹಿಳೆ ಶವ ಪತ್ತೆ ಆಗಿದ್ದು, ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Couple: ಬೆಳಗ್ಗೆ ಬೇಗ ಏಳಲ್ಲ, ಅಡುಗೆ ಮಾಡಲ್ಲ; ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ
ಇನ್ನು ಆಟೋದಲ್ಲಿ ಬಂದ ಮೂವರು ಆರೋಪಿಗಳು ಶವವನ್ನ ತಂದಿಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಎಸ್.ಪಿ ಸೌಮ್ಯಲತಾ ಭೇಟಿ ಪರಿಶೀಲನೆ ನಡೆಸಿದ್ದಾರೆ.
2ನೇ ಮಹಡಿಯಿಂದ ಬಿದ್ದ ಮಗು ಸಾವು
ನಾಲ್ಕು ದಿನದ ಹಿಂದೆ ಅಪಾರ್ಟ್ಮೆಂಟ್ನ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಮಗು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿ ಕೆಂಗೇರಿ ಬಳಿಯ ಜ್ಞಾನಭಾರತಿ ಎನ್ಕ್ಲೇವ್ನ ಕಾವೇರಿ ಬ್ಲಾಕ್ನಲ್ಲಿ ದುರ್ಘಟನೆ ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ