news18-kannada Updated:September 15, 2020, 6:33 PM IST
ಅರ್ಬಾಜ್ ಖಾನ್, ಶೇಖ್ ಫಾಜಿಲ್ ಜೊತೆಗೆ ನಟಿ ಐಂದ್ರಿತಾ.
ಬೆಂಗಳೂರು (ಸೆಪ್ಟೆಂಬರ್ 15); ಕುಖ್ಯಾತ ಡ್ರಗ್ಸ್ ಮಾಫಿಯಾ ಜೊತೆಗೆ ಸ್ಯಾಂಡಲ್ವುಡ್ ನಂಟು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಪ್ರಕರಣದ ಬೆನ್ನುಬಿದ್ದಿರುವ ಪೊಲೀಸರು ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಸಾಲು ಸಾಲು ಆರೋಪಿಗಳನ್ನು ಕಂಬಿ ಹಿಂದೆ ಕೂರಿಸುತ್ತಿದ್ದಾರೆ. ಅಲ್ಲದೆ, ತೀವ್ರ ವಿಚಾರಣೆಗೂ ಮುಂದಾಗಿದ್ದಾರೆ. ಆದರೆ, ಈ ವಿಚಾರದಲ್ಲಿ ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಎಂದರೆ ಸ್ಯಾಂಡಲ್ವುಡ್ ಸ್ಟಾರ್ ಜೋಡಿಯಾದ ದಿಗಂತ್ ಮತ್ತು ಐಂದ್ರಿತಾ ರೇ. ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್ ಹಾಗೂ ರಾಗಿಣಿ ಜೊತೆ ಐಂದ್ರಿತಾ ರೇ ಇರುವ ಫೋಟೋಗಳು ಇತ್ತೀಚೆಗೆ ಭಾರೀ ವೈರಲ್ ಆದ ಹಿನ್ನೆಲೆಯಲ್ಲಿ ಐಂದ್ರಿತಾ ರೇ ಮತ್ತು ದಿಗಂತ್ ಇಬ್ಬರಿಗೂ ನೋಟೀಸ್ ನೀಡಿರುವ ಸಿಸಿಬಿ ಪೊಲೀಸರು ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಆದರೆ, ಈ ನಡುವೆಯೇ ಟುಮಾರೋಲ್ಯಾಂಡ್ ಪಾರ್ಟಿಯಲ್ಲಿ ನಟಿ ಐಂದ್ರಿತಾ ಭಾಗವಹಿಸಿದ್ದೂ ಸಹ ಅವರಿಗೆ ಮುಳುವಾಯ್ತಾ? ಎಂಬ ಅನುಮಾನವೂ ಇದೀಗ ಎಲ್ಲೆಡೆ ಮೂಡಿದೆ.
ಟುಮಾರೋಲ್ಯಾಂಡ್ ಪಾರ್ಟಿಯಲ್ಲಿ ಐಂದ್ರಿತಾ:ನಟಿ ಐಂದ್ರಿತಾಗೆ ತಮ್ಮ ಪಾರ್ಟಿ ಪ್ರೇಮವೇ ಮುಳುವಾಯ್ತಾ? ಎಂಬ ಅನುಮಾನ ಇದೀಗ ಎಲ್ಲೆಡೆ ಮನೆ ಮಾಡಿದೆ. ಏಕೆಂದರೆ ಬೆಲ್ಜಿಯಂನ ಟುಮಾರೋಲ್ಯಾಂಡ್ನಲ್ಲಿ ಪ್ರತಿ ವರ್ಷ ನಡೆಯುವ ಮ್ಯೂಸಿಕ್ ಫೆಸ್ಟಿವಲ್ ಪಾರ್ಟಿಗೆ ನಟಿ ಐಂದ್ರಿತಾ ರೇ ಕಳೆದ 2014ರಲ್ಲೇ ಭಾಗವಹಿಸಿದ್ದರು. ಈ ಮ್ಯೂಸಿಕ್ ಪಾರ್ಟಿಯಲ್ಲಿ ಗಾಂಜಾ ಸೇವನೆಗೆ ಕಾನೂನಿನ ಅಡ್ಡಿಯಿಲ್ಲ. ಆದರೆ, ಬೇರೆ ರೀತಿಯ ಮಾದಕವಸ್ತುಗಳು ಅಲ್ಲಿ ಬ್ಯಾನ್ ಮಾಡಲಾಗಿದೆ.

ಟುಮಾರೋಲ್ಯಾಂಡ್ ಪಾರ್ಟಿಯಲ್ಲಿ ಐಂದ್ರಿತಾ.
ಆದರೂ, ಕೆಲವರು ಕಾನೂನು ಬಾಹೀರವಾಗಿ ತೆಗೆದುಕೊಂಡ ಡ್ರಗ್ ಓವರ್ಡೋಸ್ನಿಂದ ಸಾವಿಗೀಡಾದ ಘಟನೆಗಳೂ ನಡೆದಿವೆ. ಇಂತಹ ಮ್ಯೂಸಿಕ್ ಫೆಸ್ಟ್ನಲ್ಲಿ ನಟಿ ಐಂದ್ರಿತಾ ರೇ ಭಾಗಿಯಾಗಿರುವುದೂ ಸಹ ಪೊಲೀಸರು ಅವರ ತನಿಖೆಗೆ ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಲ್ಲದೆ, ಶ್ರೀಲಂಕಾದ ಕೊಲೊಂಬೋದಲ್ಲಿರುವ ಕ್ಯಾಸಿನೋದಲ್ಲೂ ಅವರು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಶೇಖ್ ಫಾಜಿಲ್ ಜೊತೆಗೆ ಕಾಣಿಸಿಕೊಂಡಿರುವುದು ಇದೀಗ ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಐಂದ್ರಿತಾಗೆ ಶೇಖ್ ಫಾಜಿಲ್ ಪರಿಚಯ ಹೇಗಾಯ್ತು?
ನಟಿ ಐಂದ್ರಿತಾ ರೇ 2017ರಲ್ಲೇ ಶೇಖ್ ಫಾಜಿಲ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದರು. ಮೈ ಜರೂರ್ ಆವುಂಗಾ ಐಂದ್ರಿತಾ ಅವರ ಮೊದಲ ಹಿಂದೆ ಚಿತ್ರ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಚಿತ್ರದ ನಾಯಕ. ಈ ಚಿತ್ರದ ಪ್ರಚಾರದ ಸಮಯದಲ್ಲಿ ಅರ್ಬಾಜ್ ಖಾನ್ ಮೂಲಕ ಐಂದ್ರಿತಾಗೆ ಶೇಖ್ ಫಾಜಿಲ್ ಪರಿಚಯವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Aindrita Ray: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ: ಐಂದ್ರಿತಾ-ದಿಗಂತ್ಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು..!
ಅದೇ ವರ್ಷ ಅರ್ಬಾಜ್ ಹಾಗೂ ಐಂದ್ರಿತಾ ಶ್ರೀಲಂಕಾಗೂ ತೆರಳಿದ್ದರು. ಶ್ರೀಲಂಕಾದ ಕೊಲೊಂಬೊದಲ್ಲಿರುವ ಬಾಲೀಸ್ ಕೆಸಿನೋ ಶೇಖ್ ಫಾಜಿಲ್ ಒಡೆತನದ್ದು. ಇಬ್ಬರೂ ಅಲ್ಲೇ ವಾಸ್ಥವ್ಯ ಹೂಡಿದ್ದರು. ಅರ್ಬಾಜ್ ಖಾನ್ ಮತ್ತು ಶೇಖ್ ಫಾಜಿಲ್ ಇಬ್ಬರೂ ಗೆಳೆಯರು. ಆ ಬಳಿಕ ಹಲವು ಬಾರಿ ಐಂದ್ರಿತಾ ಶೇಖ್ ಫಾಜಿಲ್ ನನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನಲ್ಲೂ ಶೇಖ್ ಫಾಜಿಲ್, ಐಂದ್ರಿತಾ, ಅರ್ಬಾಜ್, ಸಂಜನಾ, ಸೋನು ಸೂದ್, ಗುಲ್ಶನ್ ಗ್ರೋವರ್ ಹಾಗೂ ಸೊಹೈಲ್ ಖಾನ್ ಹಲವು ಬಾರಿ ಪಾರ್ಟಿ ಮಾಡಿದ್ದಾರೆ. ಆದರೆ, ಈ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜಾಗಿತ್ತಾ? ಹಲವು ಬಾರಿ ಶ್ರೀಲಂಕಾ, ಬೆಂಗಳೂರಿನಲ್ಲಿ ಐಂದ್ರಿತಾ ಶೇಖ್ ಫಾಜಿಲ್ ಭೇಟಿಯಾಗಲು ಕಾರಣವೇನು? ಹೀಗೆ ಐಂದ್ರಿತಾಗೆ ಹಲವು ಪ್ರಶ್ನೆಗಳನ್ನು ಕೇಳಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದರೆ ಎಂದು ಹೇಳಲಾಗುತ್ತಿದೆ.
Published by:
MAshok Kumar
First published:
September 15, 2020, 6:29 PM IST