• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ವಾಯುಪಡೆಯ ಫ್ಲೈಟ್​ ಲೆಫ್ಟಿನೆಂಟ್ ಜಗದೀಶ ಸುತಗಟ್ಟಿ ನಿಧನ; ಇಂದು ಹಾವೇರಿಯಲ್ಲಿ ಅಂತ್ಯಕ್ರಿಯೆ

ವಾಯುಪಡೆಯ ಫ್ಲೈಟ್​ ಲೆಫ್ಟಿನೆಂಟ್ ಜಗದೀಶ ಸುತಗಟ್ಟಿ ನಿಧನ; ಇಂದು ಹಾವೇರಿಯಲ್ಲಿ ಅಂತ್ಯಕ್ರಿಯೆ

ಮೃತ ಜಗದೀಶ ಸುತಗಟ್ಟಿ

ಮೃತ ಜಗದೀಶ ಸುತಗಟ್ಟಿ

2017ರ ಮಾರ್ಚ್​​ 16ರಂದು ಭಾರತೀಯ ವಾಯುಪಡೆಯ 10, ವಿಂಗ್ ಏರ್ ಫೋರ್ಸ್ ವಿಭಾಗದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದರು. ಸದ್ಯ ಅಸ್ಸಾಂನ ಜೋರ್ಹತ್ ನಲ್ಲಿ ಸೇವೆ ಸಲ್ಲಿಸುವ ಮುನ್ನ ಬೆಂಗಳೂರಿನಲ್ಲಿ ಎರಡು ವರ್ಷ ಹತ್ತು ತಿಂಗಳು ಸೇವೆ ಸಲ್ಲಿಸಿದ್ದರು. 

  • Share this:

ಹಾವೇರಿ(ನ.21): ಅಸ್ಸಾಂನ ಜೋರ್ಹತ್ ನಲ್ಲಿ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಜಗದೀಶ ಸುತಗಟ್ಟಿ(29)  ನವೆಂಬರ್ 19ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 1992ರ ನವೆಂಬರ್ 13ರಂದು ಶಿಗ್ಗಾವಿಯಲ್ಲಿ ಜನಿಸಿದ್ದ ಜಗದೀಶ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ರಾಣೆಬೆನ್ನೂರಿನ ದೇವಿಕಾ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದರು. ಬಳಿಕ ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (JJMMC) MBBS ಅಧ್ಯಯನ ಮಾಡಿದ್ದರು. 


2017ರ ಮಾರ್ಚ್​​ 16ರಂದು ಭಾರತೀಯ ವಾಯುಪಡೆಯ 10, ವಿಂಗ್ ಏರ್ ಫೋರ್ಸ್ ವಿಭಾಗದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದರು. ಸದ್ಯ ಅಸ್ಸಾಂನ ಜೋರ್ಹತ್ ನಲ್ಲಿ ಸೇವೆ ಸಲ್ಲಿಸುವ ಮುನ್ನ ಬೆಂಗಳೂರಿನಲ್ಲಿ ಎರಡು ವರ್ಷ ಹತ್ತು ತಿಂಗಳು ಸೇವೆ ಸಲ್ಲಿಸಿದ್ದರು.


ತಮಿಳುನಾಡಿಗೆ ಇಂದು ಅಮಿತ್ ಶಾ ಭೇಟಿ; ಕುತೂಹಲ ಮೂಡಿಸಿರುವ ಶಾ-ಅಳಗಿರಿ ಭೇಟಿ ವಿಷಯ


ಮೃತ ಜಗದೀಶ ಅವರು, ತಮ್ಮ ಅಜ್ಜ ಹೌಸಿಂಗ್ ಬೋರ್ಡ್ ಕಾಲನಿಯ ನಿವೃತ್ತ ಇಂಜಿನಿಯರ್ ಕರಿಯಪ್ಪ ಮಿರ್ಜಿ, ಅಜ್ಜಿ ಲಲಿತಾ, ತಂದೆ ನಿಂಗಪ್ಪ, ತಾಯಿ ಉಮಾದೇವಿ, ಸೋದರ ವೀರೇಶ ಅವರನ್ನು ಅಗಲಿದ್ದಾರೆ.


ಮೃತರ ಪಾರ್ಥಿವ ಶರೀರ ಬೆಂಗಳೂರು ಮಾರ್ಗವಾಗಿ ರಸ್ತೆ ಮೂಲಕ ಇಂದು ಶಿಗ್ಗಾಂವ ಪಟ್ಟಣಕ್ಕೆ ಆಗಮಿಸಲಿದೆ. ಈ ವೇಳೆ  ಕೋವಿಡ್-19 ನಿಯಮಾವಳಿಗಳು ಉಲ್ಲಂಘನೆಯಾಗದಂತೆ ಕ್ರಮವಹಿಸಲು ಪೋಲಿಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.


ಇನ್ನು, ನಗರದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಲು ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ.

First published: